ಶಾಲಿವಾಹನ ಶಕ 1948ರ ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸದ ಕೃಷ್ಣ ಪಕ್ಷದ ದ್ವಿತೀಯಾ ತಿಥಿ ಗುರುವಾರದ ದಿನ. ಇಂದು ಆಪತ್ತಿನ ಸೂಚನೆಗಳ ಜೊತೆಗೆ ಭೋಗವಸ್ತುಗಳ ಖರೀದಿ, ಲಾಭದ ಪ್ರಯತ್ನ, ಪ್ರೀತಿಗೆ ಉಡುಗೊರೆ, ಅಪಪ್ರಚಾರದಿಂದ ಸಂಕಟ, ನಿರ್ಲಕ್ಷ್ಯದಿಂದ ಬೇಸರ ಹಾಗೂ ಉದ್ಯೋಗದಲ್ಲಿ ತೃಪ್ತಿ ಕಾಣಬಹುದಾದ ದಿನವಾಗಿದೆ. ಪ್ರತಿಯೊಂದು ರಾಶಿಯವರಿಗೂ ವಿಭಿನ್ನ ಫಲಾನುಭವಗಳಿವೆ.
ಮೇಷ ರಾಶಿ
ಇಂದು ನಿಮ್ಮ ಮನದ ಕೋಪವನ್ನು ಸರಿಯಾಗಿ ವ್ಯಕ್ತಪಡಿಸಲು ಸಾಧ್ಯವಾಗದೆ ಅಸಮಾಧಾನ ಉಂಟಾಗಬಹುದು. ಆದರೆ ನೀವು ಎದುರು ನೋಡುತ್ತಿದ್ದ ಸ್ಥಾನಮಾನ ದೊರಕುವ ಸಾಧ್ಯತೆ ಇದೆ. ಕಷ್ಟಕಾಲದಲ್ಲಿ ಆಪ್ತರ ಬೆಂಬಲ ಸಿಗಲಿದೆ. ಪ್ರಭಾವಿಗಳ ಒತ್ತಡ ಎದುರಾದರೂ ಆತ್ಮವಿಶ್ವಾಸ ಕಳೆದುಕೊಳ್ಳದೆ ಮುಂದುವರಿಯಿರಿ. ಇಷ್ಟಪಟ್ಟವರೊಂದಿಗೆ ಸಮಯ ಕಳೆಯುವಿರಿ. ಹೊಸ ವಸ್ತು ಖರೀದಿ ಸಂತೋಷ ತರುತ್ತದೆ.
ವೃಷಭ ರಾಶಿ
ಯಾರ ಮಾತೂ ಸಾಂತ್ವನ ನೀಡದ ದಿನ. ಹಿರಿಯರ ಸಲಹೆ ಮೂಲಕ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ. ಬಾಕಿ ಹಣ ವಸೂಲಿಯಾಗಬಹುದು. ಐಷಾರಾಮಿ ವಸ್ತುಗಳ ಖರೀದಿ ಸಾಧ್ಯ. ಆದರೆ ಹಣಕಾಸಿನ ವ್ಯವಹಾರಗಳಲ್ಲಿ ಜಾಗ್ರತೆ ಅಗತ್ಯ. ಕೆಲವು ವಿಚಾರಗಳಲ್ಲಿ ಸಮಯ ವ್ಯರ್ಥವಾಗಬಹುದು. ಕಲಾವಿದರಿಗೆ ಸನ್ಮಾನ ಯೋಗವಿದೆ.
ಮಿಥುನ ರಾಶಿ
ಹೂಡಿಕೆ ವಿಷಯದಲ್ಲಿ ಎಚ್ಚರಿಕೆಯಿಂದಿರಿ. ಆರ್ಥಿಕ ನೆರವು ಅಪೇಕ್ಷಿತ ಮಟ್ಟದಲ್ಲಿ ಸಿಗದಿರಬಹುದು.. ಅತಿಥಿಗಳ ಆಗಮನ ಸಂತೋಷ ತರಲಿದೆ. ಸಂಗಾತಿಯೊಂದಿಗೆ ಸಣ್ಣ ವಿಷಯಕ್ಕೂ ವಾಗ್ವಾದ ಸಾಧ್ಯ. ಕಳೆದುಹೋಗುವ ವಸ್ತುಗಳ ಬಗ್ಗೆ ಜಾಗ್ರತೆ ಅಗತ್ಯ. ಆತುರದ ನಿರ್ಧಾರ ಬೇಡ.
ಕರ್ಕಾಟಕ ರಾಶಿ
ನಿರೀಕ್ಷಿಸಿದ್ದ ಕೆಲಸಗಳು ಪೂರ್ಣಗೊಳ್ಳುತ್ತವೆ. ದಾಖಲೆ ಸಂಬಂಧಿತ ಕಾರ್ಯಗಳಲ್ಲಿ ಅನುಕೂಲ. ಮನೆ ಆಸ್ತಿ ವಿಚಾರದಲ್ಲಿ ಸಣ್ಣ ಮಾತಿನ ಚರ್ಚೆಗಳು ನಡೆಯಬಹುದು. ನಿಮ್ಮ ಮೌನವನ್ನು ಇತರರು ತಪ್ಪಾಗಿ ಅರ್ಥೈಸಬಹುದು. ಕಾರ್ಯದಲ್ಲಿ ಸ್ಪಷ್ಟತೆ ಇರಲಿ. ಸಂಗಾತಿಯ ಕೋಪವನ್ನು ಶಾಂತಗೊಳಿಸುವಿರಿ.
ಸಿಂಹ ರಾಶಿ
ಪ್ರೀತಿಪಾತ್ರರ ಭೇಟಿ ಸಂತೋಷ ತರುತ್ತದೆ. ಅವಕಾಶಗಳನ್ನು ಕೈಚೆಲ್ಲಬೇಡಿ. ಮಾತುಗಳಲ್ಲಿ ನಿಯಂತ್ರಣ ಇರಲಿ. ಸಾರ್ವಜನಿಕವಾಗಿ ಗೌರವ ಹೆಚ್ಚಲಿದೆ. ಮಕ್ಕಳಿಂದ ಸಹಾಯ ಸಿಗಬಹುದು. ವಿದ್ಯುತ್ ಉಪಕರಣ ವ್ಯಾಪಾರಿಗಳಿಗೆ ಲಾಭದ ದಿನ.
ಕನ್ಯಾ ರಾಶಿ
ಎಲ್ಲರೊಂದಿಗೆ ಸಮತೋಲನದಿಂದ ವರ್ತಿಸುವಿರಿ. ಕಾರ್ಯಗಳು ಚುರುಕಾಗಿ ಸಾಗುತ್ತವೆ. ಸಂಬಂಧಿಕರ ಭೇಟಿ ಸಾಧ್ಯ. ಹಣಕಾಸಿನ ವಿಚಾರದಲ್ಲಿ ಅಪವಾದ ಕೇಳಿಬರಬಹುದು. ಸಂಗಾತಿಯೊಂದಿಗೆ ಸಂವಹನ ಕೊರತೆ ಕಾಣಿಸಬಹುದು. ಲಾಭದ ಒಂದು ಭಾಗವನ್ನು ದಾನ ಮಾಡುವ ಯೋಗವಿದೆ.
ತುಲಾ ರಾಶಿ
ಅಮೂಲ್ಯ ದಾಖಲೆಗಳ ಬಗ್ಗೆ ಎಚ್ಚರಿಕೆ ಅಗತ್ಯ. ಟೀಕೆಗಳನ್ನು ನಿರ್ಲಕ್ಷಿಸಿ. ಶುಭಕಾರ್ಯಗಳಲ್ಲಿ ಭಾಗವಹಿಸುವಿರಿ. ಬೇಡದ ವಸ್ತುಗಳನ್ನು ದಾನ ಮಾಡುವಿರಿ. ಆರೋಗ್ಯದಲ್ಲಿ ಸೊಂಟನೋವು ಕಾಡಬಹುದು. ಸಂಗಾತಿಯೊಂದಿಗೆ ಅಸಮಾಧಾನ ಉಂಟಾಗುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ
ಆಲೋಚನೆಗಳಲ್ಲಿ ಬದಲಾವಣೆ ಕಾಣಲಿದೆ. ವೃತ್ತಿಯಲ್ಲಿ ಪರಿಣತಿ ಪ್ರದರ್ಶಿಸುವ ಸಮಯ. ಕೆಲಸಗಳಲ್ಲಿ ವಿಳಂಬ ಉಂಟಾದರೂ ಶಿಸ್ತನ್ನು ಕಾಪಾಡಿ. ಹೊಸ ಖರೀದಿ ಮುಂದೂಡಿ. ಮಾರ್ಗದರ್ಶನ ಕೇಳಿ ಬರುವವರಿಗೆ ಸಹಾಯ ಮಾಡುವಿರಿ.
ಧನು ರಾಶಿ
ಮೇಲಾಧಿಕಾರಿಗಳೊಂದಿಗೆ ತಪ್ಪು ಕಲ್ಪನೆ ನಿವಾರಿಸಲು ಪ್ರಯತ್ನಿಸಿ. ಆರೋಗ್ಯದ ಕಡೆ ಗಮನ ಹರಿಸಿ. ಕುಟುಂಬದಲ್ಲಿ ನಿಮ್ಮ ಪ್ರಾಮುಖ್ಯತೆ ಹೆಚ್ಚಾಗಬಹುದು.. ಉದ್ಯೋಗ ಬದಲಾವಣೆ ಯೋಚನೆ ಬರಬಹುದು. ಮನೋವ್ಯಥೆ ಹಂಚಿಕೊಳ್ಳುವಿರಿ.
ಮಕರ ರಾಶಿ
ಹೊಂದಾಣಿಕೆ ಉತ್ತಮವಾಗಿರುತ್ತದೆ. ದೂರವಾದ ಸಂಬಂಧ ಪುನಃ ಜೋಡಿಸಿಕೊಳ್ಳುವಿರಿ. ರಾಜಕೀಯ ವ್ಯಕ್ತಿಗಳ ಸಂಪರ್ಕ ಸಾಧ್ಯ. ದೈವಭಕ್ತಿ ಹೆಚ್ಚಾಗಬಹುದು. ಮಹಿಳೆಯರಲ್ಲಿ ಸಹನಶಕ್ತಿ ಕುಂದಬಹುದು. ನಿಮ್ಮ ಅಭಿಪ್ರಾಯವನ್ನು ಸಮರ್ಪಕವಾಗಿ ಹೇಳಿ.
ಕುಂಭ ರಾಶಿ
ಪ್ರೀತಿಪಾತ್ರರಿಗೆ ಆರ್ಥಿಕ ನೆರವು ನೀಡುವಿರಿ. ಸ್ನೇಹ ಬಲಗೊಳ್ಳುತ್ತದೆ. ನ್ಯಾಯಾಲಯ ವ್ಯವಹಾರ ಮುಕ್ತಾಯವಾಗುವ ಸೂಚನೆ. ಅಮೂಲ್ಯ ವಸ್ತು ಲಾಭ ಸಿಗಬಹುದು. ತಪ್ಪು ಸುದ್ದಿಗಳಿಂದ ದೂರವಿರಿ. ಸಂಗಾತಿಯ ಬೇಸರ ನಿವಾರಣೆಯಾಗಲಿದೆ.
ಮೀನ ರಾಶಿ
ಕಠಿಣ ಪರಿಶ್ರಮಕ್ಕೆ ಫಲ ದೊರೆಯುತ್ತದೆ. ಬೇಜವಾಬ್ದಾರಿ ನಿರ್ಧಾರ ತಪ್ಪಿಸಿ. ಅನುಭವಿ ಸಲಹೆ ಅನುಸರಿಸಿ. ಅಡ್ಡಿಗಳು ನಿವಾರಣೆಯಾಗುತ್ತವೆ. ಭೂಮಿ ವ್ಯವಹಾರದಲ್ಲಿ ಜಯ ಸಾಧ್ಯ. ಸರ್ಕಾರಿ ಕೆಲಸಕ್ಕಾಗಿ ಓಡಾಟ ಇರಬಹುದು. ಕೆಲಸದಲ್ಲಿ ಗೊಂದಲ ಇದ್ದರೂ ಕೊನೆಗೆ ಫಲ ಅನುಕೂಲಕರ.





