ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶರದ್ ಋತುವಿನ ಕಾರ್ತಿಕ ಮಾಸದ ಕೃಷ್ಣ ಪಕ್ಷದ ಪಂಚಮೀ ತಿಥಿ ಸೋಮವಾರ. ಇಂದು ಮಾತಿನಿಂದ ಕಷ್ಟ, ಮನೆಯಲ್ಲಿ ಬೇಸರ, ಲೋಭದಿಂದ ನಷ್ಟ, ಬಲಷ್ಠರ ವಿರೋಧ, ಪ್ರೇಮದಲ್ಲಿ ನಿರಾಸಕ್ತಿ, ಭೂಮಿ ವ್ಯವಹಾರದಲ್ಲಿ ವಿಶೇಷ ಏರುಪೇರುಗಳು ಕಾಣಬಹುದು.
ಪಂಚಾಂಗ ವಿವರ: ವಿಶ್ವಾವಸು ಸಂವತ್ಸರ, ಶರದ್ ಋತು, ಚಾಂದ್ರ ಮಾಸ – ಕಾರ್ತಿಕ, ಸೌರ ಮಾಸ – ತುಲಾ, ಮಹಾನಕ್ಷತ್ರ – ವಿಶಾಖಾ, ವಾರ – ಸೋಮವಾರ, ಪಕ್ಷ – ಕೃಷ್ಣ, ತಿಥಿ – ಪಂಚಮೀ, ನಿತ್ಯ ನಕ್ಷತ್ರ – ಪುನರ್ವಸು, ಯೋಗ – ಸಿದ್ಧ, ಕರಣ – ಭದ್ರ. ಸೂರ್ಯೋದಯ: 06:17 ಬೆಳಗ್ಗೆ, ಸೂರ್ಯಾಸ್ತ: 05:49 ಸಾಯಂಕಾಲ. ಶುಭಾಶುಭ ಕಾಲ: ರಾಹುಕಾಲ – 07:44–09:10, ಗುಳಿಕಕಾಲ – 1.20–2.59, ಯಮಗಂಡ – 10.37–12:13.
ಮೇಷ ರಾಶಿ
ಅನಾರೋಗ್ಯದಿಂದ ಮುಕ್ತಿ ಸಿಕ್ಕಂತೆ ಸಂತೋಷ. ಆದರೆ ಮಾತಿನಲ್ಲಿ ಎಚ್ಚರ, ಸುಳ್ಳು ಆರೋಪ ಬರಬಹುದು. ಹಿತಶತ್ರುಗಳು ಸಿಕ್ಕುಹಾಕಲು ಪ್ರಯತ್ನಿಸುತ್ತಾರೆ. ಧಾರ್ಮಿಕ ಕಾರ್ಯಗಳಿಂದ ಸಂಕಷ್ಟ ನಿವಾರಣೆ. ಸರ್ಕಾರಿ ಕೆಲಸಕ್ಕೆ ಪ್ರಭಾವಿ ಸಹಾಯ. ಕೋಪ ನಿಯಂತ್ರಿಸಿ, ಸಂಗಾತಿಯೊಂದಿಗೆ ಪ್ರೀತಿ ವಹಿಸಿ.
ವೃಷಭ ರಾಶಿ
ಪ್ರೀತಿ ತೋರಿಕೆಯಲ್ಲಿ ಗೊಂದಲ. ಮಿತ್ರನ ವಂಚನೆ ಬಯಲಾಗಬಹುದು. ಸಣ್ಣ ನಷ್ಟಕ್ಕೂ ಬೇಸರ. ಮನೆಯ ಕೆಲಸ, ಮಕ್ಕಳ ಉದ್ಯೋಗಕ್ಕೆ ಪ್ರಯತ್ನ. ಹಣದ ಹರಿವು ಸಾಮಾನ್ಯ. ಸಂಗಾತಿಯೊಂದಿಗೆ ವಾಗ್ವಾದ ತಪ್ಪಿಸಿ.
ಮಿಥುನ ರಾಶಿ
ಭೂಮಿ ಕಲಹಕ್ಕೆ ಸಂಧಾನ. ಮಾತು ಕೇಳದಿದ್ದರೆ ಬೇಸರ. ಬಂಗಾರ ಹೂಡಿಕೆ, ತಾಯಿಯ ಸಹಾಯ. ಯಂತ್ರ ಮಾರಾಟದಲ್ಲಿ ನಷ್ಟ ಸಾಧ್ಯ. ಅತಿಥಿಗಳ ಆಗಮನ.
ಕರ್ಕಾಟಕ ರಾಶಿ
ಸಮಾರಂಭ ತಯಾರಿ. ಉದ್ಯೋಗ ಬದಲಾವಣೆ ಸಾಧ್ಯ. ಅಪರಿಚಿತರ ಮಾತು ನಂಬದಿರಿ. ಪ್ರೇಮದಲ್ಲಿ ಸಂತೋಷ. ಲೋಭದಿಂದ ಸಂಪತ್ತು ನಷ್ಟವಾಗಬಹುದು. ಚಂಚಲತೆ ಕಡಿಮೆಯಾಗುತ್ತದೆ.
ಸಿಂಹ ರಾಶಿ
ಅನ್ವೇಷಣೆಗೆ ಉತ್ತಮ ದಿನ. ಕೃಷಿ, ಪಾಲುದಾರಿಕೆಯಲ್ಲಿ ತಾಳ್ಮೆ. ವಿವಿಧ ಆದಾಯ, ಉದ್ಯೋಗ ಲಾಭ. ಆಲಸ್ಯ ತಪ್ಪಿಸಿ. ಭೂಮಿಯಿಂದ ಸಂಪತ್ತು ಸಾಧ್ಯ.
ಕನ್ಯಾ ರಾಶಿ
ಅನಪೇಕ್ಷಿತ ಭೇಟಿ. ಸಣ್ಣ ಕೆಲಸಕ್ಕೆ ಹೆಚ್ಚು ಸಮಯ. ದಾಂಪತ್ಯ ಸುಖ, ತಾಯಿ-ತಂದೆ ಸೇವೆ. ಹಿತಶತ್ರುಗಳನ್ನು ಸರಿಪಡಿಸಿ. ಮಕ್ಕಳ ವಿವಾಹ ಚಿಂತೆ ದೂರ.
ತುಲಾ ರಾಶಿ
ವಿದ್ಯಾರ್ಥಿಗಳಿಗೆ ಧನಸಹಾಯ. ಸಂಗಾತಿ ಬಾಂಧವ್ಯ ಬಲಗೊಳ್ಳುತ್ತದೆ. ವಿಶ್ರಾಂತಿ ಅಗತ್ಯ. ದಾನದಿಂದ ಪುಣ್ಯ. ಮಾನಸಿಕ ಆರೋಗ್ಯಕ್ಕೆ ಗಮನ.
ವೃಶ್ಚಿಕ ರಾಶಿ
ಹೋರಾಟ ಪ್ರಬಲ. ಉದ್ಯಮದಲ್ಲಿ ಬದಲಾವಣೆ. ಪ್ರೀತಿ ಹಂಚಿಕೆಯಲ್ಲಿ ಕಷ್ಟ. ಸ್ನೇಹಿತರೊಂದಿಗೆ ಗೊಂದಲ. ಸಂಗಾತಿ ಆರೋಗ್ಯಕ್ಕೆ ಚಿಕಿತ್ಸೆ.
ಧನು ರಾಶಿ
ಅಂತಶ್ಶಕ್ತಿ ಬಯಲಾಗುತ್ತದೆ. ಖರೀದಿ ಆದಾಯಾನುಸಾರ. ಸಾಮಾಜಿಕ ಮನ್ನಣೆ. ಸ್ನೇಹಿತರೊಂದಿಗೆ ಸುತ್ತಾಟ. ಹಠ ಕಡಿಮೆ ಮಾಡಿ.
ಮಕರ ರಾಶಿ
ವಿಚಾರ ಮಂಡನೆಯಲ್ಲಿ ಯಶಸ್ಸು. ತಾಂತ್ರಿಕತೆ ಇಷ್ಟ. ಸಾಲ ವಸೂಲಿಗೆ ತಿರುಗಾಟ. ಮನೆಯ ಕೆಲಸ ಪೂರ್ಣ. ಆತ್ಮವಂಚನೆ ತಪ್ಪಿಸಿ.
ಕುಂಭ ರಾಶಿ
ಸಾರ್ವಜನಿಕ ಸಮಾರಂಭಕ್ಕೆ ಸಿದ್ಧತೆ. ಸ್ವತಂತ್ರ ಸಾಧನೆ ಇಚ್ಛೆ. ನಂಬಿಕೆ ಅನಿವಾರ್ಯ. ಪ್ರಣಯದಲ್ಲಿ ಆಸಕ್ತಿ. ಸಂಪತ್ತಿಗೆ ಶ್ರಮ.
ಮೀನ ರಾಶಿ
ಮಕ್ಕಳ ವೈವಾಹಿಕ ಚಿಂತೆ. ಸ್ಥಿರಮತಿಯಿಂದ ಕಷ್ಟ ನಿವಾರಣೆ. ಸಂಗಾತಿಗೆ ಉಡುಗೊರೆ. ಮೌನವೇ ಹಿತ. ವಸ್ತು ಅಧಿಕಾರ ಕಳೆದುಕೊಳ್ಳಬೇಡಿ.





