ಪಂಚಾಂಗ: ವಿಶ್ವಾವಸು ಸಂವತ್ಸರ, ಆಶ್ವಯುಜ ಮಾಸ, ತ್ರಯೋದಶೀ, ಹಸ್ತಾ ನಕ್ಷತ್ರ, ಭಾನುವಾರ. ರಾಹುಕಾಲ: 16:29 – 17:57.
ಮೇಷ (Aries): ಉದ್ಯೋಗ ಮಂದಗತಿಯಲ್ಲಿದೆ. ಮಾನಸಿಕ ಒತ್ತಡ ಕೆಲಸಗಳನ್ನು ಹಿಂದಿಕ್ಕಬಹುದು. ಹಿರಿಯರ ಗೌರವಿಸಿ. ಪ್ರಯಾಣದಿಂದ ಆಯಾಸ. ವಿದ್ಯಾಭ್ಯಾಸಕ್ಕೆ ಪ್ರಾಮುಖ್ಯ ನೀಡಿ. ಅರ್ಥಿಕ ಸ್ಥಿತಿ ಸ್ವಲ್ಪ ಒತ್ತಡದಲ್ಲಿದೆ.
ವೃಷಭ (Taurus): ವೃತ್ತಿಯಲ್ಲಿ ಯಶಸ್ಸು ಮತ್ತು ಬಂಧುಗಳ ಸಹಾಯ ದೊರೆಯಬಹುದು. ಆದರೆ ಕೆಲಸದ ಒತ್ತಡ ಹೆಚ್ಚು. ಆರೋಗ್ಯದತ್ತ ಗಮನ ಹರಿಸಿ, ಮನೆಯಲ್ಲೇ ಔಷಧಿ ತೆಗೆದುಕೊಳ್ಳಬಹುದು. ಖರ್ಚು ನಿಯಂತ್ರಣದ ಅಗತ್ಯವಿದೆ.
ಮಿಥುನ (Gemini): ಶತ್ರುಗಳ ಉಪಟಳ ಕಡಿಮೆಯಾಗಲಿದೆ. ಕಾರ್ಯನಿಷ್ಠೆಯಿಂದ ಮಾಡಿದ ಕೆಲಸ ಫಲಿಸಲಿದೆ. ಮಕ್ಕಳಿಂದ ಶುಭ ವಾರ್ತೆ ಬರಬಹುದು. ಸಿಟ್ಟನ್ನು ಅದುಪಿಸಿಕೊಳ್ಳುವುದು ಅಗತ್ಯ. ಸಾಹಸಕಾರ್ಯಗಳನ್ನು ತಡೆಗಟ್ಟಿ.
ಕರ್ಕಾಟಕ (Cancer): ಮನೆಯವರ ಟೀಕೆಗಳು ಮನನೊಯಿಸುವಂತಿವೆ. ಇತರರಿಗೆ ನಿಮ್ಮ ಪ್ರಭಾವದಿಂದ ಸಹಾಯ ಮಾಡಬಹುದು. ಆಕಸ್ಮಿಕ ಧನಲಾಭ ಸಿಗಬಹುದು. ಸಂಗಾತಿಯೊಂದಿಗೆ ಅನಗತ್ಯ ಕಲಹ ತಪ್ಪಿಸಿ.
ಸಿಂಹ (Leo): ಮಕ್ಕಳ ಕ್ರಿಯಾಶೀಲತೆಯನ್ನು ಸಕಾರಾತ್ಮಕವಾಗಿ ಮಾರ್ಗನಿರ್ದೇಶನ ಮಾಡಿ. ಅಧಿಕಾರ ಹಿಡಿತ ಸಡಿಲಗೊಳ್ಳಬಹುದು. ಆರೋಗ್ಯ ಮತ್ತು ಹಣಕಾಸು ವಿಚಾರದಲ್ಲಿ ಜಾಗರೂಕರಾಗಿರಿ. ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ಅಗತ್ಯ.
ಕನ್ಯಾ (Virgo): ಆರ್ಥಿಕ ಯೋಜನೆ ಮಾಡುವ ಅಗತ್ಯವಿದೆ. ಹೊಸ ಕಾರ್ಯಗಳನ್ನು ಪ್ರಾರಂಭಿಸಲು ಉತ್ತಮ ದಿನ. ನಿಮ್ಮನ್ನು ಬಳಸಿಕೊಳ್ಳಲು ಯತ್ನಿಸುವವರ ಬಗ್ಗೆ ಎಚ್ಚರಿಕೆ. ಆಪ್ತರೊಂದಿಗೆ ಮಾತುಕತೆ ಸೀಮಿತವಾಗಿರಲಿ. ದೂರ ಪ್ರಯಾಣ ತಪ್ಪಿಸಿ.
ತುಲಾ (Libra): ಭಾವನಾತ್ಮಕವಾಗಿ ಸಂಯಮ ಬೇಕು. ಸ್ಥಿರಾಸ್ತಿಯಿಂದ ಲಾಭದ ಸಾಧ್ಯತೆ ಇದೆ. ಸ್ನೇಹಿತರ ಸಹವಾಸದಿಂದ ಅಪವಾದ ಬರಬಹುದು. ಮಕ್ಕಳಿಂದ ಸಂತೋಷ. ಅನಗತ್ಯ ಖರ್ಚು ತಪ್ಪಿಸಿ. ಪ್ರಯಾಣದಲ್ಲಿ ಜಾಗರೂಕತೆ.
ವೃಶ್ಚಿಕ (Scorpio): ಪ್ರಭಾವಿತರ ಬೆಂಬಲದಿಂದ ಕಾರ್ಯ ಸಾಧಿಸಬಹುದು. ಆಲಸ್ಯದಿಂದ ಅವಕಾಶ ಕಳೆದುಕೊಳ್ಳಬೇಡಿ. ಹಳೆಯ ಸ್ನೇಹಿತರ ಬಗ್ಗೆ ಅಸಮಾಧಾನ ಇರಬಹುದು. ಕುಟುಂಬದೊಂದಿಗೆ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು. ದಾಂಪತ್ಯ ಜೀವನದಲ್ಲಿ ಹೊಂದಾಣಿಕೆ ಅಗತ್ಯ.
ಧನು (Sagittarius): ಹಣಕಾಸು ವ್ಯವಸ್ಥೆ ಮಾಡುವ ಅಗತ್ಯವಿದೆ. ಅನುಭವಿಗಳಿಂದ ಬಜೆಟ್ ನಿರ್ವಹಣೆ ಕಲಿಯಬಹುದು. ಹಳೆಯ ವಸ್ತುಗಳ ಮಾರಾಟದ ಅವಕಾಶ. ಸೋಲನ್ನು ಸಕಾರಾತ್ಮಕವಾಗಿ ಸ್ವೀಕರಿಸಿ. ಮಕ್ಕಳ ಶಿಕ್ಷಣದ ಬಗ್ಗೆ ಚಿಂತೆ ಇರಬಹುದು.
ಮಕರ (Capricorn): ಹಿಂದಿನ ಹೂಡಿಕೆಯಿಂದ ಲಾಭ ಉಂಟಾಗಬಹುದು. ಸ್ವಂತ ವ್ಯವಸ್ಥೆಯಲ್ಲಿ ಯಶಸ್ಸು. ಮನೆ ಬದಲಾವಣೆಯ ಅವಶ್ಯಕತೆ ಉಂಟಾಗಬಹುದು. ಕೆಲಸದ ಒತ್ತಡದಿಂದ ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಗದಿರಬಹುದು. ನಿದ್ರೆ ಸುಖದಾಯಕವಾಗಿದೆ.
ಕುಂಭ (Aquarius): ವಿಶ್ರಾಂತಿ ಮತ್ತು ಯೋಜನೆಗಳ ನಡುವೆ ಸಮತೋಲನ ಬೇಕು. ಸ್ಥಿರಾಸ್ತಿಯಿಂದ ಲಾಭ. ವೃತ್ತಿ ಸ್ಥಳದಲ್ಲಿ ಸ್ವಲ್ಪ ಕಿರಿಕಿರಿ ಉಂಟಾಗಬಹುದು. ಅಪರಿಚಿತರೊಂದಿಗೆ ಮಾತು ಕಡಿಮೆ ಮಾಡಿ. ಸಂಗಾತಿಯ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಿ.
ಮೀನ (Piscs): ಜ್ಞಾನವರ್ಧಕ ಚರ್ಚೆಗಳಲ್ಲಿ ಭಾಗವಹಿಸಬಹುದು. ಮಕ್ಕಳ ಬಗ್ಗೆ ಗಮನ ಹರಿಸಿ. ಸಂಗಾತಿಗೆ ಉಡುಗೊರೆ ನೀಡಿ ಸಂಬಂಧ ಬಲಪಡಿಸಿ. ವಾಹನ ಖರೀದಿಗೆ ಮಿತ್ರರ ಸಹಾಯ ದೊರೆಯಬಹುದು. ವಿದೇಶಿ ವ್ಯಾಪಾರದಲ್ಲಿ ಲಾಭ. ದೂರ ಪ್ರಯಾಣ ಶುಭ.





