ಲಾಭ–ನಷ್ಟ, ಅನುಮಾನ, ಪ್ರಯಾಣ, ಏಕಾಂತ, ಅಧ್ಯಾತ್ಮಿಕ ಚಿಂತನೆಗಳು ಇಂದಿನ ದಿನದ ಪ್ರಮುಖ ಅಂಶಗಳಾಗಿವೆ. ಕೆಲವು ರಾಶಿಯವರಿಗೆ ಮನಸ್ಸಿನ ಭಾರ ಇಳಿಯುವ ಸೂಚನೆ ಇದ್ದರೆ, ಇನ್ನೂ ಕೆಲವರಿಗೆ ಎಚ್ಚರಿಕೆ ಅಗತ್ಯವಿದೆ. ಇಂದಿನ ದಿನದ 12 ರಾಶಿಗಳ ಸಂಪೂರ್ಣ ಭವಿಷ್ಯ ಇಲ್ಲಿದೆ.
ಮೇಷ ರಾಶಿ
ಆತುರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಆದರೆ ನಿಮ್ಮ ಮಾತಿನಲ್ಲಿ ಇಂದು ತಾರ್ಕಿಕತೆ ಹೆಚ್ಚು ಕಾಣಿಸಿಕೊಳ್ಳುತ್ತದೆ. ಅಮೂಲ್ಯ ವಸ್ತುಗಳ ಖರೀದಿಯಿಂದ ಹಣದ ಉಳಿತಾಯವಾಗುವ ಸೂಚನೆ ಇದೆ. ಸಮಯೋಚಿತವಾಗಿ ಮಾತನಾಡಿದರೆ ಪ್ರಶಂಸೆಗೆ ಪಾತ್ರರಾಗಬಹುದು. ವಿವಾಹ ಸಂಬಂಧಿತ ವಿಷಯಗಳಲ್ಲಿ ನಿಮ್ಮ ನಿಲುವು ಇತರರಿಗಿಂತ ವಿಭಿನ್ನವಾಗಿರುತ್ತದೆ. ಸಂಗಾತಿಯೊಂದಿಗೆ ನೇರವಾಗಿ ಮಾತನಾಡದೇ ಸುಳ್ಳಿನ ಆಧಾರದಲ್ಲಿ ಕೆಲಸ ಮಾಡಿಸಿಕೊಳ್ಳುವ ಸಾಧ್ಯತೆ ತೊಂದರೆ ತರಬಹುದು. ಪಕ್ಷಪಾತದ ನಡೆ ನಿಮ್ಮ ಮೇಲೆಯೇ ಪರಿಣಾಮ ಬೀರುವ ಸಾಧ್ಯತೆ ಇದೆ.
ವೃಷಭ ರಾಶಿ
ಇಂದು ಸಮಯದ ಹೊಂದಾಣಿಕೆಯಲ್ಲಿ ಸ್ವಲ್ಪ ಹಿನ್ನಡೆ ಎದುರಾಗಬಹುದು. ಆದರೆ ನಿಮ್ಮ ವರ್ತನೆ ಸಭ್ಯವಾಗಿರುತ್ತದೆ. ಮೊದಲೇ ನಿರ್ಧರಿಸಿದ ಕಾರ್ಯಗಳನ್ನು ಪೂರ್ಣಗೊಳಿಸಲು ಸಮಯ ಸಿಗದಿರಬಹುದು. ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಗಂಭೀರವಾಗಿ ಯೋಚಿಸುವುದು ಒಳಿತು. ಕೆಲವರು ನಿಮ್ಮ ಬಳಿ ಸಹಾಯ ಕೇಳಬಹುದು. ನಿಮಗೆ ತಿಳಿದಿರುವ ಮಾಹಿತಿಯನ್ನು ಹಂಚಿಕೊಂಡರೆ ಲಾಭವಾಗುತ್ತದೆ.
ಮಿಥುನ ರಾಶಿ
ಏಕಾಗ್ರತೆಯ ಕೆಲಸಕ್ಕೆ ಅಡ್ಡಿ ಉಂಟಾಗಬಹುದು. ಅನಾವಶ್ಯಕವಾಗಿ ಹೊರಗೆ ಹೋಗಬೇಕೆಂಬ ಮನಸ್ಸು ಉಂಟಾಗುತ್ತದೆ. ಜವಾಬ್ದಾರಿಗಳು ಹೆಚ್ಚಾಗಿ ತಲೆಭಾರವಾಗುವ ಸಾಧ್ಯತೆ ಇದೆ. ಅತಿಯಾದ ಮಾತುಗಳಿಂದ ಅಧಿಕಾರಿಗಳ ಅಸಮಾಧಾನ ಎದುರಾಗಬಹುದು. ಆರೋಗ್ಯದ ವಿಚಾರದಲ್ಲಿ ಬೆನ್ನು ನೋವಿಗೆ ಪರಿಹಾರ ಸಿಗುವ ಲಕ್ಷಣವಿದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚರ್ಚೆ ನಡೆಯಲಿದೆ.
ಕರ್ಕಾಟಕ ರಾಶಿ
ಭವಿಷ್ಯದ ಬಗ್ಗೆ ಅತಿಯಾದ ಚಿಂತನೆ ನಿಮಗೆ ಮಾನಸಿಕ ಒತ್ತಡ ತರುವ ಸಾಧ್ಯತೆ ಇದೆ. ಸಹೋದರನಿಂದ ಸಮಸ್ಯೆ ಎದುರಾಗಬಹುದು. ಹಠದ ಸ್ವಭಾವ ಸಂಗಾತಿಗೆ ಕಿರಿಕಿರಿ ಉಂಟುಮಾಡುತ್ತದೆ. ಸಮಯಪ್ರಜ್ಞೆ ಸರಿಯಾಗಿ ಕೆಲಸ ಮಾಡದೇ ಅವಕಾಶಗಳು ಕೈ ತಪ್ಪುವ ಸಾಧ್ಯತೆ ಇದೆ. ಕುಟುಂಬದವರ ನಡವಳಿಕೆ ನಿಮಗೆ ಅರ್ಥವಾಗದೆ ಗೊಂದಲ ಉಂಟಾಗಬಹುದು.
ಸಿಂಹ ರಾಶಿ
ಜಾಣ್ಮೆಯಿಂದ ನಡೆದುಕೊಂಡರೆ ಪ್ರಶಂಸೆಗೆ ಪಾತ್ರರಾಗುವಿರಿ. ವೃತ್ತಿಯಲ್ಲಿ ಸಂತೋಷದ ಕ್ಷಣಗಳು ಎದುರಾಗಲಿವೆ. ಆದರೆ ಮನೋವಿಕಾರವನ್ನು ಸಾರ್ವಜನಿಕವಾಗಿ ತೋರಿಸುವುದು ಬೇಡ. ನಿಮ್ಮದು ಅಂದುಕೊಂಡ ವಸ್ತು ದೂರವಾಗುವ ಸಾಧ್ಯತೆ ಇದೆ. ದಿನದ ಕೊನೆಯಲ್ಲಿ ಅನಾವಶ್ಯಕ ಮಾತುಗಳನ್ನು ಕೇಳಬೇಕಾದೀತು.
ಕನ್ಯಾ ರಾಶಿ
ಅಧಿಕಾರಿಗಳಿಂದ ಶೋಷಣೆ ಅನುಭವಿಸುವ ಸಾಧ್ಯತೆ ಇದೆ. ನಿಮ್ಮಿಂದ ಉಪಕಾರ ಪಡೆದವರೇ ನಿಮ್ಮ ವಿರುದ್ಧ ನಿಲ್ಲಬಹುದು. ಸಣ್ಣ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ. ದೇವರ ಪ್ರಾರ್ಥನೆಯಿಂದ ಮನಸ್ಸಿಗೆ ಶಾಂತಿ ಸಿಗಲಿದೆ. ಕೆಲಸದಲ್ಲಿ ಅಡಚಣೆ ಬಂದರೂ ಗಂಭೀರವಾಗಿ ತೆಗೆದುಕೊಳ್ಳಬೇಡಿ. ಸಣ್ಣ ಉಳಿತಾಯಕ್ಕೂ ಮಹತ್ವ ದೊರೆಯಲಿದೆ.
ತುಲಾ ರಾಶಿ
ಗುಟ್ಟನ್ನು ಯಾರೇ ಒತ್ತಾಯಿಸಿದರೂ ಹೊರಹಾಕುವುದಿಲ್ಲ. ಮನಸ್ಸು ಸ್ವಲ್ಪ ಅಶಾಂತವಾಗಿರಬಹುದು. ಆದರೆ ಎಲ್ಲ ಕಾರ್ಯಗಳಲ್ಲೂ ಜಯ ದೊರೆಯುವ ಲಕ್ಷಣವಿದೆ. ಆರ್ಥಿಕ ಸ್ಥಿತಿ ಸುಧಾರಿಸಿ ನೆಮ್ಮದಿ ನೀಡಲಿದೆ. ನೆಚ್ಚಿನ ತಾಣಕ್ಕೆ ಭೇಟಿ ನೀಡುವುದರಿಂದ ಹೊಸ ಉತ್ಸಾಹ ಸಿಗಲಿದೆ.
ವೃಶ್ಚಿಕ ರಾಶಿ
ವೃತ್ತಿಯಲ್ಲಿ ಆತಂಕ ಎದುರಾಗಬಹುದು. ಮಾಡದ ಕೆಲಸಕ್ಕೆ ಅಪವಾದ ಬರುವ ಸಾಧ್ಯತೆ ಇದೆ. ನಿರಂತರ ಕೆಲಸದಿಂದ ಬೇಸರವಾಗುತ್ತದೆ. ಪ್ರಾಣಿಗಳಿಂದ ಭೀತಿ ಉಂಟಾಗುವ ಸೂಚನೆ ಇದೆ. ಆಧ್ಯಾತ್ಮಿಕ ಚಿಂತನೆಗಳತ್ತ ಮನಸ್ಸು ಸೆಳೆಯಬಹುದು.
ಧನು ರಾಶಿ
ಸಹೋದ್ಯೋಗಿಗಳಿಂದ ನಕಾರಾತ್ಮಕ ಮಾತುಗಳು ಕೇಳಿಬರಬಹುದು. ಹೇಳಿದ ಮಾತು ಮತ್ತು ಮಾಡಿದ ಕಾರ್ಯದಲ್ಲಿ ವ್ಯತ್ಯಾಸ ಕಾಣಬಹುದು. ವೃತ್ತಿ ಬದಲಾವಣೆ ಬಗ್ಗೆ ಯೋಚನೆ ಬರುತ್ತದೆ. ಹೂಡಿಕೆ ವಿಚಾರದಲ್ಲಿ ಸ್ನೇಹಿತರ ಸಲಹೆ ಪಡೆಯುವುದು ಒಳಿತು.
ಮಕರ ರಾಶಿ
ಪುಣ್ಯಕ್ಷೇತ್ರದ ದರ್ಶನದಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಹೊಸ ಉದ್ಯೋಗದ ಅವಕಾಶಗಳ ಬಗ್ಗೆ ಚಿಂತನೆ ಶುರುವಾಗುತ್ತದೆ. ಕುಟುಂಬದವರು ನಿಮ್ಮ ಸಹಾಯ ಕೇಳಬಹುದು. ನಿದ್ರೆಯಲ್ಲಿ ಕೆಟ್ಟ ಕನಸುಗಳಿಂದ ಚಿಂತೆ ಉಂಟಾಗಬಹುದು.
ಕುಂಭ ರಾಶಿ
ಅಪರಿಚಿತರು ಪರಿಚಿತರಂತೆ ವರ್ತಿಸಬಹುದು. ಸಂಗಾತಿಯ ಮನೋಭಾವ ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ. ದೂರ ಪ್ರಯಾಣದ ಅವಕಾಶ ಇದೆ. ಪ್ರೀತಿಯ ವಿಷಯದಲ್ಲಿ ಸ್ವಲ್ಪ ಬೇಸರ ಉಂಟಾಗಬಹುದು.
ಮೀನ ರಾಶಿ
ಸ್ವತಂತ್ರ ಆದಾಯದ ಬಗ್ಗೆ ಯೋಚನೆ ಶುರುವಾಗುತ್ತದೆ. ವ್ಯಾಪಾರದಲ್ಲಿ ಲಾಭದ ಸೂಚನೆ ಇದೆ. ಬಂಧುಗಳೊಂದಿಗೆ ವಿವಾದ ಸಂಭವಿಸಬಹುದು. ಸಣ್ಣ ಅಹಂಕಾರ ನಿಮ್ಮನ್ನು ಹಾನಿಗೊಳಿಸಬಹುದು.





