ಇಂದು ಅನ್ಯರ ಮಾತುಗಳಿಂದ ಕಳವಳ, ಜೀವನದಲ್ಲಿ ಜುಗುಪ್ಸೆ, ಸ್ನೇಹದಲ್ಲಿ ವೈಷಮ್ಯ, ವಿವಾದ ಮತ್ತು ಒಪ್ಪಂದಗಳಲ್ಲಿ ದೃಢತೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಉದ್ಯಮ ಮತ್ತು ವೃತ್ತಿ ಜೀವನದಲ್ಲಿ ಒತ್ತಡ ಹೆಚ್ಚಾಗಬಹುದು. ಕೆಲವು ರಾಶಿಯವರಿಗೆ ಅಲ್ಪ ವಿರಾಮ ಸಿಗುವ ಸೂಚನೆ ಇದೆ.
ಮೇಷ ರಾಶಿ: ನಿರಂತರ ಅಭ್ಯಾಸಗಳ ಬಗ್ಗೆ ಎಚ್ಚರಿಕೆ ಇರಲಿ. ದೌರ್ಬಲ್ಯಗಳನ್ನು ಬಿಡುವ ಪ್ರಯತ್ನ ಮಾಡಿ. ಆಪ್ತರೊಂದಿಗೆ ಮಾತನಾಡದಿದ್ದರೆ ನೆಮ್ಮದಿ ಸಿಗದು. ಸಂಗಾತಿಯೊಂದಿಗೆ ಆರ್ಥಿಕ ವಿಷಯದಲ್ಲಿ ವಾಗ್ವಾದವಾಗಬಹುದು. ಉದ್ಯೋಗದಲ್ಲಿ ಉತ್ತಮ ಅವಕಾಶಗಳು ಕಾದಿವೆ.
ವೃಷಭ ರಾಶಿ: ವಿದ್ಯಾರ್ಥಿಗಳು ಸಾಮರ್ಥ್ಯ ತೋರಿಸುವ ದಿನ. ಸಾಮಾಜಿಕ ಕಾರ್ಯಗಳಲ್ಲಿ ಉತ್ಸಾಹ. ಅನಪೇಕ್ಷಿತ ಸಹಕಾರದಿಂದ ಆರ್ಥಿಕ ಚಿಂತೆ ಕಡಿಮೆಯಾಗಬಹುದು. ಸ್ವಂತ ಉದ್ಯೋಗದ ಆಲೋಚನೆ ಬರಬಹುದು. ಸಂತೋಷದಿಂದ ದಿನ ಕಳೆಯುವಿರಿ.
ಮಿಥುನ ರಾಶಿ: ವೃತ್ತಿಪರ ಜೀವನದಲ್ಲಿ ದೊಡ್ಡ ಬದಲಾವಣೆಗಳು. ಪ್ರೀತಿಯಲ್ಲಿ ಅಡ್ಡಿ ಬರಬಹುದು. ಕಾರ್ಯವನ್ನು ಸರಿಯಾಗಿ ಯೋಜಿಸಿ. ಕಲಾವಿದರು ಹೆಚ್ಚು ಶ್ರಮ ಹಾಕಿದರೆ ಯಶಸ್ಸು ಸಿಗುತ್ತದೆ.
ಕರ್ಕಾಟಕ ರಾಶಿ: ಅದೃಷ್ಟ ನಿಮ್ಮೊಂದಿಗೆ. ಕನಸುಗಳನ್ನು ನಂಬಿ ಗುರಿಯತ್ತ ನಡೆಯಿರಿ. ಉದ್ಯೋಗದಲ್ಲಿ ಬೆಂಬಲ ಹೆಚ್ಚು. ಕೃಷಿ ಕಡೆಗೆ ಗಮನ ಹರಿಸುವಿರಿ. ಕಾನೂನು ಸಂಬಂಧಿ ವಿಚಾರಗಳಲ್ಲಿ ಎಚ್ಚರಿಕೆ.
ಸಿಂಹ ರಾಶಿ: ಜನರ ಪ್ರೀತಿಗೆ ಪ್ರತಿಯಾಗಿ ಸಮಯ ಕೊಡಿ. ಅತಿಯಾದ ಚಿಂತೆ ಆರೋಗ್ಯ ಹಾಳು ಮಾಡಬಹುದು. ಆತ್ಮವಿಶ್ವಾಸ ಬೆಳೆಸಿ ಸಕ್ರಿಯರಾಗಿ. ಸಂಗಾತಿಯಿಂದ ಮಾನಸಿಕ ಘಾಸಿಯಾಗಬಹುದು.
ಕನ್ಯಾ ರಾಶಿ: ಧನಾತ್ಮಕವಾಗಿ ನಿಮ್ಮನ್ನು ಪ್ರಸ್ತುತಪಡಿಸಿ. ಋಣ ತೀರಿಸಿ ಮುಂದಿನ ಯೋಜನೆಗೆ ಸಿದ್ಧರಾಗಿ. ದೂರ ಪ್ರಯಾಣ ನಿರಾಶಾದಾಯಕವಾಗಬಹುದು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಗೊಂದಲ ನಿವಾರಣೆ.
ತುಲಾ ರಾಶಿ: ದೀರ್ಘಕಾಲದ ಸಂಬಂಧಕ್ಕೆ ವಿರಾಮ ಸಿಗಬಹುದು. ಸ್ಥಿರಾಸ್ತಿ ಪಡೆಯುವ ಸಾಧ್ಯತೆ. ಕಛೇರಿಯಲ್ಲಿ ಪ್ರಶಂಸೆ ಸಿಗುವುದು. ಭೂಮಿ ವ್ಯವಹಾರ ಸಾಕೆನಿಸಬಹುದು.
ವೃಶ್ಚಿಕ ರಾಶಿ: ಕೆಲಸದಲ್ಲಿ ಹೊಸತನ ಮುಖ್ಯ. ಮಕ್ಕಳ ವಿವಾಹಕ್ಕೆ ಓಡಾಟ. ಆಸ್ತಿ ಹೂಡಿಕೆ ಬೇಡ. ವೃತ್ತಿಯಲ್ಲಿ ಸಂಕಷ್ಟ ಬರಬಹುದು.
ಧನು ರಾಶಿ: ಹಿತಶತ್ರುಗಳನ್ನು ಮಾತುಗಳಿಂದ ಗುರುತಿಸಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲು ಖರ್ಚು ನಿಯಂತ್ರಿಸಿ. ವಾಸಸ್ಥಳ ಬದಲಾವಣೆ ಸಂತೋಷ ನೀಡುವುದು.
ಮಕರ ರಾಶಿ: ಸಾಲ ಮರುಪಾವತಿ ಮಾಡುವ ಸಾಧ್ಯತೆ. ಒಳ್ಳೆಯ ಸುದ್ದಿಗಳು ಬರಬಹುದು. ಉತ್ಸಾಹ ನಿಯಂತ್ರಿಸಿ. ಆರ್ಥಿಕ ಬೆಳವಣಿಗೆ ಸಂತೋಷ ನೀಡುತ್ತದೆ.
ಕುಂಭ ರಾಶಿ: ಹೊಸ ಸಂಪರ್ಕದಿಂದ ಕಾರ್ಯ ಸಾಧನೆ. ಹೂಡಿಕೆಗೆ ಹೊಸ ಮಾರ್ಗಗಳು. ಹಳೆಯ ತಪ್ಪಿಗೆ ಪಶ್ಚಾತ್ತಾಪ. ಖರ್ಚು ಹೆಚ್ಚಾಗಬಹುದು.
ಮೀನ ರಾಶಿ: ಆರ್ಥಿಕತೆ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ಬದಲಾವಣೆಯ ದಿನ. ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವಿರಿ. ಸ್ಥಿರಾಸ್ತಿ ಉಳಿಸಿಕೊಳ್ಳಲು ಪ್ರಯತ್ನಿಸಿ.





