ಇಂದು ಶಾಲಿವಾಹನ ಶಕೆ ೧೯೪೮, ವಿಶ್ವಾವಸು ಸಂವತ್ಸರ, ಮಾರ್ಗಶೀರ್ಷ ಶುಕ್ಲ ಪ್ರತಿಪದೆ, ಶುಕ್ರವಾರ, ಅನೂರಾಧಾ ನಕ್ಷತ್ರ (ಜ್ಯೇಷ್ಠಾ ನಿತ್ಯ ನಕ್ಷತ್ರ), ಶೋಭನ ಯೋಗ. ಸೂರ್ಯೋದಯ ಬೆಳಗ್ಗೆ ೬:೨೧, ಸೂರ್ಯಾಸ್ತ ಸಾಯಂಕಾಲ ೫:೪೮. ರಾಹುಕಾಲ ೧೦:೪೦-೧೨:೦೫, ಯಮಗಂಡ ೨:೫೭-೪:೨೩, ಗುಳಿಕಕಾಲ ೭:೪೮-೯:೧೪.
ಮೇಷ ರಾಶಿ
ಅರ್ಥಮಾಡಿಕೊಳ್ಳುವ ಶಕ್ತಿ ಹೆಚ್ಚು. ಬಂಧುಗಳಿಂದ ಹೆಚ್ಚು ನಿರೀಕ್ಷೆ ಬೇಡ. ಪ್ರೇಮಿಯ/ಪತ್ನಿಗಾಗಿ ಖರ್ಚು. ಪ್ರೇಮ ಜೀವನ ರೊಮಾಂಟಿಕ್ ಆಗಿ ಕಾಣುತ್ತದೆ. ಆಸೆ ಈಡೇರಿ ಸಂತೋಷ. ದಾನ-ಧರ್ಮಕ್ಕೆ ಒಲವು. ಸಂಗಾತಿಯ ಮಾತು ವಾಗ್ವಾದಕ್ಕೆ ತಿರುಗಬಹುದು. ಕಷ್ಟದ ಸಂದರ್ಭ ಬಂದರೆ ತಪ್ಪನ್ನು ತಪ್ಪೆಂದು ಸ್ಪಷ್ಟವಾಗಿ ಹೇಳಿ. ಕೆಲಸದಲ್ಲಿ ಒತ್ತಡ ಹೆಚ್ಚಳ. ಹಳೆಯ ಸ್ನೇಹಿತರೊಡನೆ ಪ್ರಯಾಣ ಸಾಧ್ಯ. ಗೊಂದಲದಲ್ಲಿ ತೀರ್ಮಾನ ಬೇಡ.
ವೃಷಭ ರಾಶಿ
ಸೃಜನಶೀಲತೆ ತುಂಬಾ ಹೆಚ್ಚು. ಒಟ್ಟಿಗೆ ಕೆಲಸ ಮಾಡಿದರೆ ಯಶಸ್ಸು. ಯಾರೋ ನಿಮ್ಮ ಯಶಸ್ಸಿಗೆ ಅಡ್ಡಿಯಾಗಬಹುದು. ಸಕಾರಾತ್ಮಕತೆ ಕಾಯ್ದುಕೊಳ್ಳಿ. ಅಪರಿಚಿತ ವ್ಯಕ್ತಿಗಳ ಭೇಟಿ. ವಿದ್ಯಾರ್ಥಿಗಳು ಪರೀಕ್ಷೆಗೆ ಗಮನ ಕೊಡಿ. ಬಂಧುಗಳ ಮಾತು ಕಿರಿಕಿರಿ ಉಂಟುಮಾಡಬಹುದು. ಪುಣ್ಯಕ್ಷೇತ್ರ ಭೇಟಿ. ಸೌಂದರ್ಯಕ್ಕೆ ಹೆಚ್ಚು ಗಮನ. ಸ್ನೇಹಿತರ ಸಹಾಯ ದೊರೆಯುವುದು ಆದರೆ ಮಾತಿನಲ್ಲಿ ಕಟುತನ ಬರಬಹುದು. ಆಸ್ತಿ ಮಾರಾಟದ ಆಲೋಚನೆ.
ಮಿಥುನ ರಾಶಿ
ನಿಧಾನಗತಿಯ ಕೆಲಸಗಳು ವೇಗ ಪಡೆಯುತ್ತವೆ. ಧೈರ್ಯದಿಂದ ಸಮಸ್ಯೆಗಳಿಗೆ ಪರಿಹಾರ. ಆರ್ಥಿಕವಾಗಿ ಬಲ. ಆದರೆ ಧನ ನಷ್ಟದಿಂದ ಹತಾಶೆ ಸಾಧ್ಯ. ವ್ಯಾಪಾರದಲ್ಲಿ ಪಾರದರ್ಶಕತೆ. ಸಹೋದರಿಗೆ ಉಡುಗೊರೆ. ಸ್ಥಿರಾಸ್ತಿ ವಿಚಾರದಲ್ಲಿ ಗೊಂದಲ. ಏಕಾಂತಕ್ಕೆ ಒಲವು. ರಾಜಕೀಯದಲ್ಲಿ ಮುಂದುವರಿಯಲು ಕಷ್ಟ.
ಕರ್ಕಾಟಕ ರಾಶಿ
ಹೊಸ ಕಲಿಕೆ ಆರಂಭ. ಸುಪ್ತ ಕಾರ್ಯಕ್ಕೆ ಜಾಗೃತಿ. ಸರ್ಕಾರಿ ಬಾಕಿ ತೀರಿಸುವಿರಿ. ಪ್ರಭಾವಿ ವ್ಯಕ್ತಿಗಳ ಎದುರು ಸಂದರ್ಭ. ಹೊಸ ಅಧಿಕಾರ/ಪದೋನ್ನತಿ ಸಾಧ್ಯ. ಯಂತ್ರ ಮಾರಾಟದವರಿಗೆ ಲಾಭ. ಟೀಕೆಯಿಂದ ಹಿಂಜರಿಕೆ ಬೇಡ. ಸಂಬಂಧಗಳಲ್ಲಿ ಸೌಹಾರ್ದ. ಮಕ್ಕಳ ಮೇಲೆ ಅನುಕಂಪ ಹೆಚ್ಚು.
ಸಿಂಹ ರಾಶಿ
ಬಾಂಧವ್ಯ ಭಾವ ಗಾಢ. ಹಳೆಯ ಒಡಕು ಮಾತಿನಿಂದ ಒತ್ತಡ ಆದರೆ ಅಂತರಂಗಿಕ ಶಕ್ತಿ ಹೆಚ್ಚಳ. ಭೂಮಿ ಖರೀದಿ ಯಶಸ್ವಿ. ಮಹಿಳೆಯ ಕಾರಣದಿಂದ ಧನನಷ್ಟ ಸಾಧ್ಯ. ಕಲಾವಿದರಿಗೆ ಅವಕಾಶ. ವಿದೇಶಿ ವ್ಯಾಪಾರಕ್ಕೆ ಬಲ. ಗೃಹ ನಿರ್ಮಾಣ ರೂಪು ರೇಷೆ. ಗುಪ್ತ ಲಾಭ. ಪ್ರಯಾಣ ಮನಸ್ಸಿಲ್ಲ.
ಕನ್ಯಾ ರಾಶಿ
ಸಂಬಂಧಗಳಲ್ಲಿ ಸಮತೋಲನ. ಮನೆಯವರ ಹೃದಯ ಗೆಲ್ಲುವಿರಿ. ವಿದೇಶಿ ಹೂಡಿಕೆಗೆ ತೀರ್ಮಾನ. ಸಂಗಾತಿಯ ಮಾತು ಬೇಸರ ತರುವುದು. ಸಮಯ ಪಾಲನೆಯಿಂದ ಕೆಲಸ ಸಾಗುತ್ತದೆ. ಹಣಕಾಸು ಸ್ಥಿರ. ಸಂಬಂಧಗಳು ಉಪಯೋಗಕ್ಕೆ ಬರುತ್ತವೆ.
ತುಲಾ ರಾಶಿ
ಕೆಲಸದ ಒತ್ತಡವನ್ನು ಚಾತುರ್ಯದಿಂದ ನಿರ್ವಹಣೆ. ಅಸೂಯೆ ಬೇಡ. ಕೆತ್ತನೆ ಕಲಾವಿದರಿಗೆ ಬೇಡಿಕೆ. ಆರೋಗ್ಯದಲ್ಲಿ ಸಣ್ಣ ತೊಂದರೆ (ನರದೌರ್ಬಲ್ಯ, ತಲೆನೋವು). ಸಮಯಕ್ಕೆ ಆಹಾರ-ವಿಶ್ರಾಂತಿ ಅಗತ್ಯ.
ವೃಶ್ಚಿಕ ರಾಶಿ
ಮೇಲಧಿಕಾರಿಗಳ ಮೆಚ್ಚುಗೆ. ಕೆಲಸಕ್ಕೆ ಮಾನ್ಯತೆ. ದೂರದ ಬಾಂಧವರ ಆಗಮನ. ಆರ್ಥಿಕ ದೌರ್ಬಲ್ಯ ಮರೆಯಾಗುವ ಸಾಧ್ಯತೆ. ಕಪಟತನದಿಂದ ಎಚ್ಚರಿಕೆ. ಅಹಂಕಾರ ಮಾತಿನಲ್ಲಿ ಬರದಿರಲಿ.
ಧನು ರಾಶಿ
ಹಳೆಯ ಭಾವನೆಗಳಿಂದ ಸಮಸ್ಯೆ. ಮಹಿಳಾ ಉದ್ಯಮಕ್ಕೆ ಪ್ರಚಾರ ಆದರೆ ಆದಾಯ ಕಡಿಮೆ. ಪ್ರಕೃತಿಯೊಡನೆ ಸಮಯ ಕಳೆಯಿರಿ. ದಾಂಪತ್ಯ ಬಿರುಕು ಮಾತಿನಿಂದಲೇ ಸರಿಪಡಿಸಿ.
ಮಕರ ರಾಶಿ
ಮಾತಿನಿಂದ ಕೆಲಸ ಸುಲಭ. ಹೊಸ ಪರಿಚಯ ಭವಿಷ್ಯಕ್ಕೆ ಉಪಯೋಗ. ಆಪ್ತರೊಡನೆ ಆರಾಮದ ದಿನ. ಕುಟುಂಬದಲ್ಲಿ ಸಂತೋಷ. ಸ್ತ್ರೀಯರ ಸಹಾಯ. ಧನನಷ್ಟದ ವಿಷಯ ಗೌಪ್ಯವಾಗಿರಲಿ.
ಕುಂಭ ರಾಶಿ
ಮನಸ್ಸಿನ ದ್ವಂದ್ವ. ಹಣಕಾಸಿನಲ್ಲಿ ಎಚ್ಚರ. ಸ್ನೇಹಿತರೊಡನೆ ಸಮಯ ವ್ಯರ್ಥವಾಗಬಹುದು. ಸಂಗಾತಿಯ ಕಹಿಮಾತು. ಸಂಗ್ರಹಕ್ಕೆ ಆದ್ಯತೆ. ಧಾರ್ಮಿಕ ಒಲವು ಹೆಚ್ಚು.
ಮೀನ ರಾಶಿ
ಶಾಂತ ಮನಸ್ಸಿನಿಂದ ನಿರ್ಧಾರ ತೆಗೆದುಕೊಳ್ಳಿ. ದೂರದ ಊರಿನಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶ. ಉತ್ತಮ ಕುಲದ ವಿವಾಹ ಸಂಬಂಧ. ಕೆಲಸದಲ್ಲಿ ಚುರುಕು. ಹೊಸ ಯೋಜನೆಗೆ ಒಳ್ಳೆಯ ದಿನ. ಸಹೋದರರಿಗೆ ಉಡುಗೊರೆ.





