ಇಂದಿನ ದಿನವು ನಿಜಸ್ಥಿತಿಯ ಅರಿವು, ಉತ್ಸಾಹದ ಮನಸ್ಸು, ಆದರೆ ಅನಿರೀಕ್ಷಿತ ಅನಾರೋಗ್ಯ ಮತ್ತು ದೂರ ಪ್ರಯಾಣಕ್ಕೆ ತಡೆಯನ್ನು ತೋರಿಸುತ್ತದೆ. ಉದ್ಯಮದಲ್ಲಿ ಕ್ರಿಯಾಶೀಲತೆ ಹೆಚ್ಚಾಗಲಿದ್ದು, ಆದಾಯಕ್ಕೆ ಸುಲಭೋಪಾಯಗಳು ಸಿಗಬಹುದು. ಎಲ್ಲ ರಾಶಿಗಳಿಗೂ ಇಂದು ವಿಭಿನ್ನ ಫಲಗಳಿವೆ. ಓದಿ, ನಿಮ್ಮ ರಾಶಿಯ ಭವಿಷ್ಯ.
ಮೇಷ: ನಿಮ್ಮ ಉನ್ನತಿಗೆ ಕಾರಣರಾದವರನ್ನು ಸ್ಮರಿಸುವ ದಿನ. ಸಂತಾನದ ಶುಭ ವಾರ್ತೆ ಕೇಳಿಬರಬಹುದು. ಹೊಸ ಮನೆ ಅಥವಾ ಜಾಗದ ಪ್ರಸ್ತಾಪವಿದೆ. ಆರೋಪಗಳು ಬರಬಹುದು, ಆದರೆ ಔಚಿತ್ಯಪೂರ್ಣ ಮಾತುಗಳಿಂದ ಗೌರವ ಗಳಿಸುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ.
ವೃಷಭ: ಸ್ಪರ್ಧೆಯಲ್ಲಿ ಸೋಲು ಕಾಣಬಹುದು. ಶತ್ರುಗಳು ನಿಮ್ಮನ್ನು ತಪ್ಪು ದಾರಿಗೆ ಪ್ರೋತ್ಸಾಹಿಸಬಹುದು. ವಿದ್ಯುದುಪಕರಣ ಖರೀದಿಯಿಂದ ವ್ಯಯ. ಸಲ್ಲದ ದಾರಿಯಲ್ಲಿ ಹಣಗಳಿಸಲು ಹೋದರೆ ನಷ್ಟ. ಹೊಸ ಕಲಿಕೆಗೆ ಇದು ಉತ್ತಮ ದಿನ.
ಮಿಥುನ: ದೈವಾನುಕೂಲದಿಂದ ಹೊಳಪು ಬರಲಿದೆ. ಆದರೆ ಯಾರನ್ನೂ ಸಂಪೂರ್ಣ ನಂಬಬೇಡಿ. ಸಂಗಾತಿಯೊಂದಿಗೆ ಸಮಾರಂಭ, ಸ್ನೇಹಿತರೊಂದಿಗೆ ಪ್ರವಾಸ. ಹಿಂದಿನ ಹಣಕಾಸಿನ ಸಮಸ್ಯೆ ಮರುಕಳಿಸಬಹುದು. ಅನನುಕೂಲವನ್ನೇ ಸಕಾರಾತ್ಮಕವಾಗಿ ಬಳಸಿಕೊಳ್ಳುವಿರಿ.
ಕರ್ಕಾಟಕ: ಕುಟುಂಬದವರು ನಿಮ್ಮ ಕಾರ್ಯಗಳನ್ನು ಮೆಚ್ಚಿಕೊಳ್ಳುವರು. ಜೀವನದಲ್ಲಿ ಹೊಸ ದಾರಿಗೆ ನೀವು ಹೆಜ್ಜೆ ಇಡಬಹುದು. ವಾಸಸ್ಥಳ ಬದಲಾವಣೆ ಸಾಧ್ಯತೆ ಇದೆ.
ಸಿಂಹ: ಅನಿರೀಕ್ಷಿತ ಹಣದ ವ್ಯಯದಿಂದ ಚಂಚಲತೆ. ಮೊದಲ ವೇತನದ ಸಂತೋಷ. ಮನೆ ನಿರ್ಮಾಣದ ಯೋಜನೆ. ಆಕಸ್ಮಿಕ ಸುದ್ದಿಯಿಂದ ಮನಸ್ಸು ಖೇದ. ಸುತ್ತಮುತ್ತಲವರಿಂದ ತೊಂದರೆ. ಒತ್ತಡದ ಕೆಲಸದಿಂದ ವಿರಾಮ ಬೇಕೆನಿಸಬಹುದು.
ಕನ್ಯಾ: ಇತರರ ವಿಷಯಕ್ಕೆ ಮೂಗು ತೂರಿಸಿ ಅಪಮಾನ. ಅನಗತ್ಯ ಮಾತುಗಳಿಂದ ಸಣ್ಣವರಾಗುವಿರಿ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ. ನಿದ್ರಾಹೀನತೆಯಿಂದ ಆಲಸ್ಯ. ದಿವ್ಯ ಸ್ಥಳಕ್ಕೆ ಭೇಟಿ. ಸಂಗಾತಿಯ ಮಾತು ಬೇಸರ ತರಬಹುದು.
ತುಲಾ: ಸ್ತ್ರೀಯರು ತಾಳ್ಮೆ ಕಳೆದುಕೊಂಡರೂ, ಮಿತಿಯನ್ನು ಅರಿತು ಸಮಾಧಾನ ಪಡೆಯಿರಿ. ಮನೆಯಲ್ಲಿ ನೆಮ್ಮದಿ. ಮಕ್ಕಳ ವೃತ್ತಿಯ ಏಳ್ಗೆಯಿಂದ ಸುಖ. ಬರುವ ಹಣವನ್ನು ಸರಿಯಾಗಿ ವಿನಿಯೋಗಿಸಿ.
ವೃಶ್ಚಿಕ: ಧಾನ್ಯ ವ್ಯಾಪಾರಿಗಳಿಗೆ ಲಾಭ. ಸಂಗಾತಿಯೊಂದಿಗೆ ಹಣದ ವಿಚಾರದಲ್ಲಿ ವೈಮನಸ್ಯ. ಸಹೋದರನೊಂದಿಗೆ ಕಲಹ. ಮನೆಯ ಸಂತೋಷ. ಸ್ತ್ರೀಯರಿಗೆ ಉದ್ಯೋಗದಲ್ಲಿ ಆದ್ಯತೆ. ಇತರರ ನೋವಿಗೆ ಸ್ಪಂದಿಸುವಿರಿ.
ಧನು: ನಿಮ್ಮ ಮೇಲೆ ಸುಳ್ಳು ಆಪಾದನೆ. ಸ್ತ್ರೀಯರಿಗೆ ಶತ್ರು ಬಾಧೆ. ಯಂತ್ರಾಗಾರದವರಿಗೆ ಶುಭ. ಮಾತಿನ ಮೇಲೆ ಹಿಡಿತವಿರಲಿ. ವಿದೇಶ ಪ್ರವಾಸ ವ್ಯಾಪಾರಕ್ಕೆ ಶುಭ. ಕಠಿಣ ವ್ಯಾಯಾಮಕ್ಕೂ ಮೊದಲು ವೈದ್ಯರ ಸಲಹೆ ಪಡೆಯಿರಿ.
ಮಕರ: ಗೃಹಬಳಕೆಯ ವಸ್ತುಗಳ ಖರೀದಿ. ವಿವೇಚನೆಯಿಲ್ಲದ ಕೋಪ. ಕಬ್ಬಿಣ ವ್ಯಾಪಾರದಲ್ಲಿ ನಷ್ಟ. ಅನ್ಯರಿಂದ ಹಣಕಾಸಿನ ವಂಚನೆಯ ಸನ್ನಿವೇಶ. ದಾಂಪತ್ಯದಲ್ಲಿ ಅತಿಯಾದ ಸಲುಗೆ. ತಂದೆಯಿಂದ ಧನಾಗಮನದ ನಿರೀಕ್ಷೆ.
ಕುಂಭ: ನಿಮ್ಮ ಮಾತು ಇತರರಿಗೆ ಕಿರಿಕಿರಿ ಎನಿಸಬಹುದು. ಸ್ನೇಹಿತರ ಭೇಟಿಯಿಂದ ಸಂತಸ. ಆಕಸ್ಮಿಕ ಖರ್ಚು ಕಂಗೆಡಿಸಬಹುದು. ಹೊಸ ಉದ್ಯೋಗದ ಕಡೆಗೆ ಮನಸ್ಸು. ವ್ಯಾಪಾರದ ಗುಣಮಟ್ಟ ಹೆಚ್ಚಿಸಲು ಖರ್ಚು ಸಾಧ್ಯತೆ.
ಮೀನ: ಮಕ್ಕಳು ನಿಮ್ಮ ನಡತೆಯನ್ನು ಪ್ರಶ್ನಿಸಬಹುದು, ಮೌನವೇ ಉತ್ತರ. ಅನುಕಂಪಕ್ಕೆ ಕರುಗುವಿರಿ. ಬಿಟ್ಟಿದ್ದ ಮಾತುಗಳನ್ನು ಮುಂದುವರಿಸುವಿರಿ. ಹೊಸ ಹೂಡಿಕೆಗೆ ಮನಸ್ಸು. ಅತಿಯಾದ ಆಸೆಯಿಂದ ತೊಂದರೆಗಳು ಎದುರಾಗಬಹುದು.
