ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸದ ಕೃಷ್ಣ ಪಕ್ಷದ ಏಕಾದಶೀ ತಿಥಿಯ ಸೋಮವಾರದಂದು ವಿದೇಶ ಗಮನದ ಆಸೆ, ಯೋಜನೆಯಲ್ಲಿ ಆದಾಯ ನಿರೀಕ್ಷೆ, ಅಧಿಕಾರಕ್ಕೆ ಪ್ರಯತ್ನ, ಪುಣ್ಯಕಾರ್ಯ, ಒಳ್ಳೆಯ ಕಾರ್ಯಕ್ಕೆ ಶ್ಲಾಘನೆ ಇವೆಲ್ಲ ವಿಶೇಷ. ಇಂದು ಪ್ರತಿ ರಾಶಿಯ ಮೇಲೆ ಗ್ರಹಗಳ ಚಲನೆಯ ಪ್ರಭಾವ ಹೇಗಿದೆ ಎಂಬುದನ್ನು ಇಲ್ಲಿ ತಿಳಿಯಿರಿ.
ಮೇಷ ರಾಶಿ: ಯಾವುದಾದರೂ ದುರ್ವ್ಯಸನಕ್ಕೆ ತುತ್ತಾಗಿ ಹಣ ಮತ್ತು ಆರೋಗ್ಯವನ್ನು ಕಳೆದುಕೊಳ್ಳುವ ಸಾಧ್ಯತೆ. ಮಾಡದೆ ಉಳಿದ ಕೆಲಸಗಳತ್ತ ಗಮನ ಹರಿಸಿ. ವ್ಯಾಪಾರದಲ್ಲಿ ಲಾಭ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ಫಲ. ಅಧಿಕಾರದ ಆಸೆಗೆ ನೀರೆರೆಯಬಹುದು. ದೌರ್ಬಲ್ಯವನ್ನು ಒಪ್ಪಿಕೊಂಡು ಪರಿಹಾರ ಕಂಡುಕೊಳ್ಳುವುದು ಉತ್ತಮ. ವಿಳಂಬದ ಹಣ ಬೇಗ ಸಿಗಬಹುದು.
ವೃಷಭ ರಾಶಿ: ಹಣಕಾಸಿನ ಹರಿವು ಹೆಚ್ಚಳ, ಆತಂಕವೂ ಇದೆ. ಅತಿಯಾದ ಖರ್ಚಿನಿಂದ ಚಿಂತೆ, ಆದರೆ ಬಹುಕಾಲ ಸಿಕ್ಕಿಹಾಕಿಕೊಂಡಿದ್ದ ಹಣ ಮರಳಿ ಸಿಗುವುದು. ನಕಾರಾತ್ಮಕ ವಿಚಾರಗಳ ನಡುವೆಯೂ ನೀವು ಬಲವಾಗಿರುವಿರಿ. ಆಪ್ತರಿಗೆ ನಿಮ್ಮ ಬದಲಾದ ನಡವಳಿಕೆ ಇಷ್ಟವಾಗದು. ಸಮಯದ ಹೊಂದಾಣಿಕೆ ಕಷ್ಟ.
ಮಿಥುನ ರಾಶಿ: ಸೃಜನಾತ್ಮಕ ಜೀವನಕ್ಕೆ ಫಲ. ಉತ್ತಮ ಯೋಜನೆಗಳನ್ನು ರೂಪಿಸಿ. ಶೈಕ್ಷಣಿಕ ಅಡೆತಡೆಗಳು, ಭರವಸೆ-ಹತಾಶೆ ಮಿಶ್ರಣ. ಕೌಟುಂಬಿಕ ಸಂತೋಷ. ಅತಿಯಾದ ಕೆಲಸ ಬೇಡ. ಹೊಸ ಕಲಿಕೆಗೆ ಉತ್ಸಾಹ. ನಿಮ್ಮ ತಮಾಷೆ ಇಷ್ಟವಾಗದಿರಬಹುದು.
ಕರ್ಕಾಟಕ ರಾಶಿ: ನಿಮ್ಮ ವೇತನವನ್ನು ಯಾರೋ ತಿಳಿಯಲು ಯತ್ನಿಸುವರು. ನಿಮ್ಮನ್ನು ನೀವು ಪರಿಚಯಿಸಿಕೊಳ್ಳುವಿರಿ. ಸಮಯವನ್ನು ಧಾರ್ಮಿಕ ಆಚರಣೆಗೆ ಮೀಸಲಿಡುವಿರಿ. ಕಛೇರಿಯ ಕಾರ್ಯಗಳು ಸ್ಥಗಿತ. ಗಾಢ ಆಲೋಚನೆ. ಸರ್ಕಾರದ ಸೌಲಭ್ಯದ ಚಿಂತನೆ. ಮಕ್ಕಳಿಂದ ಸಂತೃಪ್ತಿ. ಬಂಧುಗಳ ಭೇಟಿ ಇಷ್ಟವಾಗದು. ಸರಳ ಕೆಲಸವನ್ನು ಸಂಕೀರ್ಣ ಮಾಡಿಕೊಳ್ಳುವಿರಿ.
ಸಿಂಹ ರಾಶಿ: ಹಿತಶತ್ರುಗಳಿಂದ ಬೇಕಾದ ಮಾಹಿತಿ ಸಿಗುವುದು. ಸಂಗಾತಿಯ ಮೇಲೆ ಪ್ರೀತಿ. ಪ್ರಭಾವೀ ವ್ಯಕ್ತಿಗಳ ಭೇಟಿ ಮನೋಬಲ ಹೆಚ್ಚಿಸುವುದು. ಕುಟುಂಬದೊಂದಿಗೆ ಸಮಸ್ಯೆ ಹಂಚಿಕೊಳ್ಳಿ. ಚಿಂತೆಯಿಂದ ಆರೋಗ್ಯಕ್ಕೆ ತೊಂದರೆ. ಅಂತರಂಗ ವ್ಯಕ್ತಪಡಿಸಲು ಸೂಕ್ತ ಸಮಯ ಸಿಗದು. ಅಪರಿಚಿತರ ಬಗ್ಗೆ ಜಾಗರೂಕತೆ. ತಪ್ಪು ನಿರ್ಧಾರದ ಪಶ್ಚಾತ್ತಾಪ.
ಕನ್ಯಾ ರಾಶಿ: ನೀವೇ ಕುಟುಂಬದ ಅಸಮಾಧಾನಕ್ಕೆ ಕಾರಣ. ನಿಮ್ಮ ದುಃಸ್ಥಿತಿಯನ್ನು ಬಳಸಿಕೊಳ್ಳುವರು. ಮಕ್ಕಳ ಆರೋಗ್ಯದತ್ತ ಗಮನ. ಪ್ರಣಯದಲ್ಲಿ ಹೆಚ್ಚಿನ ಬೇಡಿಕೆಗಳು. ಅಶಕ್ತರನ್ನು ಕಳಸಿಕೊಂಡು ಅಧಿಕಾರದ ಹಸಿವು ನೀಗಿಸಿಕೊಳ್ಳುವಿರಿ. ಪ್ರೀತಿಪಾತ್ರರೊಂದಿಗೆ ಸಲುಗೆ. ಇಷ್ಟವಿಲ್ಲದ ಕಾರ್ಯ ಮಾಡಬೇಕಾಗಬಹುದು.
ತುಲಾ ರಾಶಿ: ಅಪ್ರಯೋಜನ ಎನಿಸಿದ್ದನ್ನು ಮಾಡುವ ಮೊದಲು ಪರಿಣಾಮ ಯೋಚಿಸಿ. ನಿದ್ರಾಹೀನತೆಯಿಂದ ಕಿರಿಕಿರಿ. ಎಲೆಕ್ಟ್ರಾನಿಕ್ಸ್ನಲ್ಲಿ ಚಾಣಾಕ್ಷರು. ಹಿರಿಯರ ಸಲಹೆ ಅಪಮಾನದಂತೆ ಕಾಣಬಹುದು. ವಿಷಯ, ಸಮಯ ನೋಡಿ ವ್ಯವಹರಿಸಿ. ಅಶಕ್ತರ ಸೇವೆಯಲ್ಲಿ ತೊಡಗಿಕೊಳ್ಳುವಿರಿ.
ವೃಶ್ಚಿಕ ರಾಶಿ: ಯಾರದ್ದಾದರೂ ಮೂಲಕ ತೊಂದರೆಯ ಮುನ್ಸೂಚನೆ. ಸಂಗಾತಿಯೊಂದಿಗೆ ಹೊರಗೆ ಹೋಗುವ ಸಂದರ್ಭ. ವೃತ್ತಿಯಲ್ಲಿ ಅವಮಾನದ ಸಾಧ್ಯತೆ. ದುರಭ್ಯಾಸ ಮಿತಿಮೀರಬಹುದು. ಕಛೇರಿಯಲ್ಲಿ ಬಿಡುವು ಮಾಡಿಕೊಂಡು ಕುಟುಂಬಕ್ಕೆ ಸಮಯ. ಹಿಂದಿನ ಸಾಲ ಮರಳಿ ಬರುವ ನಿರೀಕ್ಷೆ. ನಿಮ್ಮ ಬಗ್ಗೆ ಊಹಾಪೋಹಗಳು.
ಧನು ರಾಶಿ: ಹೆಚ್ಚು ಸಮಯ ಸಿಗುವುದರಿಂದ ಇನ್ನೊಬ್ಬರ ಕುರಿತು ಹರಟೆ. ಹಣಕಾಸಿನ ಲೆಕ್ಕಾಚಾರ ಗಟ್ಟಿತನ ಕೊಡಲಿದೆ. ಸಾಹಿತ್ಯ ಕ್ಷೇತ್ರದ ಕಡೆ ಗಮನ. ಹಳೆಯ ವಸ್ತುಗಳು ಸಾಕೆನಿಸಬಹುದು. ಮಕ್ಕಳ ಭವಿಷ್ಯಕ್ಕೆ ಹಣ ಕೂಡಿಡುವಿರಿ. ಸಾಲ ಕೊಟ್ಟವರು ಏನೂ ಕೇಳದಿರುವರು. ಮಕ್ಕಳು ಆರ್ಥಿಕ ನೆರವು ನೀಡುವರು.
ಮಕರ ರಾಶಿ: ದೈಹಿಕ ಸೌಕರ್ಯ ಇಷ್ಟ. ಯಾರ ಮೇಲಾದರೂ ಶಂಕೆ ಇದ್ದರೆ ಸುಮ್ಮನೆ ಕುಳಿತಿರಬೇಡಿ. ಹೊಸ ಯೋಜನೆಯನ್ನು ನಿರ್ವಹಿಸುವ ಅವಕಾಶ. ಎಲ್ಲ ಕಡೆ ಆತ್ಮರಕ್ಷಣೆ. ದಿನವನ್ನು ಜಾಗರೂಕತೆಯಿಂದ ಆಯೋಜಿಸಿ. ಕುಟುಂಬದಲ್ಲಿ ಒಳ್ಳೆಯ ಅಭಿಪ್ರಾಯ. ವೈವಾಹಿಕ ಜೀವನದಲ್ಲಿ ಏರಿಳಿತ ಆರಂಭ.
ಕುಂಭ ರಾಶಿ: ಉದ್ಯೋಗದಲ್ಲಿ ಬಡ್ತಿ ಸಿಗುವ ಖುಷಿ. ಕೆಲವು ಸಂದರ್ಭದಲ್ಲಿ ತಾಳ್ಮೆ ಕಳೆದುಕೊಳ್ಳಬಹುದು. ಹಣಕ್ಕಾಗಿ ತಾಯಿಯನ್ನು ಪೀಡಿಸಬೇಡಿ. ನಿಮ್ಮದೇ ಸರಿ ಇದ್ದರೂ ಪ್ರತಿಪಾದಿಸುವ ಕ್ರಮ ಬದಲಾಗುವುದು. ಸಂಗಾತಿಯೊಂದಿಗೆ ತೊಂದರೆಗಳನ್ನು ಹಂಚಿಕೊಳ್ಳುವಿರಿ. ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯ. ಆತುರದ ಕೆಲಸ ಬೇಡ.
ಮೀನ ರಾಶಿ: ಅಲ್ಪ ಭೂಮಿಯ ಕೃಷಿಯಲ್ಲಿ ಒಳ್ಳೆಯ ಲಾಭದ ಯೋಜನೆ. ಪ್ರಭಾವಿ ವ್ಯಕ್ತಿಗಳ ಭೇಟಿಗೆ ಅವಕಾಶ ಸಿಗದಿರಬಹುದು. ಆರ್ಥಿಕ ವ್ಯವಹಾರದಲ್ಲಿ ದಾಖಲೆ ನಷ್ಟ. ಬಂಧುಗಳ ಆಗಮನದಿಂದ ಕುಟುಂಬ ಜೊತೆ ಹೆಚ್ಚು ಸಮಯ ಕಳೆಯಿರಿ. ನಿಮ್ಮ ಮಾತಿನ ಮೇಲೆ ಕಾರ್ಯಗಳು ನಿಂತಿವೆ. ಓಡಾಟಕ್ಕೆ ವಾಹನದ ಅನುಕೂಲ. ಸ್ವಂತ ಉದ್ಯಮದಲ್ಲಿ ನಿರೀಕ್ಷಿತ ಲಾಭ.





