ನಿಮ್ಮ ಜನ್ಮ ತಾರೀಕಿನಿಂದ ಲೆಕ್ಕ ಹಾಕುವ ಜನ್ಮ ಸಂಖ್ಯೆ ನಿಮ್ಮ ಭವಿಷ್ಯ, ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಸೂಚನೆ ನೀಡುತ್ತದೆ. ಇಂದಿನ ದಿನ ನಿಮಗೇನು ತಂದೊಡ್ಡಬಹುದು ಎಂಬುದರ ಸಂಕ್ಷಿಪ್ತ ವಿವರ ಇಲ್ಲಿದೆ.
ಜನ್ಮ ಸಂಖ್ಯೆ 1 (1, 10, 19, 28 ರಂದು ಜನನ):
ಇಂದು ನಿಮಗೆ ಬಹಳ ಶುಭದಿನ. ಬ್ಯಾಂಕಿಂಗ್, ಶಿಕ್ಷಣ, ಅಥವಾ ಕಂಪನಿಯ ಹಿರಿಯ ಹುದ್ದೆಗಳಲ್ಲಿ ಕೆಲಸ ಮಾಡುವವರಿಗೆ ಉತ್ತಮ ಅವಕಾಶಗಳು ಸಿಗಲಿವೆ. ಸ್ಟಾರ್ಟ್ಅಪ್ ಆರಂಭಿಸಲು ಹಣಕಾಸು ಸಹಾಯ ದೊರೆಯಬಹುದು. ವ್ಯಾಪಾರ ವಿಸ್ತರಣೆಗೆ ಉತ್ತಮ ದಿನ. ಕಾನೂನು ಸಮಸ್ಯೆಗಳಿದ್ದರೆ ಅವು ನಿವಾರಣೆಯಾಗಬಹುದು.
ಜನ್ಮ ಸಂಖ್ಯೆ 2 (2, 11, 20, 29 ರಂದು ಜನನ):
ಇಂದು ಜಾಗರೂಕರಾಗಿರಿ. ನಿಮ್ಮ ರಹಸ್ಯ ವಿಚಾರಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡಿ. ಸಂಗಾತಿಯಿಂದ ಅಸಮಾಧಾನ ಎದುರಾಗಬಹುದು. ಗುಂಪು ಸಂದರ್ಭಗಳಲ್ಲಿ ಮಾತನ್ನು ಜಾಗರೂಕತೆಯಿಂದ ಆಡಿ. ಹಳೆಯ ಪ್ರೇಮ ವಿಚಾರಗಳು ಮತ್ತೆ ಚರ್ಚೆಗೆ ಬರಬಹುದು.
ಜನ್ಮ ಸಂಖ್ಯೆ 3 (3, 12, 21, 30 ರಂದು ಜನನ):
ಮಕ್ಕಳ ವಿಷಯಗಳು ಮುಖ್ಯವಾಗಬಹುದು. ಕೆಲಸದಲ್ಲಿ ಉತ್ಸಾಹ ಕಡಿಮೆ ಇರಬಹುದು. ಪ್ರಯಾಣ ಬಹಳಷ್ಟು ಆಗಬಹುದು. ಇತರರ ಮೇಲೆ ಅವಲಂಬಿಸಿದ ಕೆಲಸಗಳು ಪೂರ್ಣಗೊಳ್ಳದೆ ಒತ್ತಡ ಉಂಟಾಗಬಹುದು. ವೈದ್ಯರು, ಸಿಎ, ವಕೀಲರು – ಇವರಿಗೆ ವಿರೋಧ ಉಂಟಾಗಬಹುದು. ಹಳೆಯ ಸೋಶಿಯಲ್ ಮೀಡಿಯಾ ಪೋಸ್ಟ್ಗಳು ತೊಂದರೆ ಕೊಡಬಹುದು.
ಜನ್ಮ ಸಂಖ್ಯೆ 4 (4, 13, 22, 31 ರಂದು ಜನನ):
ಇಂದು ಅವಮಾನದ ಸನ್ನಿವೇಶ ಎದುರಾಗಬಹುದು. ಕಿರಿಯರು ಅಥವಾ ಕನಿಷ್ಠ ಹುದ್ದೆಯವರು ಅವಹೇಳನ ಮಾಡಬಹುದು. ನಿರೀಕ್ಷೆ ಇಟ್ಟಿದ್ದ ಹುದ್ದೆ ಕೈತಪ್ಪಿಹೋಗಬಹುದು. ಮೇಲಧಿಕಾರಿಯಿಂದ ಟೀಕೆ ಎದುರಾಗಬಹುದು. ಹಳೆಯ ದ್ವೇಷಗಳು ತಲೆ ಎತ್ತಬಹುದು.
ಜನ್ಮ ಸಂಖ್ಯೆ 5 (5, 14, 23 ರಂದು ಜನನ):
ನಿಮ್ಮ ಎಚ್ಚರಿಕೆ ಮತ್ತು ಸಮಯ ಜ್ಞಾನಕ್ಕೆ ಮೆಚ್ಚುಗೆ ಸಿಗಲಿದೆ. ಅಕೌಂಟ್ಸ್ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಬಡ್ತಿ/ವೇತನ ವೃದ್ಧಿ ಸುದ್ದಿ ದೊರೆಯಬಹುದು. ಮದುವೆಗೆ ಸಂಬಂಧಿಸಿದ ಶುಭ ಸುದ್ದಿ ಬರಲಿದೆ. ಮಧುಮೇಹ/ಬಿಪಿ ರೋಗಿಗಳು ಆರೋಗ್ಯಕ್ಕೆ ಲಕ್ಷ್ಯ ಕೊಡಿ.
ಜನ್ಮ ಸಂಖ್ಯೆ 6 (6, 15, 24 ರಂದು ಜನನ):
ಉದ್ಯೋಗ ಸ್ಥಳದಲ್ಲಿ ನಿಮ್ಮ ನಿಧಾನಗತಿಯ ಬಗ್ಗೆ ಟೀಕೆ ಎದುರಾಗಬಹುದು. ಇತರರೊಂದಿಗೆ ಹೋಲಿಸಿ ನೋಡಬಹುದು. ಸಿಟ್ಟಿಗೆ ಎಡೆ ಕೊಡಬೇಡಿ, ತಾಳ್ಮೆ ತೋರಿ. ಸಾಲಗಳನ್ನು ಸಮಯಕ್ಕೆ ತೀರಿಸಲು ಪ್ರಯತ್ನಿಸಿ. ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯ ಬಗ್ಗೆ ಎಚ್ಚರಿಕೆ ವಹಿಸಿ.
ಜನ್ಮ ಸಂಖ್ಯೆ 7 (7, 16, 25 ರಂದು ಜನನ):
ಹಣಕಾಸಿನ ಗೊಂದಲಗಳು ಬಗೆಹರಿಯಲಿವೆ. ಕಷ್ಟಕರವಾದ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ವಿದೇಶದ ಉದ್ಯೋಗಕ್ಕೆ ಅಡೆತಡೆಗಳು ದೂರವಾಗಬಹುದು. ಮನೆ ಅಥವಾ ಜಮೀನು ಖರೀದಿಗೆ ಉತ್ತಮ ಅವಕಾಶ. ತರಕಾರಿ, ಹೂವು-ಹಣ್ಣು, ಬಳೆ ಅಂಗಡಿ – ಇವುಗಳಲ್ಲಿ ಆದಾಯ ಹೆಚ್ಚಳ.
ಜನ್ಮ ಸಂಖ್ಯೆ 8 (8, 17, 26 ರಂದು ಜನನ):
ಕುಟುಂಬದ ವ್ಯವಹಾರದಿಂದ ಸ್ವತಂತ್ರವಾಗಿ ವ್ಯಾಪಾರ ಆರಂಭಿಸಲು ಆಲೋಚನೆ. ಖಾಸಗಿ ಉದ್ಯೋಗದಲ್ಲಿ ಇಷ್ಟವಿಲ್ಲದ ವಿಭಾಗಕ್ಕೆ ವರ್ಗಾವಣೆ ಆಗಬಹುದು. ನಿರ್ಧಾರ ತೆಗೆದುಕೊಳ್ಳಲು ತಡ ಮಾಡಿದರೆ ಅವಕಾಶ ಕಳೆದುಕೊಳ್ಳಬಹುದು. ಮದುವೆ ನಿಶ್ಚಯ ಇರುವವರು ಸಣ್ಣ ವಿಷಯಗಳಲ್ಲಿ ಜಗಳ ಆಡಬೇಡಿ.
ಜನ್ಮ ಸಂಖ್ಯೆ 9 (9, 18, 27 ರಂದು ಜನನ):
ಕೆಲಸಕ್ಕೆ ಸಂಬಂಧಿಸಿದ ಗ್ಯಾಜೆಟ್ಗಳನ್ನು ಖರೀದಿಸಲು ಹಣ ಖರ್ಚು ಆಗಬಹುದು. ಹಣಕಾಸು ಸಹಾಯಕ್ಕೆ ಸ್ನೇಹಿತರು ಮುಂದೆ ಬರಬಹುದು. ಹೊಸ ಮನೆಗೆ ಬೇಕಾದರೆ ಒಳ್ಳೆಯ ಆಯ್ಕೆ ಸಿಗಬಹುದು. ಕುಟುಂಬದಲ್ಲಿ ಸಾಲ ಮತ್ತು ಬಜೆಟ್ ಚರ್ಚೆ ಆಗಬಹುದು. ಹಳೆಯ ನಿರ್ಧಾರಗಳ ಬಗ್ಗೆ ಆಕ್ಷೇಪ ಎದುರಾಗಬಹುದು, ಆದರೆ ಧೈರ್ಯವಾಗಿರಿ.