ಜನ್ಮಸಂಖ್ಯೆ 1 (1, 10, 19, 28): ನಿಮ್ಮ ಸಲಹೆ ಮತ್ತು ಅನುಭವಕ್ಕೆ ಸುತ್ತಮುತ್ತಲಿನವರು ಮನ್ನಣೆ ನೀಡಲಿದ್ದಾರೆ. ಈ ಹಿಂದೆ ನೀಡಿದ ಸಹಾಯವನ್ನು ನಿಮ್ಮ ಆಪ್ತರು ನೆನಪಿಸಿಕೊಳ್ಳಲಿದ್ದಾರೆ. ದೂರದ ಪ್ರದೇಶದಿಂದ ಶುಭ ಸುದ್ದಿ ಬರಲಿದೆ. ಇವೆಂಟ್ ಮ್ಯಾನೇಜ್ಮೆಂಟ್, ಅಡುಗೆ, ಹೂವು-ತರಕಾರಿ ಸರಬರಾಜು ಅಥವಾ ಇಂಟೀರಿಯರ್ ಡಿಸೈನ್ ಮಾಡುವವರಿಗೆ ಲಾಭದಾಯಕ ಆರ್ಡರ್ಗಳು ದೊರೆಯಲಿವೆ.
ಜನ್ಮಸಂಖ್ಯೆ 2 (2, 11, 20, 29): ಜೀವನಸಂಗಾತಿಯೊಂದಿಗಿನ ಬಾಂಧವ್ಯ ಗಟ್ಟಿಯಾಗಲಿದೆ. ಪ್ರೇಮಿಗಳಿಗೆ ಸಂತೋಷದ ದಿನ. ಸಿನಿಮಾ ರಂಗದವರಿಗೆ ದೊಡ್ಡ ಅವಕಾಶಗಳು ಬರಲಿವೆ. ಆರೋಗ್ಯ ಸಮಸ್ಯೆಗಳಿದ್ದವರಿಗೆ ಸರಿಯಾದ ಚಿಕಿತ್ಸೆ ಸಿಗಲಿದೆ. ಹೊಸ ಹೂಡಿಕೆದಾರರಿಗೆ ಉಪಯುಕ್ತ ವ್ಯಕ್ತಿಯ ಪರಿಚಯವಾಗಿ, ಅವರ ಸಲಹೆಯಿಂದ ಲಾಭವಾಗಲಿದೆ. ಖಾಸಗಿ ಕಂಪನಿಗಳಲ್ಲಿ ಇಷ್ಟದ ವಿಭಾಗಕ್ಕೆ ವರ್ಗಾವಣೆ ಆಗಬಹುದು.
ಜನ್ಮಸಂಖ್ಯೆ 3 (3, 12, 21, 30): ನಿಮ್ಮ ಜೀವನದಿಂದ ವಿಷಕಾರಿ ಸಂಬಂಧಗಳನ್ನು ದೂರ ಮಾಡಿಕೊಳ್ಳಲು ನಿರ್ಧರಿಸಬಹುದು. ಹಳೆಯ ಸಂಗತಿಗಳು ಮನಸ್ಸನ್ನು ಕಾಡಬಹುದು ಮತ್ತು ಕೆಲವರ ಮೇಲೆ ನಂಬಿಕೆ ಇಡಲು ಸಾಧ್ಯವಾಗದಿರಬಹುದು. ಕೆಲಸಗಳಿಗೆ ಡೆಡ್ಲೈನ್ ಹಾಕಿಕೊಂಡು ಮಾಡುವ ಪ್ರವೃತ್ತಿ ಮತ್ತು ನಂತರ ಗಟ್ಟಿ ನಿರ್ಧಾರ ತೀಸುಕೊಳ್ಳುವ ನಿಮ್ಮ ನಡವಳಿಕೆ ಸ್ನೇಹಿತರಿಗೆ ಆಶ್ಚರ್ಯ ಮೂಡಿಸಬಹುದು.
ಜನ್ಮಸಂಖ್ಯೆ 4 (4, 13, 22, 31): ಕೃಷಿಕರಿಗೆ ಹಣಕಾಸಿನ ನಷ್ಟದ ಅಪಾಯ ಇದೆ. ಯಾರಿಗೂ ಏನು ವಾಗ್ದಾನ ಮಾಡುವ ಮುನ್ನ ಯೋಚಿಸಿ. ತಂದೆ ಅಥವಾ ತಂದೆ ಸಮಾನರೊಂದಿಗೆ ಅಭಿಪ್ರಾಯ ಭೇದ ಉಂಟಾಗಬಹುದು, ತಕ್ಷಣ ಬಗೆಹರಿಸದಿದ್ದರೆ ಪರಿಸ್ಥಿತಿ ಜಟಿಲವಾಗಬಹುದು. ನಿಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಿನ ಕೆಲಸವನ್ನು ಒಪ್ಪಿಕೊಳ್ಳಬೇಡಿ.
ಜನ್ಮಸಂಖ್ಯೆ 5 (5, 14, 23): ಹಣಕಾಸು ಒತ್ತಡದಿಂದ ಹೊರಬರಲು ಇತರರ ಸಹಾಯ ಸಿಗಲಿದೆ. ವ್ಯವಹಾರದಲ್ಲಿ ಬಾಕಿ ಉಳಿದ ಹಣವನ್ನು ವಸೂಲು ಮಾಡುವ ಅವಕಾಶ ಬರುತ್ತದೆ. ಹೊಸ ಉದ್ಯೋಗ ಆಫರ್ ಬಂದರೆ ಗಂಭೀರವಾಗಿ ಪರಿಗಣಿಸಿ. ಆಸ್ತಿ-ಜಮೀನು ವ್ಯಾಜ್ಯಗಳನ್ನು ರಾಜೀ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಒದಗಲಿದೆ.
ಜನ್ಮಸಂಖ್ಯೆ 6 (6, 15, 24): ನಿಮ್ಮ ಧೈರ್ಯದ ತೀರ್ಮಾನ ಉತ್ತಮ ಫಲ ನೀಡಲಿದೆ. ಇತರರು ಸಾಧ್ಯವಿಲ್ಲ ಎಂದು ಕೈಬಿಟ್ಟ ಕೆಲಸವನ್ನು ನೀವು ಯಶಸ್ವಿಯಾಗಿ ಪೂರ್ಣಗೊಳಿಸಬಹುದು. ಮನೆ ಅಥವಾ ಕಾರ್ಯಸ್ಥಳದಲ್ಲಿ ನಿಮ್ಮ ಮಾತಿಗೆ ಪ್ರಾಮುಖ್ಯತೆ ಬರಲಿದೆ ಮತ್ತು ಮುಂದಾಳತ್ವದ ಅವಕಾಶ ಸಿಗಲಿದೆ. ಬಹುಕಾಲದಿಂದ ನಿರೀಕ್ಷಿಸಿದ ವೇತನ ವೃದ್ಧಿಯ ಸುದ್ದಿ ಕೂಡ ಬರಲಿದೆ.
ಜನ್ಮಸಂಖ್ಯೆ 7 (7, 16, 25): ನಿಮ್ಮ ಹಿಂದಿನ ಅನುಭವಗಳು ಈಗ ಉಪಯೋಗಕ್ಕೆ ಬರಲಿವೆ. ಉದ್ಯೋಗ ಸ್ಥಳದಲ್ಲಿ ನಿಮಗೆ ಪ್ರಾಮುಖ್ಯತೆ ಸಿಗಲಿದೆ. ದೀರ್ಘಕಾಲದ ಕನಸನ್ನು ನನಸಾಗಿಸುವ ದಿಶೆಯಲ್ಲಿ ಮಹತ್ವದ ಹೆಜ್ಜೆ ಇಡಬಹುದು. ಧಾರ್ಮಿಕ ಕ್ಷೇತ್ರದಲ್ಲಿರುವವರಿಗೆ ಸಾರ್ವಜನಿಕ ಗೌರವ ದೊರೆಯಲಿದೆ. ಬ್ಯಾಂಕ್ ಸಾಲ ಪಡೆಯಲು ಸಹಾಯ ಸಿಗಲಿದೆ.
ಜನ್ಮಸಂಖ್ಯೆ 8 (8, 17, 26): ವ್ಯಾಪಾರ ಮತ್ತು ವೃತ್ತಿಪರ ದೃಷ್ಟಿಯಿಂದ ಅತಿ ಮುಖ್ಯವಾದ ದಿನ. ನಿಮ್ಮ ಸಾಮರ್ಥ್ಯ ಮುಖ್ಯ ವ್ಯಕ್ತಿಗಳ ಗಮನಕ್ಕೆ ಬರುತ್ತದೆ. ಪ್ರೀತಿಪಾತ್ರರೊಂದಿಗೆ ವಿಹಾರಕ್ಕೆ ಹೋಗಲು ಅವಕಾಶ ಮತ್ತು ಉಡುಗೊರೆಗಳು ಸಿಗಬಹುದು. ಮಾಧ್ಯಮಗಳಲ್ಲಿ ಕೆಲಸ ಮಾಡುವವರು ಉದ್ಯೋಗದ ಸಂಬಂಧಿತ ಪ್ರಯಾಣ ಮಾಡಬೇಕಾಗಬಹುದು, ಅದು ಭವಿಷ್ಯದಲ್ಲಿ ಲಾಭದಾಯಕವಾಗಬಹುದು. ಸಾಮಾಜಿಕ ಸಂಪರ್ಕಗಳು ವಿಸ್ತರಿಸಲಿವೆ.
ಜನ್ಮಸಂಖ್ಯೆ 9 (9, 18, 27): ಸಣ್ಣ ಕೆಲಸಗಳನ್ನು ಕೂಡ ಲಕ್ಷ್ಯವಿಟ್ಟು ಮಾಡಿ, ಇಲ್ಲದಿದ್ದರೆ ಇತರರ ಅಸಮಾಧಾನಕ್ಕೆ ಗುರಿಯಾಗಬಹುದು. ಒಂದೇ ವಿಷಯವನ್ನು ಹಲವರು ಹೇಳಿ ಗಾಬರಿ ಮೂಡಿಸಬಹುದು, ಆದ್ದರಿಂದ ತಾಳ್ಮೆ ತೋರಿಸಿ. ಅನಗತ್ಯವಾಗಿ ವಾದಕ್ಕೆ ಇಳಿಯಬೇಡಿ, ಇಲ್ಲದಿದ್ದರೆ ಪರಿಸ್ಥಿತಿ ನಿಮಗೆ ವಿರುದ್ಧವಾಗಬಹುದು.





