ಇಂದು ಮಂಗಳವಾರದಂದು ನಿಮ್ಮ ರಾಶಿಯ ದೈನಂದಿನ ಭವಿಷ್ಯವನ್ನು ತಿಳಿದುಕೊಳ್ಳಿ. ಇಂದು ಚಂದ್ರನ ಸ್ಥಿತಿ ಮತ್ತು ಗ್ರಹಗಳ ಚಲನೆಯಿಂದಾಗಿ ಕೆಲವು ರಾಶಿಗಳಿಗೆ ಶುಭ ಫಲಗಳು ದೊರೆಯುತ್ತವೆ. ಹಣಕಾಸು ಲಾಭ, ಕುಟುಂಬ ಸಂತೋಷ, ಉದ್ಯೋಗದಲ್ಲಿ ಪ್ರಗತಿ ಮತ್ತು ಆರೋಗ್ಯದ ಬಗ್ಗೆ ವಿವರವಾಗಿ ತಿಳಿಯಿರಿ.
ಮೇಷ ರಾಶಿ :
ಗಂಭೀರ ವ್ಯಕ್ತಿತ್ವದಿಂದ ತಮಾಷೆಯನ್ನು ನಿರೀಕ್ಷಿಸಲಾಗದು. ಉತ್ತಮ ವ್ಯಕ್ತಿಗಳನ್ನು ಸಂಪಾದಿಸಲು ನೀವು ಸೋಲುವಿರಿ. ಆದಾಯದ ಕಡೆಗೆ ವಿಶೇಷ ಗಮನ ಇರಲಿದೆ. ಇತರರ ಧಾರ್ಮಿಕ ನಂಬಿಕೆಯನ್ನು ಘಾಸಿಮಾಡುವಿರಿ. ಅನಂತರದ ಹತಾಶೆಯಿಂದ ಕಷ್ಟವಾಗಬಹುದು. ದೂರದ ಬಂಧುವಿನ ಭೇಟಿ ಸಿಗುವುದು. ಸಂಗಾತಿಯ ಮಾತನ್ನು ನಿರ್ಲಕ್ಷಿಸಿದರೆ ಬೇಸರ. ಭೂಮಿ ವ್ಯವಹಾರದಲ್ಲಿ ಲಾಭ ಕಡಿಮೆ.
ವೃಷಭ ರಾಶಿ :
ಸಮರ್ಪಕ ಉತ್ತರದಿಂದ ಸಂತೋಷವಾಗಬಹುದು. ಖಾಲಿಯಾಗಿ ಇರುವ ಬದಲು ಏನನ್ನಾದರೂ ಮಾಡಿ. ಭವಿಷ್ಯಕ್ಕೆ ಉಪಯೋಗವಾಗುವುದು. ಉತ್ಕಟ ಇಚ್ಛೆ ಪೂರ್ಣವಾಗುವ ಸಾಧ್ಯತೆ. ಸಂಬಂಧಗಳಲ್ಲಿ ಒಡಕು ಬರಬಹುದು. ಮನಸ್ಸಿಗೆ ಭಾರವಾದ ವಿಚಾರ ತೆಗೆದುಹಾಕಿ. ಧಾರ್ಮಿಕ ಕಾರ್ಯದಲ್ಲಿ ಶ್ರದ್ಧೆ. ಆಹಾರದಿಂದ ಆರೋಗ್ಯ ಕೆಡಿಸಿಕೊಳ್ಳಬೇಡಿ. ಬೇಕಾದ ವಸ್ತು ಕೊಡುವ ಉದಾರತೆ.
ಮಿಥುನ ರಾಶಿ :
ಸಂಗಾತಿಯ ಜೊತೆ ಕಾಲ ಕಳೆಯಲು ಯೋಜನೆ ಮಾಡಿ. ತಾಳ್ಮೆಯಿಂದ ಆಪತ್ತು ತಪ್ಪಿಸಿ. ಚಿತ್ತಚಾಂಚಲ್ಯ ಕಾರ್ಯ ಗತಿ ತಗ್ಗಿಸಬಹುದು. ವಿದ್ಯಾರ್ಥಿಗಳು ಏಕಾಗ್ರತೆಗೆ ಧ್ಯಾನ-ಯೋಗ ಮಾಡಿ. ರಾಜಕೀಯ ವ್ಯಕ್ತಿಗಳಿಂದ ಸ್ವಲ್ಪ ಲಾಭ.
ಕರ್ಕಾಟಕ ರಾಶಿ :
ಮೃದು ಮಾತಿನಿಂದ ಕಾರ್ಯವಾಗದು. ಮೇಲಧಿಕಾರಿಗಳಿಗೆ ವರದಿ ನೀಡಿ. ಹಳೆಯದನ್ನು ನೆನೆದು ಸಂಕಟ. ವಿನಾಕಾರಣ ಮಿತ್ರರನ್ನು ದೂರ ಮಾಡಬೇಡಿ. ಕೋಪ ನಿಯಂತ್ರಿಸಿ. ಹೂಡಿಕೆಗೆ ಮಾಹಿತಿ ಸಂಗ್ರಹಿಸಿ.
ಸಿಂಹ ರಾಶಿ :
ಸೇವೆಯಿಂದ ನಿವೃತ್ತಿ ಬೇಸರ ತರಬಹುದು. ಅಸೂಯೆ ಇಟ್ಟುಕೊಳ್ಳಬೇಡಿ. ಸಂಗಾತಿಯ ಪ್ರೀತಿಗೆ ಸೋಲುವ ಸಾಧ್ಯತೆ. ಬಯಸಿದ ವಸ್ತು ಅನಾಯಾಸವಾಗಿ ಸಿಗಬಹುದು. ಹೊಸ ಯೋಜನೆಗಳು ತಲೆಯಲ್ಲಿ ಓಡುತ್ತವೆ. ನಿರೀಕ್ಷಿತ ಹಣ ಬಾರದೇ ಹೋಗಬಹುದು.
ಕನ್ಯಾ ರಾಶಿ :
ವ್ಯಾಪಾರದಲ್ಲಿ ಮನೆಯವರ ಜೊತೆ ಜಗಳ. ದ್ವಂದ್ವಗಳು ನಿರ್ಧಾರಕ್ಕೆ ಅಡ್ಡಿ. ಸಂಗಾತಿ ಸಾಲಕ್ಕೆ ಪ್ರಚೋದನೆ. ಕಳೆದುಕೊಂಡ ವಿಶ್ವಾಸ ಮತ್ತೆ ಕೂಡಿಸಲು ಪ್ರಯತ್ನಿಸಿ – ಅದು ಕನ್ನಡಿಯ ಗಾಜಿನಂತೆ ಬಿರುಕು ಎದ್ದು ತೋರುತ್ತದೆ.
ತುಲಾ ರಾಶಿ :
ಹೊಂದಿಕೊಳ್ಳುವ ಗುಣಕ್ಕೆ ಶ್ಲಾಘನೆ. ಕೃತಘ್ನರಾಗಬೇಡಿ. ಕೊಟ್ಟ ಹಣ ಮರಳಿ ಬರಬಹುದು. ವೃತ್ತಿಯಲ್ಲಿ ಅನಿರೀಕ್ಷಿತ ಒತ್ತಡ. ಪ್ರೀತಿಯು ನಿಮಗಾಗದವರ ಮೂಲಕ ತಿಳಿಯುವುದರಿಂದ ಮುಜುಗರ.
ವೃಶ್ಚಿಕ ರಾಶಿ :
ಕಾರ್ಯಕ್ಕೆ ಮೊದಲು ನಕಾರಾತ್ಮಕ ಭಾವ ತೆಗೆದುಹಾಕಿ. ಶಿಸ್ತಿನಿಂದ ಕೆಲಸ ಸುಲಲಿತ. ಮನೆಯ ಹಣಕಾಸು ಸುಧಾರಣೆ. ತಾಳ್ಮೆ ಕಳೆದುಕೊಂಡರೆ ಸಣ್ಣವರಾಗಬೇಕಾಗಬಹುದು.
ಧನು ರಾಶಿ :
ಆನಂದದ ದಿನ ಸಕಾರಾತ್ಮಕ ಚಿಂತನೆ. ವಿದ್ಯಾಭ್ಯಾಸದಿಂದ ಅಪಮಾನ ಸಾಧ್ಯತೆ. ಮಕ್ಕಳ ಜೊತೆ ತಾಳ್ಮೆ. ತಂದೆಯ ಜೊತೆ ಮನಸ್ತಾಪ ನೆಮ್ಮದಿ ಹಾಳು ಮಾಡಬಹುದು.
ಮಕರ ರಾಶಿ :
ಹಣಕಾಸು ಲಾಭಗಳು ಪರಿಸ್ಥಿತಿ ಬಲಪಡಿಸುತ್ತವೆ. ಕುಟುಂಬದಲ್ಲಿ ಸಂತೋಷ ತುಂಬಿ. ಕನಸು ಪೂರ್ಣಗೊಳ್ಳುವ ಖುಷಿ. ಭೋಜನ ಸಮಯಕ್ಕೆ ಮಾಡಿ.
ಕುಂಭ ರಾಶಿ :
ಇನ್ನೊಬ್ಬರ ನಿರ್ಧಾರ ನಿಯಂತ್ರಿಸಿ ಪ್ರೀತಿ ಪಡೆಯಲಾಗದು. ವೃತ್ತಿಯಲ್ಲಿ ಗೌರವ ಬಯಸಿ. ಅನಗತ್ಯ ಖರ್ಚು ಹಾದಿಗಳು ಕಾಣಬಹುದು. ಆರ್ಥಿಕ ಸ್ಥಿತಿ ಎತ್ತು ಏರಿಗೆ ಕೋಣ ನೀರಿಗೆ.
ಮೀನ ರಾಶಿ :
ವ್ಯವಹಾರ ಹಿನ್ನಡೆಯಿಂದ ಹತಾಶೆ. ನಿಜ ಸ್ನೇಹಿತ ಅಗತ್ಯ ಸಮಯದಲ್ಲಿ ಜೊತೆ. ಹಣಕಾಸು ಸ್ಥಿರತೆಗೆ ಪ್ರಯತ್ನ. ಕುಟುಂಬ ಸಾಮರಸ್ಯ. ಚರಾಸ್ತಿ ಶುಭ ಸುದ್ದಿ.





