ನವದೆಹಲಿ: ಇಂದಿನ ‘ಝೆನ್-ಜಿ’ (Gen-Z) ಜಮಾನದಲ್ಲಿ ಮುಕ್ತ ಚಿಂತನೆ ಮತ್ತು ಸ್ವಾತಂತ್ರ್ಯದ ಹೆಸರಿನಲ್ಲಿ ಯುವಜನತೆ ನಾಗರಿಕ ಪ್ರಜ್ಞೆಯ ಗೆರೆ ದಾಟುತ್ತಿದ್ದಾರೆಯೇ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಪುಷ್ಟಿ ನೀಡುವಂತೆ, ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಯುವಜೋಡಿಯೊಂದು ಸಾರ್ವಜನಿಕವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಪ್ಲಾಟ್‌ಫಾರ್ಮ್‌ನಲ್ಲೇ ಬೆಡ್‌ಶೀಟ್ ಹಾಸಿ ಅನಾಚಾರ
ವೈರಲ್ ಆಗಿರುವ ವಿಡಿಯೋದಲ್ಲಿ, ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ಒಂದು ಮೂಲೆಯಲ್ಲಿ ಬೆಡ್‌ಶೀಟ್ ಹಾಸಿಕೊಂಡು ಮಲಗಿರುವ ಜೋಡಿಯ ಚಲನವಲನಗಳು ಅನುಮಾನಾಸ್ಪದವಾಗಿ ಕಂಡುಬಂದಿವೆ. ಇದನ್ನು ಗಮನಿಸಿದ ಸಾರ್ವಜನಿಕರು ಮೊದಲು ವಿಡಿಯೋ ಚಿತ್ರೀಕರಿಸಿದ್ದಾರೆ. ಬೆಡ್‌ಶೀಟ್ ಅತಿಯಾಗಿ ಚಲಿಸುತ್ತಿರುವುದನ್ನು ಕಂಡು ಅಲ್ಲಿದ್ದ ವ್ಯಕ್ತಿಯೊಬ್ಬರು ಕುತೂಹಲದಿಂದ ಅದನ್ನು ಥಟ್ಟನೆ ಎಳೆದಿದ್ದಾರೆ.
😭wtf????
pic.twitter.com/AwhcuLlKN7— rareindianclips (@rareindianclips) February 10, 2026
ಈ ವಿಡಿಯೋ ಎಲ್ಲಿನದು ಎಂಬುದು ಇನ್ನು ಸ್ಪಷ್ಟವಾಗಿಲ್ಲವಾದರೂ, ನೆಟ್ಟಿಗರು ಈ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ರೈಲ್ವೆ ನಿಲ್ದಾಣದಲ್ಲಿ ಕಡಿಮೆ ದರದಲ್ಲಿ ವಿಶ್ರಾಂತಿ ಕೊಠಡಿಗಳು ಲಭ್ಯವಿರುತ್ತವೆ. ಹೀಗಿದ್ದರೂ ಪ್ಲಾಟ್‌ಫಾರ್ಮ್‌ನಲ್ಲೇ ಇಂತಹ ಕೃತ್ಯವೆಸಗಿರುವುದು ಅಕ್ಷಮ್ಯ ಮತ್ತು ಕಾನೂನುಬಾಹಿರ ಎಂದು ಅನೇಕರು ಕಿಡಿಕಾರಿದ್ದಾರೆ.
ಇನ್ನೊಂದೆಡೆ, ಅವರು ತಪ್ಪು ಮಾಡುತ್ತಿರಬಹುದು, ಆದರೆ ಸಾರ್ವಜನಿಕವಾಗಿ ಅವರ ಮೇಲಿದ್ದ ಬಟ್ಟೆ ಅಥವಾ ಬೆಡ್‌ಶೀಟ್ ಎಳೆದು ಮಾನಹಾನಿ ಮಾಡಿದ್ದು ಸರಿಯಲ್ಲ ಎಂದು ಕೆಲವರು ಬೆಡ್‌ಶೀಟ್ ಎಳೆದ ವ್ಯಕ್ತಿಯ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ, ಮಾದಕ ವ್ಯಸನ ಮತ್ತು ಮುಕ್ತ ಪ್ರೇಮದ ಹೆಸರಿನಲ್ಲಿ ಯುವಜನತೆ ಸಾರ್ವಜನಿಕ ಸ್ಥಳಗಳಲ್ಲಿ ಸಂಕೋಚವಿಲ್ಲದೆ ಇಂತಹ ಕೆಲಸಗಳಿಗೆ ಮುಂದಾಗುತ್ತಿರುವುದು ಸಮಾಜದ ಸ್ವಾಸ್ಥ್ಯದ ದೃಷ್ಟಿಯಿಂದ ಕಳವಳಕಾರಿ ಸಂಗತಿಯಾಗಿದೆ.
