ಚೆನ್ನೈ: ತಮಿಳುನಾಡಿನ ಕರೂರ್ ಜಿಲ್ಲೆಯಲ್ಲಿ ಶನಿವಾರ ರಾತ್ರಿ ನಡೆದ ಭೀಕರ ಕಾಲ್ತುಳಿತ ದುರಂತದಲ್ಲಿ 10 ಮಕ್ಕಳು ಮತ್ತು 17 ಮಹಿಳೆಯರು ಸೇರಿದಂತೆ 39 ಜನರು ಸಾವನ್ನಪ್ಪಿದ್ದಾರೆ. 70ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ನಡುವೆ ಜನಪ್ರಿಯ ನಟ-ರಾಜಕಾರಣಿ ವಿಜಯ್ ತಮಿಳುನಾಡು ಮುಖ್ಯಮಂತ್ರಿ ಮು.ಕ. ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರದ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
39 ಜನರ ಸಾವು ಮತ್ತು 90ಕ್ಕೂ ಹೆಚ್ಚು ಜನರಿಗೆ ಗಾಯಗಳಾದ ಈ ಕಾಲ್ತುಳಿತ ಘಟನೆಯನ್ನು ವಿಜಯ್ ‘ದೊಡ್ಡ ಸಂಚು’ ಎಂದು ಕರೆದು, ಸರ್ಕಾರ ಇದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ. ತಮ್ಮ ಟಿವಿಕೆ (ತಮಿಳಿಗ ವೆಟ್ಟಿ ಪಕ್ಷಂ ) ಪಕ್ಷದ ಜನಪ್ರಿಯತೆಯನ್ನು ಹಾಳುಗೆಡೆಯಲು ಈ ಷಡ್ಯಂತ್ರ ಎಂದು ವಿಜಯ್ ಸ್ಪಷ್ಟಪಡಿಸಿದ್ದಾರೆ.
ವಿಜಯ್ ಅವರ ಈ ಆರೋಪಗಳಿಗೆ ಸರ್ಕಾರದಿಂದ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ. ಆದರೆ, ದುರಂತದ ನಂತರ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಪೊಲೀಸರು ಈಗಾಗಲೇ ಟಿವಿಕೆ ಪಕ್ಷದ ಕಾರ್ಯದರ್ಶಿ ಮದಿಯಳಗನ್ ಅವರನ್ನು ಬಂಧಿಸಿದ್ದಾರೆ. ಕರೂರ್ ಎಸ್ಪಿ, ಡಿಎಸ್ಪಿ ಸೇರಿದಂತೆ ಪೊಲೀಸ್ ಅಧಿಕಾರಿಗಳ ತಲೆದಂಡವೂ ಸಾಧ್ಯತೆ ಇದೆ.
ನಟ, ಟಿವಿಕೆ ನಾಯಕ ವಿಜಯ್ ಕಾರ್ಯಕ್ರಮದಲ್ಲಿ ಭೀಕರ ದುರಂತ:33ಕ್ಕೂ ಹೆಚ್ಚು ಸಾ*ವು