ಫೆ.21ರಿಂದ ಚಿನ್ನ, ಪೆಟ್ರೋಲ್ ದರದಲ್ಲಿ ಭಾರಿ ವ್ಯತ್ಯಾಸ ಸಾಧ್ಯತೆ: ಟ್ರಂಪ್ ನಿರ್ಧಾರ ಹಿಂದಿದೆ ಭಯದ ಆತಂಕ!

BeFunky collage 2026 02 19T191540.054

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂತಿಮ ನಿರ್ಧಾರಕ್ಕಾಗಿ ಕಾಯುತ್ತಿರುವ ಹೊತ್ತಿನಲ್ಲಿ, ಇರಾನ್ ಮೇಲೆ ಸಂಭಾವ್ಯ ಏರ್‌ಸ್ಟ್ರೈಕ್‌ಗೆ ಅಮೆರಿಕ ಸೈನ್ಯ ಸಂಪೂರ್ಣ ಸಿದ್ಧವಾಗಿದೆ ಎಂದು ವರದಿಗಳು ತಿಳಿಸಿವೆ. ಫೆಬ್ರವರಿ 21 (ಶನಿವಾರ)ರಿಂದ ದಾಳಿ ಆರಂಭವಾಗುವ ಸಾಧ್ಯತೆ ಇದ್ದು, ಇದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ, ಪೆಟ್ರೋಲ್, ಡೀಸೆಲ್ ಸೇರಿದಂತೆ ಹಲವು ವಸ್ತುಗಳ ಬೆಲೆಯಲ್ಲಿ ಭಾರಿ ಏರಿಕೆಯಾಗುವ ಆತಂಕ ಮೂಡಿದೆ.

ಅಮೆರಿಕದ ಸೈನ್ಯ ಸಿದ್ಧತೆಗಳು :

ಮಾಧ್ಯಮಗಳ ಪ್ರಕಾರ ಅಮೆರಿಕ ಸೈನ್ಯ ಮಧ್ಯಪ್ರಾಚ್ಯದಲ್ಲಿ ಭಾರಿ ಸಂಖ್ಯೆಯ ಯುದ್ಧ ವಿಮಾನಗಳು, ವಿಮಾನವಾಹಕ ನೌಕೆಗಳು ಸೇರಿದಂತೆ ರಿಫ್ಯೂಲಿಂಗ್ ಟ್ಯಾಂಕರ್‌ಗಳು ಮತ್ತು ಇತರ ಸಾಮಗ್ರಿಗಳನ್ನು ನಿಯೋಜಿಸಿದೆ. ಇದು ಇರಾನ್‌ನ ನ್ಯೂಕ್ಲಿಯರ್ ಸೈಟ್‌ಗಳು, ಬ್ಯಾಲಿಸ್ಟಿಕ್ ಮಿಸೈಲ್‌ಗಳು ಮತ್ತು ಸೇನಾ ಸೌಲಭ್ಯಗಳ ಮೇಲೆ ಸ್ಥಿರ ಮತ್ತು ದೀರ್ಘಕಾಲೀನ ದಾಳಿಗೆ ಸಿದ್ಧವಾಗಿದೆ ಎಂದು ಹೇಳಲಾಗುತ್ತಿದೆ. ಟ್ರಂಪ್ ಅಂತಿಮ ಆದೇಶ ನೀಡಿದರೆ ಶನಿವಾರದಿಂದಲೇ ದಾಳಿ ಆರಂಭವಾಗಬಹುದು ಎಂಬ ವರದಿಗಳಿವೆ. ಆದರೆ ಟ್ರಂಪ್ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದು ವೈಟ್ ಹೌಸ್ ಮೂಲಗಳು ತಿಳಿಸಿವೆ.

ಇರಾನ್‌ನಲ್ಲಿ ಇರುವ ಅಮೆರಿಕನ್ ಪ್ರಜೆಗಳಿಗೆ ದೇಶ ತೊರೆಯುವಂತೆ ಸೂಚನೆ ನೀಡಲಾಗಿದ್ದು, ಇದು ದಾಳಿ ಖಚಿತವಾಗುತ್ತಿದೆ ಎಂಬ ಸೂಚನೆಯಾಗಿದೆ.

ಭಾರತದ ಮೇಲೆ ಪರಿಣಾಮಗಳು

ಪ್ರಸ್ತುತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಶೇ.4 ಏರಿಕೆ ಕಂಡಿದ್ದು, ಭಾರತದಲ್ಲಿ ಇಂಧನ ದರದಲ್ಲಿ ಏರಿಕೆಯ ಭಯ ಮೂಡಿದೆ. ಟ್ರಂಪ್ ನಿರ್ಧಾರದ ಮೇಲೆ ಜಾಗತಿಕ ಮಾರುಕಟ್ಟೆಯ ಭವಿಷ್ಯ ಅವಲಂಬಿತವಾಗಿದೆ.

Exit mobile version