2026ರ ವರ್ಷದ ಮೊದಲ ಚಂದ್ರಗ್ರಹಣ ಮಾರ್ಚ್ 3ರಂದು ಗೋಚರ

ಭಾರತದಲ್ಲಿ ಮಾರ್ಚ್ 3, ಮಂಗಳವಾರ ವರ್ಷದ ಮೊದಲ ಚಂದ್ರಗ್ರಹಣ

2026ರ ವರ್ಷದ ಮೊದಲ ಚಂದ್ರಗ್ರಹಣ ಮಾರ್ಚ್ 3ರಂದು (ಮಂಗಳವಾರ) ನಡೆಯಲಿದೆ. ಭಾರತದಲ್ಲಿ ಚಂದ್ರನು ಗ್ರಹಣದಲ್ಲೇ ಉದಯವಾಗುವುದರಿಂದ ಸಂಪೂರ್ಣ ಗ್ರಹಣದ ಆರಂಭದಿಂದಲೇ ಕಾಣಿಸಿಕೊಳ್ಳಲಿದೆ. ಅಂದರೆ ಚಂದ್ರ ಮೂಡುವಾಗಲೇ ಅದು ಗ್ರಹಣದ ಮುಸುಕಿನಲ್ಲಿರುತ್ತದೆ. ಇದು ಭಾರತದಲ್ಲಿ ಭಾಗಶಃ ಅಥವಾ ಅಸ್ಪಷ್ಟವಾಗಿ ಗೋಚರಿಸುವ ಗ್ರಹಣವಾಗಿರುತ್ತದೆ.

ಭಾರತೀಯ ಗ್ರಹಣದ ಮುಖ್ಯ ಸಮಯಗಳು :

ಭಾರತದ ಹೆಚ್ಚಿನ ಭಾಗಗಳಲ್ಲಿ ಚಂದ್ರನು ಸಂಜೆ 6:00ರ ಸುಮಾರಿಗೆ ಉದಯವಾಗುವುದರಿಂದ, ಗ್ರಹಣದ ಕೊನೆಯ ಭಾಗ (ಪೂರ್ಣಗ್ರಹಣದ ನಂತರದ ಹಂತ) ಮಾತ್ರ ಕಾಣುತ್ತದೆ. ಚಂದ್ರನು ಕೆಂಪು-ಕಂದು ಬಣ್ಣದಲ್ಲಿ  ಸಂಜೆಯ ಸಮಯದಲ್ಲಿ ಗೋಚರಿಸುತ್ತದೆ.

ಈಶಾನ್ಯ ರಾಜ್ಯಗಳಲ್ಲಿ ಮಾತ್ರ ಪೂರ್ಣಗ್ರಹಣ (100%) ಗೋಚರ : ಅಸ್ಸಾಂ, ಅರುಣಾಚಲ ಪ್ರದೇಶ ಮತ್ತು ಮೇಘಾಲಯದ ಹಲವು ನಗರಗಳಲ್ಲಿ ಶೇ.100ರಷ್ಟು ಪೂರ್ಣಗ್ರಹಣ ಕಾಣುತ್ತದೆ. ಕೆಲವು ಪ್ರಮುಖ ನಗರಗಳ ವಿವರ:

ದೇಶದ ಉಳಿದ ಭಾಗಗಳಲ್ಲಿ ಏನು ಕಾಣುತ್ತದೆ?

ಕರ್ನಾಟಕದ ಮಂಗಳೂರು, ಬೆಂಗಳೂರು, ಮೈಸೂರು, ದಕ್ಷಿಣ ಭಾರತ, ಉತ್ತರ ಭಾರತ ಮತ್ತು ಪಶ್ಚಿಮ ಭಾರತದಲ್ಲಿ ಸಂಜೆ 6:00ರ ನಂತರ ಚಂದ್ರ ಉದಯವಾಗುವಾಗಲೇ ಗ್ರಹಣದ ಕೊನೆಯ ಹಂತ (ಪೂರ್ಣಗ್ರಹಣದ ನಂತರದ ಭಾಗ) ಮಾತ್ರ ಗೋಚರಿಸುತ್ತದೆ. ಚಂದ್ರನು ಕೆಂಪು ಬಣ್ಣದಲ್ಲಿ ಸಂಜೆಯಲ್ಲಿ ಕಾಣಿಸಿಕೊಳ್ಳುತ್ತಾನೆ.

ನೋಡುವ ಸಲಹೆಗಳು

Exit mobile version