ದೇವರಾಯನದುರ್ಗದಲ್ಲಿ ಬ್ರಹ್ಮರಥೋತ್ಸವ: ಚಂದ್ರಗ್ರಹಣ ಹಿನ್ನೆಲೆ ಸಮಯ ಬದಲಾವಣೆ

BeFunky collage 2026 02 24T130709.828

ತುಮಕೂರು ತಾಲ್ಲೂಕಿನ ಊರ್ಡಿಗೆರೆ ಹೋಬಳಿ ದೇವರಾಯನದುರ್ಗ ಗ್ರಾಮದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮಾರ್ಚ್ 3, 2026ರ ಮಂಗಳವಾರ ಬ್ರಹ್ಮರಥೋತ್ಸವ ನಡೆಯಲಿದೆ. ಆದರೆ ಅದೇ ದಿನ ಮಧ್ಯಾಹ್ನ 3:13ರಿಂದ ಸಂಜೆ 6:47ರವರೆಗೆ ಚಂದ್ರಗ್ರಹಣ ಇರುವ ಕಾರಣ ದೇವಸ್ಥಾನದ ಕಾರ್ಯಕ್ರಮಗಳಲ್ಲಿ ವಿಶೇಷ ಬದಲಾವಣೆ ಮಾಡಲಾಗಿದೆ. ಭಕ್ತಾದಿಗಳು ಈ ಕೆಳಗಿನ ವಿವರಗಳನ್ನು ಗಮನಿಸಿ ಸಹಕರಿಸುವಂತೆ ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ.

ಮಾರ್ಚ್ 3, 2026 (ಮಂಗಳವಾರ) ವಿಶೇಷ ಕಾರ್ಯಕ್ರಮಗಳು:

ಚಂದ್ರಗ್ರಹಣ ಕಾಲದ ವಿಶೇಷ ಸೂಚನೆ :

ಯಾತ್ರಾದಾನ / ಕೊಪ್ಪಲು ಸೇವೆಯ ಬಗ್ಗೆ ಮಹತ್ವದ ಸೂಚನೆ :

ಚಂದ್ರಗ್ರಹಣದಿಂದಾಗಿ ಉತ್ಸವ ಮೂರ್ತಿ (ರಥದಲ್ಲಿ) ಕೊಪ್ಪಲುಗಳಿಗೆ ಹೋಗದ ಕಾರಣ, ಯಾತ್ರಾದಾನ ಸೇವೆಯ ನಂತರ ಕರಿಗಿರಿ ಭವನದಲ್ಲಿ ಪ್ರತಿ ಕೊಪ್ಪಲು ಹಾಕುವ ವ್ಯವಸ್ಥೆ ಮಾಡಲಾಗಿದೆ. ಕೊಪ್ಪಲು ಸೇವಾಕರ್ತರು ಬೆಳಗ್ಗೆ 7:30 ರಿಂದ 10:30ರ ಒಳಗೆ ಕರಿಗಿರಿ ಭವನಕ್ಕೆ ಬಂದು ಪೂಜೆ ನೆರವೇರಿಸಿಕೊಳ್ಳಬೇಕು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಭಕ್ತಾದಿಗಳಿಗೆ ಮನವಿ: ಈ ದಿನದ ವಿಶೇಷ ಸಮಯಸೂಚಿಯನ್ನು ಗಮನಿಸಿ, ದೇವರ ದರ್ಶನ ಮತ್ತು ಸೇವೆಗಳನ್ನು ಸರಿಯಾಗಿ ಪಾಲಿಸಿ. ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಲು ಸಹಕಾರ ನೀಡಿ ಎಂದು ದೇವಸ್ಥಾನದ ಆಡಳಿತ ಮಂಡಳಿ ಸಮಸ್ತ ಭಕ್ತಾದಿಗಳಿಗೆ ವಿನಂತಿಸಿದೆ.

Exit mobile version