ತೆಲಂಗಾಣದಲ್ಲಿ ದಾರುಣ ಘಟನೆ: ಕರ್ನಾಟಕದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾ*ವು

ಕಲಬುರಗಿಯ ಕುಟುಂಬದ ಐವರು ಮೃ*ತ!

Untitled design 2025 08 21t122419.690

ಹೈದರಾಬಾದ್: ಕರ್ನಾಟಕದ ಕಲಬುರಗಿ ಜಿಲ್ಲೆಯ ಒಂದೇ ಕುಟುಂಬಕ್ಕೆ ಸೇರಿದ ಐವರು ತೆಲಂಗಾಣದ ಹೈದರಾಬಾದ್‌ನ ಮಿಯಾಪುರ್‌ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಈ ಘಟನೆಯನ್ನು ಸಾಮೂಹಿಕ ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದು, ತನಿಖೆ ಆರಂಭಿಸಿದ್ದಾರೆ.

ಮೃತರನ್ನು ಕಲಬುರಗಿ ಜಿಲ್ಲೆಯ ಸೇಡಂ ಮಂಡಲದ ರಂಜೋಲಿಯ ಲಕ್ಷ್ಮಯ್ಯ (60), ವೆಂಕಟಮ್ಮ (55), ಅನಿಲ್ (32), ಕವಿತಾ (24), ಮತ್ತು ಎರಡು ವರ್ಷದ ಮಗು ಎಂದು ಗುರುತಿಸಲಾಗಿದೆ. ಈ ಕುಟುಂಬವು ಕಳೆದ ಆರು ವರ್ಷಗಳಿಂದ ಹೈದರಾಬಾದ್‌ನಲ್ಲಿ ವಾಸಿಸುತ್ತಿತ್ತು. ಸ್ಥಳೀಯರಿಂದ ಮಾಹಿತಿ ಪಡೆದ ನಂತರ ಪೊಲೀಸರು ಘಟನಾಸ್ಥಳಕ್ಕೆ ಧಾವಿಸಿ, ಮೃತದೇಹಗಳನ್ನು ವಶಕ್ಕೆ ಪಡೆದು ಶವಪರೀಕ್ಷೆಗೆ ಕಳುಹಿಸಿದ್ದಾರೆ.

ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಆರ್ಥಿಕ ಸಂಕಷ್ಟವೇ ಈ ಸಾಮೂಹಿಕ ಆತ್ಮಹತ್ಯೆಗೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ.

ಇದೇ ರೀತಿಯ ಘಟನೆಗಳು:

ಇದಕ್ಕೂ ಮುಂಚೆ, ಅಹಮದಾಬಾದ್‌ನ ಬಗೋದರಾದಲ್ಲಿ ಒಂದೇ ಕುಟುಂಬದ ಐವರು ಸಾಮೂಹಿಕ ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ನಡೆದಿತ್ತು. ವಿಫುಲ್ ಕಾಂಜಿ ವಾಘೀಲಾ (34), ಸೋನಾಲ್ (26) ದಂಪತಿಗಳು ತಮ್ಮ ಮೂವರು ಮಕ್ಕಳೊಂದಿಗೆ (11, 8 ಮತ್ತು 5 ವರ್ಷದವರು) ಸಾವನ್ನಪ್ಪಿದ್ದರು. ಆರ್ಥಿಕ ಸಂಕಷ್ಟವೇ ಈ ದುರ್ಘಟನೆಗೆ ಕಾರಣವಿರಬಹುದೆಂದು ಊಹಿಸಲಾಗಿತ್ತು.

ಇನ್ನು, ದೆಹಲಿಯಲ್ಲಿ ಕೆಲ ವರ್ಷಗಳ ಹಿಂದೆ ಒಂದೇ ಕುಟುಂಬದ 11 ಜನರು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆಯೂ ದಾಖಲಾಗಿತ್ತು. ಮನೆಯಲ್ಲಿ ಕಂಡುಬಂದ ಪತ್ರಗಳ ಆಧಾರದ ಮೇಲೆ, ಮೂಢನಂಬಿಕೆಗೆ ಒಳಗಾಗಿ ಈ ಆತ್ಮಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಪತ್ರದಲ್ಲಿ, “ಮನುಷ್ಯನ ದೇಹ ಶಾಶ್ವತವಲ್ಲ, ಆತ್ಮವಷ್ಟೇ ಶಾಶ್ವತ. ಕಣ್ಣು ಮತ್ತು ಬಾಯಿಯನ್ನು ಮುಚ್ಚುವ ಮೂಲಕ ಭಯದಿಂದ ಹೊರಬರಬಹುದು,” ಎಂದು ಬರೆಯಲಾಗಿತ್ತು.

Exit mobile version