ಸೋಮನಾಥ: ಪ್ರಧಾನಿ ನರೇಂದ್ರ ಮೋದಿ ಅವರು ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸುವುದರ ಜೊತೆಗೆ, ಅಲ್ಲಿ ಆಯೋಜಿಸಲಾಗಿದ್ದ ‘ಸೋಮನಾಥ ಸ್ವಾಭಿಮಾನ ಪರ್ವ’ದ ಭವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಪ್ರಾಚೀನ ಸಂಸ್ಕೃತಿ ಮತ್ತು ಆಧುನಿಕ ತಂತ್ರಜ್ಞಾನದ ಅಪೂರ್ವ ಸಂಗಮವಾಗಿ ಮೂಡಿಬಂದ ಈ ಕಾರ್ಯಕ್ರಮ ಸಾವಿರಾರು ಭಕ್ತರ ಕಣ್ಮನ ಸೆಳೆಯಿತು.
ಓಂಕಾರ ನಾದದ ದಿವ್ಯ ಅನುಭವ:
ಶನಿವಾರ ಸಂಜೆ ದೇವಾಲಯದ ಆವರಣದಲ್ಲಿ ನಡೆದ ಸಾಮೂಹಿಕ ‘ಓಂಕಾರ ಮಂತ್ರ’ ಪಠಣದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಸುಮಾರು 1000 ಸೆಕೆಂಡುಗಳ ಕಾಲ ಸತತವಾಗಿ ಮೊಳಗಿದ ಓಂಕಾರ ನಾದವು ಇಡೀ ಪ್ರದೇಶದಲ್ಲಿ ಅಧ್ಯಾತ್ಮಿಕ ಅಲೆಗಳನ್ನು ಸೃಷ್ಟಿಸಿತು. ಈ ಬಗ್ಗೆ ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಪ್ರಧಾನಿ, ಓಂ ಎಂಬುದು ವೇದ-ಶಾಸ್ತ್ರಗಳ ಸಾರವಾಗಿದೆ. ಧ್ಯಾನದ ಮೂಲ ಮತ್ತು ಯೋಗದ ಆಧಾರವಾಗಿರುವ ಈ ನಾದದ ಸಾಮೂಹಿಕ ಪಠಣದಲ್ಲಿ ಭಾಗವಹಿಸಿದ್ದು ನನ್ನ ಸೌಭಾಗ್ಯ ಎಂದು ಬಣ್ಣಿಸಿದ್ದಾರೆ.
ॐ हमारे वेदों का, शास्त्रों का, पुराणों का, उपनिषदों और वेदांत का सार है।
ॐ ही ध्यान का मूल है, और योग का आधार है।
ॐ ही साधना में साध्य है।
ॐ ही शब्द ब्रह्म का स्वरूप है।
ॐ से ही हमारे मंत्र प्रारंभ एवं पूर्ण होते हैं।
आज सोमनाथ स्वाभिमान पर्व में 1000 सेकंड्स तक ओंकार… pic.twitter.com/GqHxt8sn9y
— Narendra Modi (@narendramodi) January 10, 2026
ಆಕಾಶದಲ್ಲಿ ಮೂಡಿದ ದೈವಿಕ ಚಿತ್ತಾರ:
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯೆಂದರೆ ಬರೋಬ್ಬರಿ 3 ಸಾವಿರ ಡ್ರೋನ್‌ಗಳು ನಡೆಸಿದ ಆಕರ್ಷಕ ಪ್ರದರ್ಶನ. ನೀಲಾಕಾಶದಲ್ಲಿ ಈ ಡ್ರೋನ್‌ಗಳು ಸೋಮನಾಥ ದೇವಾಲಯದ ಪ್ರತಿಕೃತಿ, ಶಿವಲಿಂಗ, ತ್ರಿಶೂಲ, ಡಮರು ಮತ್ತು ಸೌರಮಂಡಲದಂತಹ ಅದ್ಭುತ ಕಲಾಕೃತಿಗಳನ್ನು ರಚಿಸಿದವು. ಈ ದೃಶ್ಯವೈಭವವು ಭಕ್ತರನ್ನು ಮಂತ್ರಮುಗ್ಧಗೊಳಿಸಿತು. ಪ್ರಾಚೀನ ನಂಬಿಕೆಗಳಿಗೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಿದ ಈ ಡ್ರೋನ್ ಶೋ ಭಾರತದ ಸಾಂಸ್ಕೃತಿಕ ಶಕ್ತಿಯನ್ನು ಜಗತ್ತಿಗೆ ಸಾರುವಂತಿದೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.
सोमनाथ स्वाभिमान पर्व के सुअवसर पर सोमनाथ मंदिर परिसर में भव्यता और दिव्यता से भरा ड्रोन शो देखने का सौभाग्य मिला। इस अद्भुत शो में हमारी प्राचीन आस्था के साथ आधुनिक टेक्नोलॉजी का तालमेल हर किसी को मंत्रमुग्ध कर गया। सोमनाथ की पावन धरा से निकला यह प्रकाशपुंज पूरे विश्व को भारत की… pic.twitter.com/hwKgJsp33T
— Narendra Modi (@narendramodi) January 10, 2026
ಈ ಬಾರಿಯ ‘ಸೋಮನಾಥ ಸ್ವಾಭಿಮಾನ ಪರ್ವ’ಕ್ಕೆ ವಿಶೇಷ ಮಹತ್ವವಿದೆ. ಮಹಮದ್ ಘಜನಿ ಈ ಪವಿತ್ರ ದೇವಾಲಯದ ಮೇಲೆ ದಾಳಿ ನಡೆಸಿ ಇಂದಿಗೆ ಸರಿಯಾಗಿ ಒಂದು ಸಾವಿರ ವರ್ಷಗಳು ತುಂಬಿವೆ. ಜೊತೆಗೆ, ಧ್ವಂಸಗೊಂಡಿದ್ದ ದೇವಾಲಯವನ್ನು ಸರ್ದಾರ್ ವಲ್ಲಭಭಾಯಿ ಪಟೇಲರ ನೇತೃತ್ವದಲ್ಲಿ ಪುನರ್ ನಿರ್ಮಿಸಿ 75 ವರ್ಷಗಳು ಪೂರೈಸಿದ ಸಂಭ್ರಮವೂ ಇದರಲ್ಲಿದೆ. ಭಾರತದ ಸ್ಥಿತಿಸ್ಥಾಪಕತ್ವ ಮತ್ತು ಸಾಂಸ್ಕೃತಿಕ ಸ್ವಾಭಿಮಾನದ ಸಂಕೇತವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ತೀವ್ರ ಚಳಿಯ ನಡುವೆಯೂ ಸಾವಿರಾರು ಭಕ್ತರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ದೀಪಾಲಂಕಾರ ಮತ್ತು ಪಟಾಕಿಗಳ ಸದ್ದಿನ ನಡುವೆ ಸೋಮನಾಥ ಕ್ಷೇತ್ರವು ದೈವಿಕ ಮೆರುಗನ್ನು ಪಡೆದಿತ್ತು. ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ.





