• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, March 18, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

Union Budget 2026 LIVE Update: ಬಜೆಟ್ ಮಂಡನೆ ಮಾಡುತ್ತಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
February 1, 2026 - 11:22 am
in Flash News, ದೇಶ, ವಾಣಿಜ್ಯ
0 0
0
BeFunky collage 2026 02 01T111633.294

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯೂನಿಯನ್ ಬಜೆಟ್ 2026-27 ಮಂಡಿಸುವ ಮೂಲಕ ಭಾರತದ ಇತಿಹಾಸದಲ್ಲಿ ಸತತ 9ನೇ ಬಾರಿಗೆ ಬಜೆಟ್ ಪ್ರಸ್ತುತಪಡಿಸಿದ ದಾಖಲೆ ನಿರ್ಮಿಸಿದ್ದಾರೆ. ಫೆಬ್ರವರಿ 1, 2026ರ ಭಾನುವಾರದಂದು (ಭಾರತದಲ್ಲಿ ಮೊದಲ ಬಾರಿಗೆ ಭಾನುವಾರ ಬಜೆಟ್ ಮಂಡನೆ) ಸಂಸತ್ತಿನಲ್ಲಿ ನಡೆದ ಈ ಐತಿಹಾಸಿಕ ಘಟನೆಯಲ್ಲಿ ಅವರು ಕಾಂಚೀವರಂ ರೇಷ್ಮೆ ಸೀರೆಯಲ್ಲಿ ಮಿಂಚಿದರು. ಈ ಸೀರೆಯು ತಮಿಳುನಾಡಿನ ಶತಮಾನಗಳ ಹಳೆಯ ಕೈಮಗ್ಗ ನೇಕಾರಿಕೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ಅವರ ಸಾಂಸ್ಕೃತಿಕ ಹೆಮ್ಮೆಯ ಸಂಕೇತವಾಗಿದೆ.

ಬಜೆಟ್ ಮಂಡನೆಯ ಮುಖ್ಯ ಅಂಶಗಳು :

RelatedPosts

ಯುಗಾದಿ 2026: ಹೊಸ ವರ್ಷದ ಪೂಜೆಗೆ ಇಲ್ಲಿದೆ ಶುಭ ಮುಹೂರ್ತ ಮತ್ತು ಸರಳ ಪೂಜಾ ವಿಧಿ ವಿಧಾನ

ಎಲ್ಲಾ ರೀತಿಯ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳನ್ನ ಬ್ಯಾನ್‌ ಮಾಡಿದ ಕೇಂದ್ರ: ಜಾಹೀರಾತು ನೀಡಿದ್ರೂ ಜೈಲು ಗ್ಯಾರಂಟಿ

ಯುಗಾದಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಶಾಕ್: ಖಾಸಗಿ ಬಸ್ ದರ ಬರೋಬ್ಬರಿ 5 ಪಟ್ಟು ಏರಿಕೆ

ಯುಗಾದಿ 2026: ಹೊಸ ವರ್ಷದ ಆರಂಭದಲ್ಲಿ ಈ 5 ವಸ್ತುಗಳನ್ನು ಮನೆಗೆ ತನ್ನಿ, ಬೆನ್ನತ್ತಿ ಬರಲಿದೆ ಅದೃಷ್ಟ

ADVERTISEMENT
ADVERTISEMENT

ನಿರ್ಮಲಾ ಸೀತಾರಾಮನ್ ಅವರು ತಮ್ಮ ಭಾಷಣದಲ್ಲಿ ಭಾರತದ ಆರ್ಥಿಕತೆಯ ಬಲವನ್ನು ಒತ್ತಿ ಹೇಳಿದರು. ಜಾಗತಿಕ ಅಸ್ಥಿರತೆ ನಡುವೆಯೂ ಭಾರತದ ಆರ್ಥಿಕತೆ ಸುಭದ್ರವಾಗಿ, ಶಿಸ್ತುಬದ್ಧವಾಗಿ ಮುನ್ನಡೆಯುತ್ತಿದೆ ಎಂದು ತಿಳಿಸಿದರು. ಮುಖ್ಯ ಪಾಯಿಂಟ್‌ಗಳು:

ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಅವರು ಭಾರತದ ಆರ್ಥಿಕತೆಯ ಬಲವನ್ನು ಈ ರೀತಿ ಒತ್ತಿ ಹೇಳಿದರು:

  • ಭಾರತದ ಆರ್ಥಿಕತೆ ಸುಭದ್ರವಾಗಿದೆ ಮತ್ತು ಶಿಸ್ತುಬದ್ಧವಾಗಿದೆ.
  • ಜಾಗತಿಕ ಅಸ್ಥಿರತೆಯ ನಡುವೆಯೂ ಭಾರತದ ಆರ್ಥಿಕತೆ ಸುಭದ್ರವಾಗಿ ಮುನ್ನಡೆಯುತ್ತಿದೆ.
  • ಸರ್ಕಾರವು ಸಾಕಷ್ಟು ಆರ್ಥಿಕ ಸುಧಾರಣೆಗಳನ್ನು ಮಾಡಿದೆ; ಆತ್ಮನಿರ್ಭರತೆಯ ಆಧಾರದ ಮೇಲೆ ಸುಧಾರಣೆಗಳು.
  • ಆಮದಿನ ಮೇಲೆ ದೇಶದ ಆರ್ಥಿಕತೆ ಅವಲಂಬಿತವಾಗಿಲ್ಲ.
  • ದೇಶದ ಜಿಡಿಪಿ ಬೆಳವಣಿಗೆಯು ವಿಶ್ವದಲ್ಲೇ ಅತಿ ಹೆಚ್ಚು (ಸುಮಾರು 7% ಮಟ್ಟದಲ್ಲಿ).
  • ಹೊಸ ತಂತ್ರಜ್ಞಾನಗಳು (ವಿಶೇಷವಾಗಿ ಎಐ) ಆಡಳಿತ ಸುಧಾರಣೆಗೆ ಸಹಾಯ ಮಾಡಿವೆ.
  • ವಿಕಸಿತ ಭಾರತ ಆಶಯದ ಅಡಿಯಲ್ಲಿ ಆರ್ಥಿಕಾಭಿವೃದ್ಧಿ.
  • ವಿಶ್ವದ ಅತಿದೊಡ್ಡ ಆರ್ಥಿಕತೆಯಾಗಿ ಭಾರತ ಮುನ್ನುಗ್ಗುತ್ತಿದೆ.
  • ರೈತರು, ಎಸ್ಸಿ-ಎಸ್ಟಿ ಸಮುದಾಯಗಳಿಗೆ ಲಾಭ ತಲುಪುತ್ತಿದೆ.
  • ಇದು ಕರ್ತವ್ಯ ಭವನದಲ್ಲಿ ಸಿದ್ಧವಾದ ಮೊದಲ ಬಜೆಟ್.
  • ಮೂರು ಪ್ರಮುಖ ಕರ್ತವ್ಯಗಳು:
    1. ದೇಶದ ಆರ್ಥಿಕ ಅಭಿವೃದ್ಧಿ (ಮೊದಲ ಕರ್ತವ್ಯ).
    2. ಜನರ ನಿರೀಕ್ಷೆಗಳಿಗೆ ಸ್ಪಂದಿಸುವುದು (ಎರಡನೇ ಕರ್ತವ್ಯ).
    3. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಲ್ಲ ಜಾತಿ, ಧರ್ಮ, ಸಮುದಾಯಗಳ ಶ್ರೇಯೋಭಿವೃದ್ಧಿ ಮತ್ತು ಭಾಗೀದಾರಿಕೆ (ಮೂರನೇ ಕರ್ತವ್ಯ).
  • ಎಐ ತಂತ್ರಜ್ಞಾನದ ಮೂಲಕ ಆಡಳಿತ ಸುಧಾರಣೆ.
  • ಉದ್ಯೋಗ ಸೃಷ್ಟಿ ಮತ್ತು ಉದ್ಯಮಗಳ ಅಭಿವೃದ್ಧಿಗೆ ಆದ್ಯತೆ.
  • ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗ.
  • ಆರ್ಥಿಕ ಅಭಿವೃದ್ಧಿಗೆ 6 ಪ್ರಮುಖ ಪ್ರದೇಶಗಳಲ್ಲಿ ಸುಧಾರಣೆ ಅಗತ್ಯ: ಉತ್ಪಾದನಾ ವಲಯ, ಕೈಗಾರಿಕಾ ವಲಯ, ಎಂಎಸ್‌ಎಂಇ, ಮೂಲಸೌಕರ್ಯ ಅಭಿವೃದ್ಧಿ, ರಕ್ಷಣೆ ಮತ್ತು ನಗರ ಕೇಂದ್ರೀಕೃತ ಆರ್ಥಿಕಾಭಿವೃದ್ಧಿ.
  • ಬಯೋ ಫಾರ್ಮಾ ಶಕ್ತಿ,  ಉದ್ಯಮದ ಅಭಿವೃದ್ಧಿ.

ಪ್ರಮುಖ ಘೋಷಣೆಗಳು ಮತ್ತು ಕ್ರಮಗಳು :

ಬಜೆಟ್ ಆರ್ಥಿಕ ಬೆಳವಣಿಗೆಗಾಗಿ ಆರು ಪ್ರದೇಶಗಳಲ್ಲಿ ಹಸ್ತಕ್ಷೇಪ ಮಾಡುವುದಾಗಿ ಘೋಷಿಸಲಾಗಿದೆ:

  • 7 ವ್ಯೂಹಾತ್ಮಕ ವಲಯಗಳಲ್ಲಿ ಉತ್ಪಾದನಾ ಸ್ಕೇಲ್ ಅಪ್.
  • ಪರಂಪರಾಗತ ಕೈಗಾರಿಕಾ ವಲಯಗಳ ಪುನರುಜ್ಜೀವನ.
  • ಚಾಂಪಿಯನ್ MSMEಗಳ ಸೃಷ್ಟಿ.
  • ಮೂಲಸೌಕರ್ಯಕ್ಕೆ ತಳ್ಳುವಿಕೆ.
  • ದೀರ್ಘಕಾಲೀನ ಭದ್ರತೆ ಮತ್ತು ಸ್ಥಿರತೆ.
  • ನಗರ ಆರ್ಥಿಕ ಪ್ರದೇಶಗಳ ಅಭಿವೃದ್ಧಿ.

ಪ್ರಮುಖ ಘೋಷಣೆಗಳು:

  • ಬಯೋಫಾರ್ಮಾ ಶಕ್ತಿ ಯೋಜನೆಗೆ ಮುಂದಿನ 5 ವರ್ಷಗಳಲ್ಲಿ ₹10,000 ಕೋಟಿ ಹೂಡಿಕೆ.  ಭಾರತವನ್ನು ಜಾಗತಿಕ ಬಯೋಫಾರ್ಮಾ ಹಬ್ ಆಗಿ ಮಾಡುವುದು.
  • 3 ಹೊಸ ಫಾರ್ಮಸ್ಯುಟಿಕಲ್ ಸಂಸ್ಥೆಗಳು, ಕ್ಲಿನಿಕಲ್ ಟ್ರಯಲ್ ಸೆಂಟರ್‌ಗಳು.
  • ಇಂಡಿಯಾ ಸೆಮಿಕಂಡಕ್ಟರ್ ಮಿಷನ್ 2.0 . ಸೆಮಿಕಂಡಕ್ಟರ್ ಸರಬರಾಜು ಸರಪಳಿ ಬಲಪಡಿಸುವುದು.
  • ರೇರ್ ಅರ್ಥ್ ಕಾರಿಡಾರ್‌ಗಳ ಸ್ಥಾಪನೆ (ತಮಿಳುನಾಡು, ಕೇರಳ, ಒಡಿಶಾ, ಆಂಧ್ರಪ್ರದೇಶ).
  • 3 ಕೆಮಿಕಲ್ ಪಾರ್ಕ್‌ಗಳ ನಿರ್ಮಾಣ.
  • ಎಂಎಸ್‌ಎಂಇ ಅಭಿವೃದ್ಧಿಗೆ ₹10,000 ಕೋಟಿ ನಿಧಿ, ಮೈಕ್ರೋ ಎಂಟರ್‌ಪ್ರೈಸಸ್‌ಗೆ ಹಣಕಾಸು ನೆರವು.
  • ಜವಳಿ ಉದ್ಯಮಕ್ಕೆ ಮೆಗಾ ಜವಳಿ ಪಾರ್ಕ್‌ಗಳು, ಕೌಶಲ್ಯಾಭಿವೃದ್ಧಿ, ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಉನ್ನತೀಕರಣ.
  • 200 ಲೆಗಸಿ ಕೈಗಾರಿಕಾ ಕ್ಲಸ್ಟರ್‌ಗಳ ಪುನರುಜ್ಜೀವನ.
  • ಆತ್ಮನಿರ್ಭರ ಭಾರತಕ್ಕಾಗಿ ₹2,000 ಕೋಟಿ ಅನುದಾನ.
  • ರಾಷ್ಟ್ರೀಯ ವಾಟರ್ ವೇಸ್, ಕೋಸ್ಟಲ್ ಕಾರ್ಗೊ ಪ್ರಮೋಷನ್ ಸ್ಕೀಮ್.
  • ಎಐ ತಂತ್ರಜ್ಞಾನದ ಮೂಲಕ ಆಡಳಿತ ಸುಧಾರಣೆ, ಉದ್ಯೋಗ ಸೃಷ್ಟಿ ಆದ್ಯತೆ.
  • ಪ್ರವಾಸೋದ್ಯಮ ಅಭಿವೃದ್ಧಿಗೆ ಸೀ ಪ್ಲೇನ್‌ಗಳ ಅಭಿವೃದ್ಧಿ.
  • ಕಾರ್ಬನ್ ಸಂಗ್ರಹ ತಾಂತ್ರಿಕತೆ ಅಭಿವೃದ್ಧಿಗೆ ಕ್ರಮ.
  • ಇಂಧನ, ಸ್ಟೀಲ್, ರಾಸಾಯನಿಕ ಉದ್ಯಮಗಳ ಅಭಿವೃದ್ಧಿಗೆ ಒತ್ತು.
  • ದೇಶದ ದೇಗುಲ ನಗರಗಳ ಅಭಿವೃದ್ಧಿಗೆ ಕ್ರಮ.
  • ದೇಶದ 10 ಬಂದರುಗಳನ್ನು ಸಂಪರ್ಕಿಸುವ ಯೋಜನೆ.
  •  ಹೈಸ್ಪೀಡ್ ರೈಲು ಕಾರಿಡಾರ್‌ಗಳ ಸ್ಥಾಪನೆಗೆ ಕ್ರಮ.
  • ಬೆಂಗಳೂರು-ಚೆನ್ನೈ, ಬೆಂಗಳೂರು-ಹೈದ್ರಾಬಾದ್ ರೈಲು ಕಾರಿಡಾರ್.
  • ಭಾರತದ ಬ್ಯಾಂಕಿಂಗ್ ವಲಯ ಭಾರೀ ಲಾಭದಲ್ಲಿದೆ.
  • ದೇಶದ ಶೇ. 98ರಷ್ಟು ಗ್ರಾಮಗಳಿಗೆ ಬ್ಯಾಂಕಿಂಗ್ ವಲಯ ತಲುಪಿದೆ.
  • ವಿಕಸಿತ ಭಾರತದ ಬ್ಯಾಂಕಿಂಗ್ ಗಾಗಿ ಉನ್ನತಮಟ್ಟದ ಸಮಿತಿ ರಚನೆ.
  • ಭಾರತದ ಮುಂದಿನ ಹಂತದ ಅಭಿವೃದ್ಧಿಗಾಗಿ ಯೋಜನೆ.
  • ಗ್ರಾಮೀಣ ವಿದ್ಯುದೀಕರಣ ನಿಗಮ ಸ್ಥಾಪನೆ.
  • ವಿದೇಶಿ ಹೂಡಿಕೆ ನಿರ್ವಹಣೆಗೆ ಹೊಸ ಘಟಕ.
  • ಕಾರ್ಪೊರೇಟ್ ಬಾಂಡ್, ಮುನ್ಸಿಪಲ್ ಬಾಂಡ್ ನಿರ್ವಹಣೆಗೆ ಕ್ರಮ.
  • ಅಮೃತ್ ಯೋಜನೆಯಡಿ ಬಾಂಡ್ ನಿರ್ವಹಣೆ.
  • ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್‌ಗೆ ಸರ್ಕಾರದ ಆದ್ಯತೆ.
  • ವಿದೇಶಗಳಿಂದ ಭಾರತದ ಕಾರ್ಪೊರೇಟ್ ಸಂಸ್ಥೆಗಳಿಗೆ ಹೂಡಿಕೆ ಮಾರ್ಗ ಸರಳೀಕರಣ. ಸದ್ಯ ಇರುವ ಶೇ. 10 ಹೂಡಿಕೆ ಮಿತಿ ಶೇ. 20ಕ್ಕೆ ಏರಿಕೆ.
  • ಕೃಷಿಕ, ಮಹಿಳೆ, ವಿಕಲಾಂಗರ ಶ್ರೇಯೋಭಿವೃದ್ಧಿಗೆ ಎಐ ಬಳಕೆ.
  • 25 ಕೋಟಿ ಜನರನ್ನು ಸರ್ಕಾರ ಬಡತನದಿಂದ ಹೊರಗೆ ತಂದಿದೆ.ಇದಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿತ್ತು.
  • ಸೇವಾ ವಲಯವು ಯುವ ಜನಾಂಗಕ್ಕೆ ಉದ್ಯೋಗಾವಕಾಶ ಒದಗಿಸಿದೆ. ಯುವ ಜನರ ಶಿಕ್ಷಣ, ಉದ್ಯೋಗ, ಉದ್ಯಮಕ್ಕೆ ನೆರವು.ಸೇವಾ ವಲಯದಲ್ಲಿ ಭಾರತ ವಿಶ್ವ ನಾಯಕ ಆಗಲಿದೆ.  ಯುವ ಜನತೆಗೆ ಹೊಸ ತಂತ್ರಜ್ಞಾನ ಅಳವಡಿಕೆ, ಕಲಿಕೆಗೆ ಆದ್ಯತೆ.
  • ಆರೋಗ್ಯ ವಲಯದಲ್ಲಿ ಹೊಸ ಕಲಿಕೆಗೆ ಆದ್ಯತೆ . ಹೊಸ ಸಂಸ್ಥೆಗಳ ನಿರ್ಮಾಣ ಹಲವು ರೀತಿಯ ಆರೋಗ್ಯ ಸೇವೆ ನೀಡಬಲ್ಲ ಬಹುಕೌಶಲ್ಯಗಳ ಕಲಿಕೆಗೆ ಆದ್ಯತೆ.
  • ಮೆಡಿಕಲ್ ಟೂರಿಸಂ ಅಭಿವೃದ್ಧಿಗೆ ಆದ್ಯತೆ. ಇದಕ್ಕಾಗಿ 5 ಹಬ್‌ಗಳ ಸ್ಥಾಪನೆ ಆಯುಷ್ ಕೇಂದ್ರಗಳನ್ನೂ ಒಳಗೊಂಡ ಮೆಡಿಕಲ್ ಟೂರಿಸಂ ಹಬ್ ಸ್ಥಾಪನೆ. ಈ ಮೂಲಕ ಆರೋಗ್ಯ ವಲಯದಲ್ಲಿ ಭಾರೀ ಪ್ರಮಾಣದ ಉದ್ಯೋಗ ಸೃಷ್ಟಿ.
  • ಯೋಗಕ್ಕೆ ಜಾಗತಿಕ ಮನ್ನಣೆ ಇದೆ: ಆಯುರ್ವೇದಕ್ಕೂ ಜಾಗತಿಕ ಮನ್ನಣೆ ಸಿಕ್ಕಿದೆ. ಆಯುರ್ವೇದ ಉತ್ಪನ್ನಗಳ ತಯಾರಿಕೆ, ಉತ್ಪಾದನೆ ವೇಗಗೊಳಿಸಲು ಕ್ರಮ, ಆಯುಷ್ ಫಾರ್ಮಸಿಗಳ ಸ್ಥಾಪನೆಗೆ ಸರ್ಕಾರದ ಕ್ರಮ.
  • ಜಾಮ್‌ನಗರದಲ್ಲಿ ಆರೋಗ್ಯ ಹಬ್ ನಿರ್ಮಾಣ.
  • ಪಶುಸಂಗೋಪನಾ ಅಭಿವೃದ್ದಿಗೆ ಕೇಂದ್ರ ಸರ್ಕಾರದ ಕ್ರಮ. ಪಶುಸಂಗೋಪನಾ ಆಸ್ಪತ್ರೆ, ಲ್ಯಾಬ್ ನಿರ್ಮಾಣಕ್ಕೆ ಖಾಸಗಿ ಸಹಭಾಗಿತ್ವ.
  • ಕಂಟೆಂಟ್ ಕ್ರಿಯೇಟರ್ ಲ್ಯಾಬ್ ಗಳ ನಿರ್ಮಾಣಕ್ಕೆ ಆದ್ಯತೆ.
  • ಭಾರತೀಯ ಡಿಸೈನ್ ಉದ್ಯಮದ ಶ್ರೇಯೋಭಿವೃದ್ಧಿಗೂ ಕ್ರಮ.ಇದಕ್ಕಾಗಿ ರಾಷ್ಟ್ರೀಯ ಇನ್ ಸ್ಟಿಟ್ಯೂಟ್ ನಿರ್ಮಾಣಕ್ಕೆ ಯೋಜನೆ.
  • 5 ಯೂನಿವರ್ಸಿಟಿ ಟೌನ್ ಶಿಪ್ ನಿರ್ಮಾಣಕ್ಕೆ ಆದ್ಯತೆ. ಸಂಶೋಧನಾ ಕಾಲೇಜು, ಸಂಸ್ಥೆಗಳ ನಿರ್ಮಾಣ.
  • ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಪ್ರತ್ಯೇಕ ಯೋಜನೆ.
  • ಆಸ್ಟ್ರೋ ಫಿಸಿಕ್ಸ್, ಬಾಹ್ಯಾಕಾಶ ವಿಜ್ಞಾನ ಕಲಿಕೆಗೆ ಹೊಸ ಯೋಜನೆ.
  • ಪ್ರವಾಸೋದ್ಯಮ ರಂಗದಲ್ಲಿ ಉದ್ಯೋಗಾವಕಾಶ ವೃದ್ಧಿಗೆ ಕ್ರಮ.
  • ಆತಿಥ್ಯ ವಲಯದ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಸ್ಥಾಪನೆ.
  • ಆಯುರ್ವೇದ ಔಷಧಗಳ ರಫ್ತು ಹೆಚ್ಚಳಕ್ಕೆ ವಿಶೇಷ ಕ್ರಮ.
  • ವಿಶ್ವ ಮಟ್ಟದ ಟ್ರಕ್ಕಿಂಗ್ ,ಹೈಕಿಂಗ್ ಅನುಭವ ದೊರೆಯುವಂತಾಗಲು ಯೋಜನೆ.
  • ಉತ್ತರಾಖಂಡ, ಜಮ್ಮು ಕಾಶ್ಮೀರದಲ್ಲಿ ಟ್ರಕ್ಕಿಂಗ್ ಯೋಜನೆ.
  • ಆಂಧ್ರದ ಅರಕು ವ್ಯಾಲಿಯಲ್ಲೂ ಟ್ರಕ್ಕಿಂಗ್ ಯೋಜನೆ.
  • ಕರ್ನಾಟಕ ಸೇರಿದಂತೆ ಕರಾವಳಿ ಆಮೆ ಸಂತಾನೋತ್ಪತ್ತಿ ಉಳಿಕೆಗೆ ಯೋಜನೆ.
  • 10 ಸಾವಿರ ಗೈಡ್ ಗಳಿಗೆ ಸೂಕ್ತ ಪ್ರವಾಸೋದ್ಯಮ ತರಬೇತಿ. ಪಾರಂಪರಿಕ ಪ್ರವಾಸೋದ್ಯಮ ರಂಗದ ಅಭಿವೃದ್ಧಿ.
  • ಖೇಲೋ ಇಂಡಿಯಾ ಮಿಷನ್ ಆರಂಭಕ್ಕೆ ನಿರ್ಧಾರ. ಯೋಜನೆ ಅಡಿ ಟ್ರೈನಿಂಗ್ ಕೇಂದ್ರಗಳ ನಿರ್ಮಾಣ.
  • ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಆಶಯದಡಿ ರೈತರ ಆದಾಯ ಹೆಚ್ಚಳಕ್ಕೆ ಕ್ರಮ.
  • ದಿವ್ಯಾಂಗ ಜನರಿಗೆ ವಿಶೇಷ ತರಬೇತಿ ಯೋಜನೆ.
  • ಈಶಾನ್ಯ ರಾಜ್ಯಗಳ ಅಭಿವೃದ್ದಿ & ಉದ್ಯೋಗಾವಕಾಶ ಹೆಚ್ಚಳ
  • ಕೃಷಿ ಉತ್ಪನ್ನಗಳ ಉನ್ನತೀಕರಣಕ್ಕೆ ಯೋಜನೆ.
  • ತೆಂಗು, ಬಾದಾಮಿ ಬೆಳೆಗಳಿಗೆ ಯೋಜನೆಯಡಿ ನೆರವು..ತೆಂಗು ಬೆಳೆ ಉತ್ಪಾದನೆ ಹೆಚ್ಚಳಕ್ಕೆ ಹೊಸ ಯೋಜನೆ.
  • ಭಾರತೀಯ ಗೋಡಂಬಿ & ಕೋಕೋ ಬೆಳೆಯನ್ನು ಜಾಗತಿಕ ಮಟ್ಟಕ್ಕೆ ಏರಿಸಲು ಕ್ರಮ.
  • ಶ್ರೀಗಂಧದ ಬೆಳೆಯನ್ನು ಹೆಚ್ಚಿನ ಮಟ್ಟದಲ್ಲಿ ಬೆಳೆಯುವಂತೆ ಕ್ರಮ.
  • ಒಣ ಹಣ್ಣುಗಳ ಬೆಳೆಗೆ ಉತ್ತಮ ಬೆಲೆ ಒದಗಿಸಲು ಕ್ರಮ.
  • ಭಾರತ ವಿಸ್ತಾರ ಎಐ ಟೂಲ್ ಮೂಲಕ ಕೃಷಿಗೆ ನೆರವು.
  • ಗ್ರಾಮೀಣ ಮಹಿಳೆಯರ ಆದಾಯ ವೃದ್ಧಿಗೆ ಲಖ್ಪತಿ ದೀದಿ ಯೋಜನೆ.
  • ದಿವ್ಯಾಂಗ್ ಜನ್ ಕೌಶಲ ಯೋಜನೆ ಮೂಲಕ ವಿಕಲಾಂಗರಿಗೆ ನೆರವು.
  • ದಿವ್ಯಾಂಗರಿಗೆ ಗೌರವಯುತ ಬದುಕು ಸಿಗುವಂತಾಗಲು ಯೋಜನೆ.
  • ಕೃತಕ ಅಂಗಾಂಗ ತಯಾರಿಕಾ ವಲಯಕ್ಕೆ ಹೆಚ್ಚಿನ ನೆರವು.
  • ದಿವ್ಯಾಂಗರು & ಹಿರಿಯ ನಾಗರಿಕರಿಗೆ ಕೃತಕ ಅಂಗಾಂಗ ಸಿಗುವಂತಾಗಲು ಯೋಜನೆ.
  • ನಿಮ್ಹಾನ್ಸ್ 2 ಯೋಜನೆಗೆ ಚಾಲನೆ, ರಾಂಚಿಯಲ್ಲಿ ಸ್ಥಾಪನೆ.
  • ಬಡ ಜನರ ಆರೋಗ್ಯ ವೆಚ್ಚಗಳನ್ನು ಕಡಿಮೆ ಮಾಡಲು ಸೂಕ್ತ ಕ್ರಮ.
  • ಈಶಾನ್ಯ ರಾಜ್ಯಗಳಿಗೆ ಪೂರ್ವೋದಯ ಯೋಜನೆ. ಇದಕ್ಕಾಗಿ ಕೈಗಾರಿಕಾ ವಲಯಗಳ ನಿರ್ಮಾಣಕ್ಕೆ ಕ್ರಮ.
  • ಈಶಾನ್ಯ ರಾಜ್ಯಗಳಿಗೆ 4 ಸಾವಿರ ಇ ಬಸ್ ಗಳನ್ನು ನೀಡಲು ಕ್ರಮ.
  • ಬೌದ್ಧ ಧರ್ಮದ ಕ್ಷೇತ್ರಗಳ ಅಭಿವೃದ್ಧಿಗೆ ವಿಶೇಷ ಯೋಜನೆ.
  • 16ನೇ ಹಣಕಾಸು ಆಯೋಗದ ವರದಿಯನ್ವಯ ಯೋಜನೆ ಜಾರಿ. ಆಯೋಗದ ಎಲ್ಲಾ ವರದಿಗಳನ್ನು ಸರ್ಕಾರ ಒಪ್ಪಿದೆ.
  • 1.4 ಲಕ್ಷ ಕೋಟಿ ರೂ.ಗಳನ್ನು ರಾಜ್ಯಗಳಿಗೆ ಮೀಸಲಿಡಲು ಕ್ರಮ.
  • ಗ್ರಾಮೀಣ, ನಗರ & ಪಟ್ಟಣಗಳಿಗೆ ಹಣ ನೀಡಿಕೆ.
  • ಕೇಂದ್ರ ಸರ್ಕಾರವು ಸಾಲದ ಮೇಲಿನ ಬಡ್ಡಿ ವೆಚ್ಚ ಕಡಿಮೆ ಮಾಡ್ತಿದೆ. ಇದಕ್ಕಾಗಿ ಸರ್ಕಾರ ಆರ್ಥಿಕ ಶಿಸ್ತು ಸಾಧಿಸಿದೆ.
  • ದೇಶದ ಆರ್ಥಿಕ ಕೊರತೆಯನ್ನು ಕಡಿಮೆ ಮಾಡಲು ಸರ್ವ ಕ್ರಮ. ಕೊರತೆ ಬಜೆಟ್‌ನ ಪ್ರಮಾಣ ಕಡಿಮೆ ಮಾಡಲು ಸರ್ಕಾರ ಕ್ರಮ.

 

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 03 18T230820.973

ಯುಗಾದಿ 2026: ಹೊಸ ವರ್ಷದ ಪೂಜೆಗೆ ಇಲ್ಲಿದೆ ಶುಭ ಮುಹೂರ್ತ ಮತ್ತು ಸರಳ ಪೂಜಾ ವಿಧಿ ವಿಧಾನ

by ಯಶಸ್ವಿನಿ ಎಂ
March 18, 2026 - 11:09 pm
0

Untitled design 2026 03 18T223528.327

ಒಣ ಕೆಮ್ಮಿನಿಂದ ರಾತ್ರಿ ನಿದ್ದೆ ಬರುತ್ತಿಲ್ಲವೇ ? ಈ 5 ಮನೆಮದ್ದುಗಳನ್ನು ಇಂದೇ ಟ್ರೈ ಮಾಡಿ

by ಯಶಸ್ವಿನಿ ಎಂ
March 18, 2026 - 10:44 pm
0

Untitled design 2026 03 18T222232.545

ಎಲ್ಲಾ ರೀತಿಯ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳನ್ನ ಬ್ಯಾನ್‌ ಮಾಡಿದ ಕೇಂದ್ರ: ಜಾಹೀರಾತು ನೀಡಿದ್ರೂ ಜೈಲು ಗ್ಯಾರಂಟಿ

by ಯಶಸ್ವಿನಿ ಎಂ
March 18, 2026 - 10:24 pm
0

Untitled design 2026 03 18T215005.627

ಯುಗಾದಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಶಾಕ್: ಖಾಸಗಿ ಬಸ್ ದರ ಬರೋಬ್ಬರಿ 5 ಪಟ್ಟು ಏರಿಕೆ

by ಯಶಸ್ವಿನಿ ಎಂ
March 18, 2026 - 9:54 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 18T230820.973
    ಯುಗಾದಿ 2026: ಹೊಸ ವರ್ಷದ ಪೂಜೆಗೆ ಇಲ್ಲಿದೆ ಶುಭ ಮುಹೂರ್ತ ಮತ್ತು ಸರಳ ಪೂಜಾ ವಿಧಿ ವಿಧಾನ
    March 18, 2026 | 0
  • Untitled design 2026 03 18T222232.545
    ಎಲ್ಲಾ ರೀತಿಯ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳನ್ನ ಬ್ಯಾನ್‌ ಮಾಡಿದ ಕೇಂದ್ರ: ಜಾಹೀರಾತು ನೀಡಿದ್ರೂ ಜೈಲು ಗ್ಯಾರಂಟಿ
    March 18, 2026 | 0
  • Untitled design 2026 03 18T215005.627
    ಯುಗಾದಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಶಾಕ್: ಖಾಸಗಿ ಬಸ್ ದರ ಬರೋಬ್ಬರಿ 5 ಪಟ್ಟು ಏರಿಕೆ
    March 18, 2026 | 0
  • ನೋರಾ (4)
    ಯುಗಾದಿ 2026: ಹೊಸ ವರ್ಷದ ಆರಂಭದಲ್ಲಿ ಈ 5 ವಸ್ತುಗಳನ್ನು ಮನೆಗೆ ತನ್ನಿ, ಬೆನ್ನತ್ತಿ ಬರಲಿದೆ ಅದೃಷ್ಟ
    March 18, 2026 | 0
  • ನೋರಾ (3)
    ದಿವಾಳಿಯಾದ ಪಾಕಿಸ್ತಾನ: ಪೆಟ್ರೋಲ್, ಗ್ಯಾಸ್ ಬಿಕ್ಕಟ್ಟಿಗೆ ಗಣರಾಜ್ಯೋತ್ಸವ ಆಚರಣೆಯೇ ರದ್ದು
    March 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version