ಹುಡುಗಿ ಬದಲು ಆಕೆಯ ಅಮ್ಮನಿಗೆ ಮದುವೆ: ಶಾಕ್‌ ಆದ ಮದುಮಗ

Untitled design 2025 04 20t074004.148

ಮೇರಠ್‌: “ನೂರು ಸುಳ್ಳು ಹೇಳಿ ಒಂದು ಮದುವೆ ಮಾಡು” ಎಂಬ ಗಾದೆ ಮಾತಿಗೆ ಸಾಕ್ಷಿಯಾಗುವಂತಹ ವಿಚಿತ್ರ ಘಟನೆ ಉತ್ತರ ಪ್ರದೇಶದ ಮೇರಠ್‌ನಲ್ಲಿ ನಡೆದಿದೆ. ಇಲ್ಲೊಂದು ಕುಟುಂಬ, ಯುವಕನನ್ನು ಮದುವೆಯ ಹೆಸರಲ್ಲಿ ವಂಚಿಸಿ, ಯುವತಿಯ ಬದಲು ಆಕೆಯ ತಾಯಿಯನ್ನು ಮದುವೆ ಮಾಡಿಸಿರುವ ಘಟನೆ ನಡೆದಿದೆ.

ಮೇರಠ್‌ನ ಬ್ರಹ್ಮಪುರಿ ಪ್ರದೇಶದ ನಿವಾಸಿಯಾದ 22 ವರ್ಷದ ಮೊಹಮ್ಮದ್‌ ಅಜೀಂ ಎಂಬ ಯುವಕನಿಗೆ ಈ ವಿಚಿತ್ರ ಅನುಭವವಾಗಿದೆ. ಅಜೀಂನ ಸಹೋದರ ನದೀಂ ಹಾಗೂ ಅತ್ತಿಗೆ ಶೈದಾ, ಶಾಮ್ಲಿ ಜಿಲ್ಲೆ ಮೂಲದ ಮನ್ತಾಶಾ ಎಂಬ ಯುವತಿಯನ್ನು ಅಜೀಂಗೆ ಮದುವೆ ನಿಶ್ಚಿಯವಾಗಿತ್ತು. ಇವರಿಬ್ಬರೂ ಮದುವೆಯ ಎಲ್ಲಾ ವ್ಯವಸ್ಥೆ ಮಾಡಲಾಯಿತು.

ನಿಗದಿಯಾದಂತೆ ಮಾರ್ಚ್ 31ರಂದು ಮದುವೆ ಕಾರ್ಯಕ್ರಮ ಜರುಗಿತು. ಮೌಲ್ವಿ ಸಂಪ್ರದಾಯದಂತೆ ನಿಕಾಹ್ ಪದ್ಧತಿಯನ್ನು ನಿರ್ವಹಿಸುತ್ತಿದ್ದಾಗ ವಧುವಿನ ಹೆಸರನ್ನು ‘ತಾಹಿರಾ’ ಎಂದು ಘೋಷಿಸಲಾಯಿತು. ಈ ಹೆಸರನ್ನು ಕೇಳಿದ ಅಜೀಂ ಅಚ್ಚರಿ ಪಟ್ಟಿದ್ದು, ವಿಷಯ ತಿಳಿದು ಸುಮ್ಮನಾಗಿದ್ದ. ಆದರೆ ಮದುವೆ ಪೂರ್ಣಗೊಂಡ ನಂತರ ಮುಸುಕು ತೆಗೆದಾಗ ಅಜೀಂನಿ ಶಾಕ್‌ ಆಗಿದ್ದಾನೆ. ಮದುವೆಯ ಉಡುಗೆಯಲ್ಲಿ ಯುವತಿ 21 ವರ್ಷದ ಮನ್ತಾಶಾ ಅಲ್ಲದೇ, ಅವಳ ತಾಯಿ ಸುಮಾರು 45 ವರ್ಷದ ತಾಹಿರಾ ಎಂಬವರಾಗಿದ್ದರು.

ಈ ವಂಚನೆಗೆ ಗುರಿಯಾದ ಅಜೀಂ ತಕ್ಷಣವೇ ತನ್ನ ಅಸಮಾಧಾನ ವ್ಯಕ್ತಪಡಿಸಿ ಪ್ರಶ್ನೆ ಮಾಡಿದ್ದಾನೆ. ಆದರೆ ಅದಕ್ಕೆ ಬದಲಾಗಿ ಅವನ ಸಹೋದರ ನದೀಂ ಮತ್ತು ಅತ್ತಿಗೆ ಶೈದಾ, ‘ನೀನು ಏನಾದರೂ ಕಾನೂನು ಕ್ರಮ ತೆಗೆದುಕೊಂಡರೆ, ನಕಲಿ ಅತ್ಯಾಚಾರದ ಆರೋಪ ಹಾಕುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ.

ಆದರೂ ಧೈರ್ಯ ತಾಳಿದ ಅಜೀಂ, ಪೋಲಿಸರಿಗೆ ದೂರು ನೀಡಿದ್ದು, ಈ ಮದುವೆಗೆ ತನ್ನಿಂದಲೇ 5 ಲಕ್ಷ ರೂಪಾಯಿ ಮೊತ್ತವನ್ನು ವಧುವಿಗೆ ನೀಡಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾನೆ.

ಈ ಪ್ರಕರಣದ ಬಗ್ಗೆ ಬ್ರಹ್ಮಪುರಿ ಪ್ರದೇಶದ ಸಿಇಒ ಸೌಮ್ಯಾ ಆಸ್ಥಾನಾ ಈ ಕುರಿತು ಪ್ರತಿಕ್ರಿಯೆ ನೀಡುತ್ತಾ, “ವಿವಾಹದ ಕುಟುಂಬಗಳ ನಡುವಿನ ವಿವಾದ ಇತ್ಯರ್ಥವಾಗಿದೆ. ಅಜೀಂ ಇದೀಗ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ನಮಗೆ ತಿಳಿಸಿದ್ದಾನೆ” ಎಂದು ತಿಳಿಸಿದ್ದಾರೆ.

Exit mobile version