• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, December 6, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ದೇಶ

ಹಾಡಹಗಲೇ ಬಲೂಚಿಸ್ತಾನದ ಹೋರಾಟಗಾರ್ತಿಯ ಕಿಡ್ನಾಪ್: ಪಾಕ್‌ ಸೈನಿಕರ ವಿರುದ್ಧ ಮಹಿಳಾ ಸೈನ್ಯದ ಹೋರಾಟ..!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
March 26, 2025 - 3:56 pm
in ದೇಶ
0 0
0
Film (72)

ಹೆಸರು ಮಹರಂಗ್ ಬಲೂಚ್. ವಯಸ್ಸು ಸುಮಾರು ವರ್ಷ. ವೃತ್ತಿಯಲ್ಲಿ ಡಾಕ್ಟರ್. ಪಾಕಿಸ್ತಾನದ ಬಲೂಚಿಸ್ತಾನದ ಈ ಹೆಣ್ಣು ಮಗಳಿಗಾಗಿ ಈಗ ಇಡೀ ಜಗತ್ತು ಬೊಬ್ಬಿರಿಯುತ್ತಿದೆ. ಅದಕ್ಕೆ ಕಾರಣವಾಗಿದ್ದು ಈ ಒಂದು ವಿಡಿಯೋ.
ಹಾಡಹಗಲಲ್ಲೇ ಹೋರಾಟಗಾರ್ತಿ ಕಿಡ್ನಾಪ್..!
ಆ ವಿಡಿಯೋದಲ್ಲಿ ಡಾ.ಮಹರಂಗ್ ಬಲೂಚ್ ಅವರನ್ನ ಮಿಲಿಟರಿ ಅಧಿಕಾರಿಗಳು ಅಕ್ಷರಶಃ ಕಿಡ್ನಾಪ್ ಮಾಡಿದ್ದಾರೆ. ಇದು ರಾತ್ರೋರಾತ್ರಿ.. ಯಾರ ಕಣ್ಣಿಗೂ ಕಾಣದಂತೆ ನಡೆದದ್ದೇನಲ್ಲ. ಸಾವಿರಾರು ಜನರ ಸಮ್ಮುಖದಲ್ಲೇ ಮಹರಂಗ್ ಬಲೂಚ್ ಅವರನ್ನ ಹೊತ್ತುಕೊಂಡು ಹೋಗಿದ್ದಾರೆ. ಇದನ್ನ ಕಿಡ್ನಾಪ್ ಅನ್ನೋದಕ್ಕೆ ಕಾರಣ ಇಷ್ಟೇ. ಈಕೆಯನ್ನ ಎತ್ತಿಕೊಂಡು ಹೋದ ಪಾಕ್ ಸೈನಿಕರು ಈಕೆ ಎಲ್ಲಿದ್ದಾರೆ.. ಹೇಗಿದ್ದಾರೆ.. ಅನ್ನೋದರ ಸಣ್ಣ ಮಾಹಿತಿಯನ್ನೂ ಕೊಡ್ತಿಲ್ಲ. ಬಲೂಚಿಸ್ತಾನದ ಮಹಿಳೆಯರು ಹಳ್ಳಿ ಹಳ್ಳಿಗಳಲ್ಲಿ ಬೀದಿಗೆ ಬಿದ್ದು ಹೋರಾಟಕ್ಕೆ ನಿಂತಿದ್ದಾರೆ. ಅದಕ್ಕೆ ಕಾರಣವೂ ಇದೆ. ಏಕೆಂದರೆ ಈಕೆ ಕೇವಲ ಡಾಕ್ಟರ್ ಅಲ್ಲ, ಈಕೆ ಅಬ್ದುಲ್ ಗಫಾರ್ ಲಾಗೋವ್ ಮಗಳು.

After Dr. Mahrang Baloch, Pakistani police arrest another prominent Baloch activist, Sammi Deen Baloch, while she was staging a peaceful protest in Karachi against the enforced disappearances of Baloch activists and ordinary civilians.

Rights groups demand release of all… pic.twitter.com/kWOwh0Ju72

— Sonam Mahajan (@AsYouNotWish) March 25, 2025


ಸೈನಿಕರು ಹೊತ್ತೊಯ್ದಿದ್ದ ಅಬ್ದುಲ್ ಗಫಾರ್ ಕ್ರೂರವಾಗಿ ಕೊಲೆಯಾಗಿದ್ದರು..!
ಅಬ್ದುಲ್ ಗಫಾರ್ ಅನ್ನೋದು ಬಲೂಚಿಸ್ತಾನಗಳಿಗೆ ಕೇವಲ ವ್ಯಕ್ತಿಯಲ್ಲ, ಅವರ ಸ್ವಾತಂತ್ರ್ಯ ಹೋರಾಟದ ಶಕ್ತಿ. ಈ ಅಬ್ದುಲ್ ಗಫಾರ್ 2009ರಲ್ಲಿ ಈಗ ಈ ಮಹರಂಗ್ ಅವರಿಗೆ ಆಗಿದ್ಯಲ್ಲ.. ಅದೇ ರೀತಿ ಪಾಕ್ ಸೈನಿಕರಿಂದ ಕಿಡ್ನಾಪ್ ಆಗಿದ್ದವರು. ಅವರು ಎಲ್ಲಿದ್ದಾರೆ.. ಹೇಗಿದ್ದಾರೆ ಅನ್ನೋದನ್ನ ಪಾಕಿಸ್ತಾನ ಮಿಲಿಟರಿ ಕೊನೆಗೂ ಹೇಳಲಿಲ್ಲ. 2011ರಲ್ಲಿ ಈಕೆಯ ತಂದೆಯ ಶವ ಸಿಕ್ಕಿತಷ್ಟೇ. ಅಬ್ದುಲ್ ಗಫಾರ್ ಅವರಿಗೆ ಜೀವಂತ ನರಕ ತೋರಿಸಿದ್ದ ಪಾಕ್ ಸೈನಿಕರು, ಚಿತ್ರ ವಿಚಿತ್ರ ಹಿಂಸೆ ಕೊಟ್ಟು ಸಾಯಿಸಿದ್ದರು. ಈಗ ಅದೇ ರೀತಿ ಅವರ ಮಗಳಿಗೂ ಆಗಿದೆ… ಬಲೂಚಿಸ್ತಾನದ ಹೆಣ್ಣು ಮಕ್ಕಳು ಬೀದಿಗಿಳಿದಿರೋದು ಇದೇ ಕಾರಣಕ್ಕೆ.

RelatedPosts

ರಾಷ್ಟ್ರಪತಿ ಭವನದಲ್ಲಿ ಭೋಜನ ಮುಗಿಸಿ ರಷ್ಯಾಗೆ ಮರಳಿದ ಪುಟಿನ್

ಇಂಡಿಗೋ ಚೆಲ್ಲಾಟ..ವಿಮಾನ ಪ್ರಯಾಣಿಕರಿಗೆ ಪ್ರಾಣ ಸಂಕಟ..!

ಹೈದರಾಬಾದ್‌ ಹೌಸ್‌ನಲ್ಲಿ ಪ್ರಧಾನಿ ಮೋದಿ-ಪುಟಿನ್‌ ದ್ವಿಪಕ್ಷೀಯ ಮಾತುಕತೆ

500 ಹೆಚ್ಚು ಇಂಡಿಗೋ ವಿಮಾನ ಹಾರಾಟ ರದ್ದು: ಬೆಂಗಳೂರು ಸೇರಿ ಹಲವೆಡೆ ಪ್ರಯಾಣಿಕರ ಪರದಾಟ

ADVERTISEMENT
ADVERTISEMENT

Baloch women are leading protests against Pakistani military oppression in Balochistan, following the arrest of two prominent women leaders, Mahrang and Sammi. The Pakistani state has systematically suppressed Baloch rights movements for decades.

pic.twitter.com/YGnlgpdYvY

— Habib Khan (@HabibKhanT) March 25, 2025


ಬಲೂಚಿಸ್ತಾನದಲ್ಲಿ ಮಹರಂಗ್ ಶಿಕ್ಷಣ ಕ್ರಾಂತಿ..!
ಅಷ್ಟೇ ಅಲ್ಲ.. ತಂದೆಯ ಕೊಲೆಯ ನಂತರ ಮಹರಂಗ್, ತಂದೆಯ ಹೋರಾಟದ ನೇತೃತ್ವ ವಹಿಸಿಕೊಂಡರು. ಬಲೂಚಿಸ್ತಾನದಲ್ಲಿ ಬಲೂಚಿಗಳನ್ನ ಸೆಕೆಂಡ್ ಗ್ರೇಡ್ ಸಿಟಿಜನ್ನುಗಳಂತೆ ನೋಡಲಾಗುತ್ತೆ. ಅವರಿಗೆ ಶಿಕ್ಷಣವನ್ನಾಗಲೀ, ಆರೋಗ್ಯ ಸೌಕರ್ಯಗಳನ್ನಾಗಲಿ ಕೊಡೋದಿಲ್ಲ. ಈ ಮಹರಂಗ್ ತಾನು ಕಲಿತ ವೈದ್ಯ ವೃತ್ತಿಯನ್ನ ಮಾಡ್ತಾನೇ.. ಅಲ್ಲಿನ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡ್ತಾ ಇದ್ರು. ಆಕೆಯಿಂದ ಶುರುವಾದ ಶಿಕ್ಷಣ ಅಭಿಯಾನ, ಇಡೀ ಬಲೂಚಿಸ್ತಾನಕ್ಕೆ ಹರಡಿತಷ್ಟೇ ಅಲ್ಲ, ಸಾವಿರಾರು ಹೆಣ್ಣು ಮಕ್ಕಳು ಶಿಕ್ಷಣ ಕಲಿತು, ಪುಟ್ಟ ಪುಟ್ಟ ಮಕ್ಕಳಿಗೆ ಶಿಕ್ಷಕಿಯಾದರು. ಹೀಗೆ ಶಿಕ್ಷಣ ಕ್ರಾಂತಿ ಮಾಡಿದ ಮಹರಂಗ್, ಜೊತೆ ಜೊತೆಯಲ್ಲೇ ಹೋರಾಟವನ್ನೂ ಜೀವಂತವಾಗಿಟ್ಟರು. ಪ್ಯಾಲೆಸ್ತೀನ್‌ನಲ್ಲಿ ನಡೆಯೋ ಒಂದು ದಾಳಿಯನ್ನ ಖಂಡಿಸೋ ವಿಶ್ವದ ರಾಷ್ಟ್ರಗಳು, ಬಲೂಚಿಸ್ತಾನದಲ್ಲಿ ಹೆಣ್ಣು ಮಕ್ಕಳ ಮೇಲೆ ಪಾಕ್ ಸೈನಿಕರು ನಡೆಸುವ ದೌರ್ಜನ್ಯವನ್ನ ಏಕೆ ಪ್ರಶ್ನೆ ಮಾಡ್ತಿಲ್ಲ ಎಂದು ಗುಡುಗಿದಾಗ ಜಗತ್ತು ಬೆಚ್ಚಿಬಿದ್ದು ನೋಡಿತ್ತು.
ಪಾಕಿಸ್ತಾನದ ಸರ್ಕಾರಕ್ಕೆ, ವಿಶೇಷವಾಗಿ ಪಾಕ್ ಸೈನಿಕರಿಗೆ ಇದು ನುಂಗಲಾರದ ತುತ್ತಾಯ್ತು. ಆಕ್ರೋಶವಾಯ್ತು. ಪಾಕ್ ಸೈನಿಕರನ್ನು ನಡುಬೀದಿಯಲ್ಲಿ ನಿಲ್ಲಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದ ಮಹರಂಗ್, ಪಾಕ್ ಸೈನಿಕರಿಗೆ ಅಕ್ಷರಶಃ ಸಿಂಹಸ್ವಪ್ನದಂತೆ ಕಾಡುತ್ತಿದ್ದರು.

Baloch National Movement Netherlands Chapter held a protest against the violent crackdown on the Baloch Yakjehti Committee in Quetta and the unlawful arrest of Dr. Mahrang and other leaders.#Balochistan #ReleaseDrMahrangBaloch pic.twitter.com/FhcVl19gfG

— BNM Netherlands (@Bnm_Netherlands) March 25, 2025


ಇತ್ತೀಚೆಗೆ ಬಲೂಚಿಸ್ತಾನದಲ್ಲಿ ಸ್ವಾತಂತ್ರ್ಯ ಹೋರಾಟ ಹಿಂಸಾರೂಪಕ್ಕೆ ತಿರುಗಿದಾಗ.. ಅದನ್ನೇ ಕಾಯುತ್ತಿದ್ದ ಪಾಕ್ ಸೈನಿಕರು ಮಹರಂಗ್ ಅವರನ್ನ ಹೊತ್ತೊಯ್ದಿದ್ದಾರೆ.
ಒಬ್ಬ ಮಹರಂಗ್ ಅವರನ್ನ ಕಿಡ್ನಾಪ್ ಮಾಡಿ ಗುಟ್ಟಾಗಿಟ್ಟ ಪಾಕ್ ಸೈನ್ಯಕ್ಕೀಗ ಲಕ್ಷ ಲಕ್ಷ ಸಂಖ್ಯೆಯಲ್ಲಿ ಬರುತ್ತಿರುವ ಮಹಿಳೆಯರ ಸೈನ್ಯವನ್ನು ಕಂಟ್ರೋಲ್ ಮಾಡೋಕೆ ಆಗ್ತಾ ಇಲ್ಲ. ಆಕೆಯ ರಕ್ಷಣೆಗೀಗ ಜಗತ್ತಿನ ಕೆಲವು ಮಾನವ ಹಕ್ಕು ರಕ್ಷಣಾ ಸಂಘಟನೆಗಳು ಮುಂದೆ ಬಂದಿವೆ. ಜಗತ್ತಿನ ಹಲವು ಕಡೆ ಪ್ರತಿಭಟನೆಗಳಾಗುತ್ತಿವೆ. ಮಹರಂಗ್ ಎಲ್ಲಿದ್ದಾರೆ. ಹೇಗಿದ್ದಾರೆ ಅನ್ನೋದನ್ನ ಪಾಕ್ ಸರ್ಕಾರ ಬಾಯಿ ಬಿಡ್ತಿಲ್ಲ.
ಮಹರಂಗ್ ಎಲ್ಲಿ.. ಸರ್ಕಾರ ಹೇಳ್ತಾನೇ ಇಲ್ಲ..!
10 ಲಕ್ಷಕ್ಕೂ ಹೆಚ್ಚು ಮಹಿಳೆಯರೇ ಬೀದಿಗಿಳಿದಿರುವುದಕ್ಕೆ ಕಾರಣ ಇಷ್ಟೇ. ಅವಳು ಹೆಣವಾಗಿ ಸಿಕ್ಕಬಾರದು. ತಮ್ಮ ಜೀವನ ಬದಲಿಸಲು ಹೋರಾಟ ನಡೆಸುತ್ತಿರುವ ಕ್ರಾಂತಿಯ ಕಿಡಿ ಆರಬಾರದು. ತಮ್ಮ ಜೀವನಕ್ಕಾಗಿ ಮಹರಂಗ್ ತಂದೆ ಜೀವವನ್ನೇ ಬಲಿ ಕೊಟ್ಟಾಗಿದೆ. ಈಗ ಆಕೆಯ ಮಗಳನ್ನೂ ಆಕೆಯ ತಂದೆಯಂತೆ ಕಳೆದುಕೊಳ್ಳಬಾರದು. ತಮ್ಮ ನೋವಿಗೆ ಧ್ವನಿಯಾದವಳ ಪರ ನಾವೇ ಧ್ವನಿ ಎತ್ತದೇ ಹೋದರೆ.. ಬದುಕಿರುವುದಾದರೂ ಏಕೆ.. ಎಂಬ ಆಕ್ರೋಶವೇ ಈ ಹೋರಾಟ ಜ್ವಾಲಾಗ್ನಿಯಾಗಿ ಹರಡುವುದಕ್ಕೆ ಕಾರಣವಾಗಿದೆ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2025 12 06T083351.968

BBK 12: “ನಿರ್ಧಾರ ತೆಗೆದುಕೊಳ್ಳುವ ಯೋಗ್ಯತೆ ಇಲ್ಲ”..ರಕ್ಷಿತಾಗೆ ಮನೆಮಂದಿ ಕ್ಲಾಸ್!

by ಶಾಲಿನಿ ಕೆ. ಡಿ
December 6, 2025 - 8:35 am
0

Untitled design 2025 12 04T071408.916

ಸಂಖ್ಯಾಶಾಸ್ತ್ರ ದಿನಭವಿಷ್ಯ: ಹಣ, ಆರೋಗ್ಯ, ಉದ್ಯೋಗದಲ್ಲಿ ಅವಕಾಶ ಸಿಗಲಿದೆ?

by ಶಾಲಿನಿ ಕೆ. ಡಿ
December 6, 2025 - 8:02 am
0

Untitled design 2025 12 06T071813.072

ಲೋ ಬಿಪಿ ಹೈ ಬಿಪಿಯಷ್ಟೇ ಅಪಾಯಕಾರಿ: ಇದನ್ನು ನಿಯಂತ್ರಿಸಲು ಈ ಆಹಾರಗಳನ್ನು ಪ್ರಯತ್ನಿಸಿ ನೋಡಿ

by ಶಾಲಿನಿ ಕೆ. ಡಿ
December 6, 2025 - 7:34 am
0

Untitled design 2025 12 04T070243.618

ರಾಶಿಫಲ: ಇಂದು ಈ ರಾಶಿಯವರಿಗೆ ಲಾಭದಾಯಕ ದಿನ, ಆರೋಗ್ಯ ಸಮಸ್ಯೆ ಕಾಡಬಹುದು!

by ಶಾಲಿನಿ ಕೆ. ಡಿ
December 6, 2025 - 6:58 am
0

ಸಂಬಂಧಿಸಿದ ಪೋಸ್ಟ್‌ಗಳು

  • Web 2025 12 05T233750.180
    ರಾಷ್ಟ್ರಪತಿ ಭವನದಲ್ಲಿ ಭೋಜನ ಮುಗಿಸಿ ರಷ್ಯಾಗೆ ಮರಳಿದ ಪುಟಿನ್
    December 5, 2025 | 0
  • Web 2025 12 05T215029.412
    ಇಂಡಿಗೋ ಚೆಲ್ಲಾಟ..ವಿಮಾನ ಪ್ರಯಾಣಿಕರಿಗೆ ಪ್ರಾಣ ಸಂಕಟ..!
    December 5, 2025 | 0
  • Web 2025 12 05T163142.495
    ಹೈದರಾಬಾದ್‌ ಹೌಸ್‌ನಲ್ಲಿ ಪ್ರಧಾನಿ ಮೋದಿ-ಪುಟಿನ್‌ ದ್ವಿಪಕ್ಷೀಯ ಮಾತುಕತೆ
    December 5, 2025 | 0
  • Untitled design 2025 12 05T075800.325
    500 ಹೆಚ್ಚು ಇಂಡಿಗೋ ವಿಮಾನ ಹಾರಾಟ ರದ್ದು: ಬೆಂಗಳೂರು ಸೇರಿ ಹಲವೆಡೆ ಪ್ರಯಾಣಿಕರ ಪರದಾಟ
    December 5, 2025 | 0
  • Untitled design 2025 12 04T200018.605
    ಭಾರತಕ್ಕೆ ಬಂದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್; ಪ್ರಧಾನಿ ಮೋದಿಯಿಂದ ಸ್ವಾಗತ
    December 4, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version