• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, April 8, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಲೋಕಸಭಾ ಕ್ಷೇತ್ರಗಳ ಪುನರ್‌ ವಿಂಗಡಣೆ: ದಕ್ಷಿಣ ಭಾರತಕ್ಕೆ ಅನ್ಯಾಯವೋ? ಅವಕಾಶವೋ?

ದಿಲೀಪ್ ಡಿ. ಆರ್ by ದಿಲೀಪ್ ಡಿ. ಆರ್
March 3, 2025 - 5:47 pm
in Flash News, ದೇಶ, ವಿಶೇಷ
0 0
0
Delimitation

ಲೋಕಸಭಾ ಕ್ಷೇತ್ರಗಳ ಪುನರ್‌ ವಿಂಗಡಣೆ (Delimitation) ವಿಚಾರ ಇದೀಗ ಭಾರೀ ರಾಜಕೀಯ ವಾಗ್ಯುದ್ಧಕ್ಕೆ ವೇದಿಕೆಯಾಗಿದೆ. ಹಾಗೆ ನೋಡಿದ್ರೆ ಇದು ಅತ್ಯಂತ ಸೂಕ್ಷ್ಮ ಹಾಗೂ ಸಂವೇದನಾಶೀಲ ವಿಷಯ..! ಜನಸಂಖ್ಯಾ ಬೆಳವಣಿಗೆ, ರಾಜಕೀಯ ಪ್ರಾತಿನಿಧ್ಯ ಮತ್ತು ರಾಜ್ಯಗಳ ನಡುವಿನ ಸಮತೋಲನದ ಮೇಲೆ ಇದು ನೇರ ಪ್ರಭಾವ ಬೀರುತ್ತದೆ. ಕೊನೆಯ ಬಾರಿ ಪುನರ್‌ವಿಂಗಡಣೆ ನಡೆದಿದ್ದು 1971ರ ಜನಗಣತಿಯ ನಂತರ.. ಇದೀಗ 2026ಕ್ಕೆ ಮತ್ತೆ ಪುನರ್‌ ವಿಂಗಡಣೆಗೆ ವೇದಿಕೆ ಸಜ್ಜಾಗಿದೆ. ಆದರೆ, ಈ ಪುನರ್ ವಿಂಗಡಣೆ ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು? ಲಾಭ ಮತ್ತು ನಷ್ಟಗಳೇನು? ಈ ಕುರಿತ ಸಮಗ್ರ ವಿವರ ಇಂತಿದೆ..

ಲೋಕಸಭಾ ಕ್ಷೇತ್ರಗಳ ಪುನರ್‌ ವಿಂಗಡಣೆಯಿಂದ ದಕ್ಷಿಣ ಭಾರತಕ್ಕೆ ಲಾಭವೇನು?

1. ಅಭಿವೃದ್ಧಿ ಹೊಂದಿದ ನಗರಗಳಿಗೆ ಅನುಕೂಲ: ದಕ್ಷಿಣ ಭಾರತದ ರಾಜ್ಯಗಳಲ್ಲಿ ಇರುವ ನಗರಗಳ ಪೈಕಿ ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್ ನಗರಗಳು ಜನಸಂಖ್ಯೆಯಲ್ಲಿ ಸಾಕಷ್ಟು ಬೆಳೆದಿವೆ. ಹೊಸದಾಗಿ ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ ಆದಾಗ ಈ ನಗರಗಳಿಗೆ ಹೆಚ್ಚು ಲೋಕಸಭಾ ಸೀಟುಗಳು ಸಿಗಬಹುದು. ಈ ಮೂಲಕ ನಗರಾಭಿವೃದ್ಧಿ, ಮೂಲಸೌಕರ್ಯ ಮತ್ತು ಸ್ಥಳೀಯ ಸಮಸ್ಯೆಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲು ಸಹಾಯಕವಾಗಲಿದೆ.

RelatedPosts

ನಾಳೆ ಕೇರಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆ: ಮೇ 4ರಂದು ಫಲಿತಾಂಶ

ಚಿನ್ನಸ್ವಾಮಿ ಸ್ಟೇಡಿಯಂ: ಫ್ಯಾನ್ಸ್‌ಗೆ ಕೆಎಸ್‌ಸಿಎಯಿಂದ ಮತ್ತೊಂದು ಸಿಹಿ ಸುದ್ದಿ

“ಪ್ರಾಚೀನ ನಾಗರಿಕತೆಯಿಂದ ಮರೆಯಲಾಗದ ಹೊಡೆತ ಕಾದಿದೆ”: ಅಮೆರಿಕಕ್ಕೆ ಇರಾನ್ ತೀವ್ರ ತಿರುಗೇಟು

ಶಬರಿಮಲೆಗೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ನಿರ್ಬಂಧ ‘ಧಾರ್ಮಿಕ ಸಂಪ್ರದಾಯ’ ಭಾಗ

ADVERTISEMENT
ADVERTISEMENT

2. ಯುವ ಜನತೆಗೆ ಪ್ರಾತಿನಿಧ್ಯ: ದಕ್ಷಿಣ ಭಾರತದಲ್ಲಿ ಯುವ ಜನಸಂಖ್ಯೆ ಹೆಚ್ಚಿದೆ. ಹೊಸ ಕ್ಷೇತ್ರಗಳು ಸೃಷ್ಟಿಯಾದರೆ ಯುವ ನೇತೃತ್ವಕ್ಕೆ ಅವಕಾಶ ನೀಡಬಹುದು. ಈ ಮೂಲಕ, ರಾಜಕೀಯದಲ್ಲಿ ಹೊಸ ದೃಷ್ಟಿಕೋನಗಳನ್ನು ತರಬಹುದು.

3. ರಾಜಕೀಯ ಸ್ಪರ್ಧೆ ಹೆಚ್ಚಳ: ಹೊಸ ಕ್ಷೇತ್ರಗಳು ಹೊಸ ರಾಜಕೀಯ ಪಕ್ಷಗಳು ಮತ್ತು ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸುವ ಸಾಧ್ಯತೆಯನ್ನು ಹೆಚ್ಚಿಸಬಹುದು. ಈ ಮೂಲಕ ಪ್ರಜಾಪ್ರಭುತ್ವವನ್ನು ಬಲ ಪಡಿಸಲು ಸಹಾಯಕವಾಗಲಿದೆ.

ನಷ್ಟಗಳೇನು? ದಕ್ಷಿಣ ಭಾರತದ ರಾಜ್ಯಗಳ ಆತಂಕಗಳೇನು?

1. ರಾಜಕೀಯ ಪ್ರಾತಿನಿಧ್ಯದ ಕ್ಷೀಣತೆ: ದಕ್ಷಿಣ ಭಾರತದ ರಾಜ್ಯಗಳು ಜನಸಂಖ್ಯಾ ನಿಯಂತ್ರಣದಲ್ಲಿ ಯಶಸ್ವಿಯಾಗಿವೆ. 2011ರ ಜನಗಣತಿ ಪ್ರಕಾರ, ಉತ್ತರ ಭಾರತದ ರಾಜ್ಯಗಳ ಜನಸಂಖ್ಯಾ ವೃದ್ಧಿ ದರ ಹೆಚ್ಚು. ಹೀಗಾಗಿ, ಲೋಕಸಭಾ ಕ್ಷೇತ್ರಗಳ ಪುನರ್‌ ವಿಂಗಡಣೆಯು ಜನಸಂಖ್ಯೆಯ ಆಧಾರದ ಮೇಲೆ ನಡೆದರೆ ದಕ್ಷಿಣ ಭಾರತಕ್ಕೆ ಸಿಗುವ ಸೀಟುಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ. ಉದಾಹರಣೆಗೆ, ತಮಿಳುನಾಡಿನಲ್ಲಿ ಸದ್ಯ 39 ಲೋಕಸಭಾ ಸ್ಥಾನಗಳಿವೆ. ಕೇರಳದಲ್ಲಿ 20 ಸ್ಥಾನಗಳಿವೆ. ಈ ರಾಜ್ಯಗಳು ಗಮನಾರ್ಹ ನಷ್ಟವನ್ನು ಎದುರಿಸಬಹುದು.

2. ಆರ್ಥಿಕ-ರಾಜಕೀಯ ಅಸಮತೋಲನ: ದಕ್ಷಿಣ ಭಾರತದ ರಾಜ್ಯಗಳು ಭಾರತದ GDPಗೆ 30% ಕೊಡುಗೆ ನೀಡುತ್ತಿವೆ. ಇಷ್ಟಾದರೂ ಸಂಸತ್ತಿನಲ್ಲಿ ಅವುಗಳ ಪ್ರಾತಿನಿಧ್ಯ ಕುಗ್ಗಿ ಹೋದರೆ ರಾಷ್ಟ್ರೀಯ ನೀತಿ ರೂಪಿಸುವ ವೇಳೆ ದಕ್ಷಿಣ ಭಾರತದ ರಾಜ್ಯಗಳ ಧ್ವನಿ ದುರ್ಬಲವಾಗುತ್ತದೆ. ಈ ಮೂಲಕ ತೆರಿಗೆ ಹಂಚಿಕೆ, ಬಜೆಟ್ ಹಂಚಿಕೆ ಮತ್ತು ಯೋಜನೆಗಳ ಹಂಚಿಕೆ ವೇಳೆ ಅನ್ಯಾಯ ಆಗುವ ಭೀತಿ ಇದೆ.

3. ಭಾಷಾ ವೈವಿಧ್ಯಕ್ಕೂ ಧಕ್ಕೆ: ಹಿಂದಿ-ಪ್ರಾಬಲ್ಯದ ರಾಜ್ಯಗಳು ಸಂಸತ್ತಿನಲ್ಲಿ ಪ್ರಾಬಲ್ಯ ಪಡೆದರೆ, ದಕ್ಷಿಣ ಭಾರತದ ಭಾಷೆಗಳು, ಸಂಸ್ಕೃತಿ, ಮತ್ತು ಪ್ರಾದೇಶಿಕ ಅಗತ್ಯಗಳಿಗೆ ಆದ್ಯತೆ ಸಿಗೋದಿಲ್ಲವೇ ಎಂಬ ಭೀತಿಯೂ ಇದೆ.

4. ರಾಜ್ಯಗಳ ನಡುವಿನ ಒಡಕು: ಉತ್ತರ ಹಾಗೂ ದಕ್ಷಿಣ ಭಾರತದ ರಾಜ್ಯಗಳ ನಡುವೆ ಪ್ರಾತಿನಿಧ್ಯದ ಅಸಮಾನತೆ ಹೆಚ್ಚಾದರೆ ರಾಜ್ಯಗಳ ನಡುವಿನ ಸಂಘರ್ಷ ಹೆಚ್ಚಬಹುದು. ಉದಾಹರಣೆಗೆ, ಕೇಂದ್ರದ ಸಂಪನ್ಮೂಲ ಹಂಚಿಕೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳು ತಮ್ಮನ್ನು “ನಿರ್ಲಕ್ಷಿಸಲಾಗಿದೆ” ಎಂದು ಭಾವಿಸಬಹುದು.

ಈ ಸಮಸ್ಯೆಗೆ ಪರಿಹಾರವೇನು?

1. ಜನಸಂಖ್ಯೆ ಮಾತ್ರವಲ್ಲ, ಇತರ ಅಂಶಗಳನ್ನು ಪರಿಗಣಿಸಿ: ಪುನರ್‌ ವಿಂಗಡಣೆಯ ಸೂತ್ರದಲ್ಲಿ ಜನಸಂಖ್ಯೆಯ ಜೊತೆಗೆ GDP, ಮಾನವಾಭಿವೃದ್ಧಿ ಸೂಚ್ಯಂಕ (HDI), ಮತ್ತು ಭೂ ವಿಸ್ತೀರ್ಣವನ್ನು ಸೇರಿಸಬೇಕು ಎಂಬ ಪ್ರಸ್ತಾಪಗಳಿವೆ.

2. ಸಂವಿಧಾನಕ್ಕೆ ತಿದ್ದುಪಡಿ ತನ್ನಿ: ರಾಜ್ಯಗಳ ನಡುವಿನ ಪ್ರಾತಿನಿಧ್ಯ ಸಮತೋಲನವನ್ನು ಕಾಪಾಡಲು, ಲೋಕಸಭಾ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸುವುದು ಒಂದು ಪರ್ಯಾಯ ಮಾರ್ಗ.

3. ಕೇಂದ್ರದ ಮೇಲಿನ ಅವಲಂಬನೆ ಕಡಿಮೆಯಾಗಲಿ: ರಾಜ್ಯಗಳಿಗೆ ಹೆಚ್ಚು ಸ್ವಾಯತ್ತತೆ ನೀಡಿದರೆ ಕೇಂದ್ರದ ಅವಲಂಬನೆಯನ್ನು ಕಡಿಮೆ ಮಾಡಬಹುದು.

ಒಟ್ಟಿನಲ್ಲಿ ಹೇಳೋದಾದರೆ ಲೋಕಸಭಾ ಕ್ಷೇತ್ರಗಳ ಪುನರ್‌ ವಿಂಗಡಣೆ ಕೇವಲ ಒಂದು ತಾಂತ್ರಿಕ ಪ್ರಕ್ರಿಯೆ ಅಷ್ಟೇ ಅಲ್ಲ, ಇದು ರಾಜಕೀಯ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆ… ದಕ್ಷಿಣ ಭಾರತವು ಜನಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿವೆ. ಆದರೆ, ಯಶಸ್ಸಿಗೆ “ಶಿಕ್ಷೆ” ಆಗೋದು ಬೇಡ! ಹೀಗಾಗಿ, ಈ ವಿಚಾರ ಸಂಬಂಧ ರಾಷ್ಟ್ರೀಯ ಮಟ್ಟದಲ್ಲಿ ಸಮತೋಲಿತ ವಿಮರ್ಶೆ ಅಗತ್ಯ. ಜೊತೆಗೆ ಪ್ರತಿ ರಾಜ್ಯದ ಜನಸಂಖ್ಯೆ, ಆರ್ಥಿಕ ಕೊಡುಗೆ ಮತ್ತು ಸಾಂಸ್ಕೃತಿಕ ಸಂವೇದನೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಸಮನ್ವಯ ಸಾಧಿಸಿದಾಗ ಮಾತ್ರ ಭಾರತದ ಒಕ್ಕೂಟ ವ್ಯವಸ್ಥೆ ಮೇಲಿನ ನಂಬಿಕೆ ಇನ್ನಷ್ಟು ಗಟ್ಟಿಯಾಗುತ್ತದೆ.

ShareSendShareTweetShare
ದಿಲೀಪ್ ಡಿ. ಆರ್

ದಿಲೀಪ್ ಡಿ. ಆರ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಡಿಜಿಟಲ್ ವಿಭಾಗದ ಸಂಪಾದಕರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಡಿಜಿಟಲ್ ಪತ್ರಕರ್ತನಾಗಿ 5 ವರ್ಷ ಹಾಗೂ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 15 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ವಿಜ್ಞಾನ-ತಂತ್ರಜ್ಞಾನ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಹಾಸ್ಯ, ವಿಡಂಬನಾತ್ಮಕ ಬರಹ, ವ್ಯಕ್ತಿ ಚಿತ್ರ, ಜೀವ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಕಾಡು, ಬೆಟ್ಟ ಗುಡ್ಡಗಳ ಚಾರಣ ಮಾಡುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage (48)

ಯುದ್ಧದಲ್ಲೂ ಲಾಭ ಮಾಡಿದ ಗಲ್ಫ್ ದೇಶಗಳು ಯಾವುವು?

by ಶ್ರೀದೇವಿ ಬಿ. ವೈ
April 8, 2026 - 1:51 pm
0

BeFunky collage (46)

ಬಾಗಲಕೋಟೆಯಲ್ಲಿ ಪ್ರೇಯಸಿ ಆ*ತ್ಮಹ*ತ್ಯೆಯ ಸುದ್ದಿ ತಿಳಿದು ಪ್ರಿಯಕರನೂ ಸಾವು!

by ಶ್ರೀದೇವಿ ಬಿ. ವೈ
April 8, 2026 - 1:36 pm
0

BeFunky collage (45)

ಕದನವಿರಾಮ ಬೆನ್ನಲ್ಲೇ ತೈಲ ಬೆಲೆ ಕುಸಿತ! ಪೆಟ್ರೋಲ್-ಡೀಸಲ್ ಬೆಲೆ ಇಳಿಯುತ್ತಾ?

by ಶ್ರೀದೇವಿ ಬಿ. ವೈ
April 8, 2026 - 12:55 pm
0

BeFunky collage (44)

ನಾಳೆ ಕೇರಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆ: ಮೇ 4ರಂದು ಫಲಿತಾಂಶ

by ಶ್ರೀದೇವಿ ಬಿ. ವೈ
April 8, 2026 - 12:32 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (39)
    ಚಿನ್ನಸ್ವಾಮಿ ಸ್ಟೇಡಿಯಂ: ಫ್ಯಾನ್ಸ್‌ಗೆ ಕೆಎಸ್‌ಸಿಎಯಿಂದ ಮತ್ತೊಂದು ಸಿಹಿ ಸುದ್ದಿ
    April 8, 2026 | 0
  • BeFunky collage (28)
    “ಪ್ರಾಚೀನ ನಾಗರಿಕತೆಯಿಂದ ಮರೆಯಲಾಗದ ಹೊಡೆತ ಕಾದಿದೆ”: ಅಮೆರಿಕಕ್ಕೆ ಇರಾನ್ ತೀವ್ರ ತಿರುಗೇಟು
    April 7, 2026 | 0
  • BeFunky collage (21)
    ಗಡುವು ಮುಗಿವ ಮೊದಲೇ ಅಮೆರಿಕ ಇರಾನ್ ಖಾರ್ಗ್ ದ್ವೀಪದ ಮೇಲೆ ಅಮೆರಿಕ ಭಾರೀ ದಾಳಿ
    April 7, 2026 | 0
  • Untitled design (84)
    ವಿದ್ಯಾರ್ಥಿಗಳೇ ಗಮನಿಸಿ! ದ್ವಿತೀಯ ಪಿಯುಸಿ ಫಲಿತಾಂಶದ ಅಧಿಕೃತ ದಿನಾಂಕ ಪ್ರಕಟ
    April 7, 2026 | 0
  • Untitled design (82)
    25 ವರ್ಷಗಳ ನಂತರ ದಿಡೀರನೆ ಮೊದಲ ಪತಿ ಪ್ರತ್ಯಕ್ಷ: ಮೈದುನನ ಜೊತೆ ಸಂಸಾರ ನಡೆಸುತ್ತಿದ್ದ ಪತ್ನಿಗೆ ಶಾಕ್‌
    April 7, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version