ಜನವರಿ 13 ರಿಂದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ 2025 ಧಾರ್ಮಿಕ-ಸಾಂಸ್ಕೃತಿಕ ಮಹಾಸಭೆಯಲ್ಲಿ ಸುಮಾರು 50 ಕೋಟಿ ಭಕ್ತರು ಸ್ನಾನ ಮಾಡಿದ್ದಾರೆ . ಈ ಬೃಹತ್ ಸಮಾಗಮದಲ್ಲಿ ಅತಿ ದೊಡ್ಡ ಸವಾಲೆಂದರೆ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡುವುದು. ಇದಕ್ಕಾಗಿ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು 3.5 ಲಕ್ಷ ಕಿಲೋಗ್ರಾಂ ಬೀಚಿಂಗ್ ಪೌಡರ್, 75,600 ಲೀಟರ್ ಫಿನಾಯಿಲ್, ಮತ್ತು 41,000 ಕಿಲೋಗ್ರಾಂ ಮಾಲಾಥಿಯಾನ್ ಸೇರಿದಂತೆ ಹೆಚ್ಚಿನ ಪ್ರಮಾಣದ ಸ್ವಚ್ಛತಾ ಸಾಮಗ್ರಿಗಳನ್ನು ಬಳಸಿವೆ .
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೇತೃತ್ವದಲ್ಲಿ 1.5 ಲಕ್ಷ ಶೌಚಾಲಯಗಳು ನಿರ್ಮಾಣವಾಗಿವೆ .ಇವುಗಳ ಸ್ವಚ್ಛತೆಗಾಗಿ ಬೆಂಗಳೂರು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಸುಧಾರಿತ ಆಕ್ಸಿಡೀಕರಣ ತಂತ್ರಜ್ಞಾನಅಳವಡಿಸಲಾಗಿದೆ . ತ್ಯಾಜ್ಯ ನಿರ್ವಹಣೆಗೆ ಬಸ್ವಾರ್ ಸ್ಥಾವರದಲ್ಲಿ ದಿನಕ್ಕೆ 650 ಮೆಟ್ರಿಕ್ ಟನ್ ತ್ಯಾಜ್ಯವನ್ನು ಸಂಸ್ಕರಿಸಲಾಗುತ್ತಿದೆ. ನದಿ ಮಾಲಿನ್ಯ ತಡೆಯಲು 3 ತಾತ್ಕಾಲಿಕ ಸೀವೇಜ್ ಟ್ರೀಟ್ಮೆಂಟ್ ಪ್ಲಾಂಟ್ಗಳು (STPs) ಸ್ಥಾಪನೆಯಾಗಿವೆ.
ಸ್ವಚ್ಛತಾ ಕಾರ್ಯಕರ್ತರ ಸುರಕ್ಷತೆ ಮತ್ತು ಸೌಲಭ್ಯಗಳಿಗಾಗಿ ಮಾದರಿ ವಸತಿ ಕಾಲೋನಿಗಳು, ಬ್ಯಾಂಕ್ ಖಾತೆಗಳಲ್ಲಿ ಸಂಬಳ ಪಾವತಿ, ಮತ್ತು ಆರೋಗ್ಯ ವಿಮೆ ಯೋಜನೆಗಳನ್ನು ಜಾರಿಗೆ ತರಲಾಗಿದೆ . ಈ ಹಿಂದೆ ನಡೆದ ಪ್ರತಿಭಟನೆಗಳಿಂದ ಪಾಠ ಕಲಿತುಕೊಂಡು, ಸರ್ಕಾರ 70,000+ ಸ್ವಚ್ಛತಾ ಕರ್ಮಚಾರಿಗಳಿಗೆನಿರಂತರ ಬೆಂಬಲ ನೀಡುತ್ತಿದೆ . ಫಲಿತಾಂಶವಾಗಿ, ಭಕ್ತರು ಮತ್ತು ಸ್ಥಳೀಯರು “ಸ್ವಚ್ಛ ಕುಂಭ” ಅನುಭವಿಸುತ್ತಿದ್ದಾರೆ ಎಂದು ವರದಿಯಾಗಿದೆ .