• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, March 17, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ದೇಶ

ಅಯೋಧ್ಯೆ ರಾಮ ಮಂದಿರಕ್ಕೆ ಅಪರೂಪದ ಶ್ರೀರಾಮನ ವಿಗ್ರಹ ದಾನ ಮಾಡಿದ ಬೆಂಗಳೂರು ಮಹಿಳೆ

ಯಶಸ್ವಿನಿ ಎಂ by ಯಶಸ್ವಿನಿ ಎಂ
December 24, 2025 - 8:48 am
in ದೇಶ, ಬೆಂ. ನಗರ
0 0
0
Untitled design 2025 12 24T084345.403

ಬೆಂಗಳೂರು: ಚಿನ್ನದ ಎಲೆಯ ಹಾಳೆಗಳಿಂದ ಲೇಪಿತವಾಗಿರುವ, ಮಾಣಿಕ್ಯ, ಪಚ್ಚೆ, ಹವಳ, ಮುತ್ತು ಹಾಗೂ ವಜ್ರಗಳಿಂದ ಅಲಂಕರಿಸಲಾದ ಅಪರೂಪದ ಶ್ರೀರಾಮನ ಕಲಾಕೃತಿಯೊಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಸಜ್ಜಾಗಿದೆ. ಈ ವಿಶಿಷ್ಟ ಕಲಾಕೃತಿಯನ್ನು ಬೆಂಗಳೂರಿನ ರಾಜಾಜಿನಗರ ನಿವಾಸಿಹವ್ಯಾಸಿ ಕಲಾವಿದೆ ಜಯಶ್ರೀ ಫಣೀಶ್ ತಮ್ಮ ಕೈಯ್ಯಾರೆ ನಿರ್ಮಿಸಿದ್ದು, ಇದರ ಸಂಪೂರ್ಣ ಹಣಕಾಸು ಸಹಾಯವನ್ನು ಅವರ ಕುಟುಂಬವೇ ಒದಗಿಸಿದೆ ಎಂದು ಅವರು ತಿಳಿಸಿದ್ದಾರೆ.

ತಂಜಾವೂರು ಚಿತ್ರಕಲೆ ಶೈಲಿಯಿಂದ ಪ್ರೇರಣೆ ಪಡೆದ ಈ ರಾಮ ಕಲಾಕೃತಿಯನ್ನು 10 ಅಡಿ ಎತ್ತರ, 6 ಅಡಿ ಅಗಲ ಮತ್ತು 2.5 ಅಡಿ ಆಳ ಹೊಂದಿರುವ ರೋಸ್‌ವುಡ್ ಚೌಕಟ್ಟಿನಲ್ಲಿ ಅಳವಡಿಸಲಾಗಿದೆ. ಇದರಲ್ಲಿ ರಾಮನ ದೈವಿಕ ರೂಪದೊಂದಿಗೆ ಹನುಮಾನ್, ಗರುಡ ಹಾಗೂ ದಶಾವತಾರದ ಚಿತ್ರಣಗಳನ್ನು ಒಳಗೊಂಡಿರುವುದು ವಿಶೇಷ. ಕಲಾಕೃತಿಯು ವಿಗ್ರಹದಂತೆ ಕಾಣುವ ತ್ರಿಮಿತೀಯ ವಿನ್ಯಾಸವನ್ನು ಹೊಂದಿದ್ದುದೆ.

RelatedPosts

ಎಲ್‌ಪಿಜಿ ಇ-ಕೆವೈಸಿ ಎಲ್ಲರಿಗೂ ಕಡ್ಡಾಯವಲ್ಲ..! ಗೊಂದಲಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ

ಲವರ್ ಜೊತೆ ಏಕಾಂತದಲ್ಲಿರುವಾಗಲೇ ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಪತಿ: ವಿಡಿಯೋ ವೈರಲ್

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗುಡುಗು-ಸಿಡಿಲು ಸಹಿತ ಮಳೆ ಮುನ್ಸೂಚನೆ

ಬೆಂಗಳೂರಿನಲ್ಲಿ ಬೇಸಿಗೆ ಬಿಸಿಲ ಬೇಗೆಗೆ ತಂಪೆರೆದ ವರುಣ: ರಾಜ್ಯದ ಹಲವೆಡೆ ಭಾರೀ ಮಳೆ

ADVERTISEMENT
ADVERTISEMENT

ಡಿಸೆಂಬರ್ 11ರಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನಿಂದ ದೃಢೀಕರಣ ಪತ್ರವನ್ನು ಸ್ವೀಕರಿಸಿದ ನಂತರ, ಜಯಶ್ರೀ ಫಣೀಶ್ ಅವರ ಮನೆಗೆ ಕಲಾಕೃತಿಯನ್ನು ವೀಕ್ಷಿಸಲು ನಿರಂತರವಾಗಿ ಭಕ್ತರು ಮತ್ತು ಕಲಾಭಿಮಾನಿಗಳ ದಂಡೇ ಹರಿದು ಬಂದಿದೆ. ಕಲಾಕೃತಿ ಸ್ವೀಕಾರವಾದ ಸುದ್ದಿ ತಿಳಿದ ಕೂಡಲೇ, ರಾಜಾಜಿನಗರದಲ್ಲಿರುವ ಅವರ ಮನೆ ಭಕ್ತರ ದರ್ಶನ ಕೇಂದ್ರತಾಯಿತು. ಕೆಲವರು ಕೇವಲ ದರ್ಶನಕ್ಕಾಗಿ ಬಂದರೆ, ಇನ್ನು ಕೆಲವರು ಭಜನೆ, ನೃತ್ಯ ಮತ್ತು ಇತರೆ  ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು.

50 ವರ್ಷದ ಜಯಶ್ರೀ ಫಣೀಶ್ ಅವರು ತಂಜಾವೂರು ವರ್ಣಚಿತ್ರಗಳಲ್ಲಿ ಪರಿಣತಿ ಹೊಂದಿದ್ದು, ಕಳೆದ ಹತ್ತು ವರ್ಷಗಳಲ್ಲಿ ತಮ್ಮ 10 ಕಲಾಕೃತಿಗಳನ್ನು ವಿವಿಧ ದೇವಾಲಯಗಳಿಗೆ ದಾನ ಮಾಡಿದ್ದಾರೆ. ಹಾಸನ ಜಿಲ್ಲೆಯ ದೊಡ್ಡಮಗ್ಗೆ ಗ್ರಾಮದ ದೇವಾಲಯವೊಂದರಲ್ಲಿ ವರ್ಣಚಿತ್ರವನ್ನು ಸಮರ್ಪಿಸುವ ಸಂದರ್ಭದಲ್ಲಿ, ಅಯೋಧ್ಯೆಯ ಕೇಂದ್ರ ದೇವತೆಯಾದ ಬಾಲರಾಮನ ಕಲಾಕೃತಿಯನ್ನು ನಿರ್ಮಿಸುವ ಆಸೆಯನ್ನು ಅವರು ಮೊದಲ ಬಾರಿಗೆ ವ್ಯಕ್ತಪಡಿಸಿದ್ದರು. ಈ ಆಲೋಚನೆಯೇ ಮುಂದಾಗಿ, ಬೆಂಗಳೂರಿನ ಉದ್ಯಮಿ ಜಿ.ಕೆ. ಪ್ರಮೋದ್ ಸೇರಿದಂತೆ ಕೆಲವರು ದೇವಾಲಯದ ಅಧಿಕಾರಿಗಳನ್ನು ಸಂಪರ್ಕಿಸಲು ನೆರವಾದರು.

ಈ ಮಹತ್ವಾಕಾಂಕ್ಷಿ ಕಲಾಕೃತಿಯನ್ನು ಪೂರ್ಣಗೊಳಿಸಲು ಜಯಶ್ರೀ ಅವರಿಗೆ ಒಂಬತ್ತು ತಿಂಗಳುಗಳ ಕಾಲ, ಅಂದಾಜು 2,800 ಗಂಟೆಗಳ ಶ್ರಮ ಬೇಕಾಯಿತು. ಥರ್ಮೋಕೋಲ್‌ನ ಮೂಲ ರಚನೆಯಿಂದ ಆರಂಭಿಸಿ, ಜೇಡಿಮಣ್ಣಿನ ಪದರ ಹಾಕಿ, ನಂತರ ಚಿನ್ನದ ಎಲೆಯ ಹಾಳೆಗಳಿಂದ ಅಂತಿಮ ಸ್ಪರ್ಶ ನೀಡಲಾಗಿದೆ. ಇದು ಜಯಶ್ರೀ ಅವರ ವಿಗ್ರಹದಂತಿರುವ ಕಲಾಕೃತಿಯ ಮೊದಲ ಪ್ರಯತ್ನವಾಗಿದ್ದು, ಅದರಲ್ಲೂ ರಾಮನ ಮುಖವನ್ನು ಕೆತ್ತುವುದು ಅತ್ಯಂತ ಸವಾಲಿನ ಭಾಗವಾಗಿತ್ತು. ಅದಕ್ಕೆ ಐದು ದಿನಗಳ ಕಾಲ ತೀವ್ರ ಪರಿಶ್ರಮ ಬೇಕಾಯಿತು.

ಈ ಕೆಲಸದಲ್ಲಿ ಜಯಶ್ರೀ ಅವರ ಪತಿ, ಶಸ್ತ್ರಚಿಕಿತ್ಸಕ ಡಾ. ಫಣೀಷಾ ಎಂ.ಎಸ್. ಅವರೂ ಮಹತ್ವದ ಪಾತ್ರ ವಹಿಸಿದ್ದಾರೆ. ಮಾನವ ಅಂಗರಚನಾ ಜ್ಞಾನವನ್ನು ಬಳಸಿಕೊಂಡು, ತೋಳು, ಮುಂದೋಳು, ಕಾಲುಗಳ ಅನುಪಾತ, ಕೀಲುಗಳ ಸ್ಥಾನ ಮತ್ತು ಪಾದಗಳ ಕೆತ್ತನೆಗೆ ಅವರು ಮಾರ್ಗದರ್ಶನ ನೀಡಿದರು.

ಡಾ. ಫಣೀಷಾ ಅವರ ಪ್ರಕಾರ, ಕಳೆದ 50 ದಿನಗಳಲ್ಲಿ ಸುಮಾರು 25,000ಕ್ಕೂ ಹೆಚ್ಚು ಜನರು ಅವರ ಮನೆಗೆ ಭೇಟಿ ನೀಡಿದ್ದಾರೆ. ಈಗ ಕಲಾಕೃತಿ ವೀಕ್ಷಣೆಯನ್ನು ಮುಚ್ಚಲಾಗಿದೆ. ಕಲಾಕೃತಿಯನ್ನು ಅಯೋಧ್ಯೆಗೆ ಸ್ಥಳಾಂತರಿಸಿದ ಬಳಿಕ, ತಮ್ಮ ಮನೆಯಲ್ಲಿ ಇದ್ದ ಭಕ್ತಿಪೂರ್ಣ ವಾತಾವರಣವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.

ShareSendShareTweetShare
ಯಶಸ್ವಿನಿ ಎಂ

ಯಶಸ್ವಿನಿ ಎಂ

ಕನ್ನಡದ ಖಾಸಗಿ ಟಿವಿ ಸುದ್ದಿ ವಾಹಿನಿಯಲ್ಲಿ ಒಂದು ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ.ಇದರೊಟ್ಟಿಗೆ ಪುಸ್ತಕ ಓದುವುದು, ಟ್ರಾವೆಲ್ ಮಾಡುವ ಹವ್ಯಾಸ ಇದೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.

Please login to join discussion

ತಾಜಾ ಸುದ್ದಿ

Untitled design 2026 03 17T152510.779

ಎಲ್‌ಪಿಜಿ ಇ-ಕೆವೈಸಿ ಎಲ್ಲರಿಗೂ ಕಡ್ಡಾಯವಲ್ಲ..! ಗೊಂದಲಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ

by ಯಶಸ್ವಿನಿ ಎಂ
March 17, 2026 - 3:32 pm
0

Untitled design 2026 03 17T143532.012

ಟ್ರೇಲರ್‌ನಲ್ಲೇ ಮೋಡಿ ಮಾಡಿದ “ಆಯುಧ ” ಚಿತ್ರ ಮಾರ್ಚ್ 27 ಕ್ಕೆ ಬಿಡುಗಡೆ

by ಶಾಲಿನಿ ಕೆ. ಡಿ
March 17, 2026 - 2:42 pm
0

Untitled design 2026 03 17T141906.075

“ಟೆರರ್” ಚಿತ್ರದ “ಬೊಂಬೆ ಬೊಂಬೆ” ಹಾಡಿಗೆ ಅಭಿಮಾನಿಗಳು ಫಿದಾ

by ಶಾಲಿನಿ ಕೆ. ಡಿ
March 17, 2026 - 2:20 pm
0

Untitled design 2026 03 17T140807.605

‘ಕೆಡಿ’ ಸಿನಿಮಾ ಹಾಡು ವಿವಾದ: ಪ್ರೇಮ್ ವಿರುದ್ಧ ದೆಹಲಿಯಲ್ಲಿ ದೂರು

by ಶಾಲಿನಿ ಕೆ. ಡಿ
March 17, 2026 - 2:08 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 17T152510.779
    ಎಲ್‌ಪಿಜಿ ಇ-ಕೆವೈಸಿ ಎಲ್ಲರಿಗೂ ಕಡ್ಡಾಯವಲ್ಲ..! ಗೊಂದಲಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ
    March 17, 2026 | 0
  • Untitled design 2026 03 17T115907.733
    ಲವರ್ ಜೊತೆ ಏಕಾಂತದಲ್ಲಿರುವಾಗಲೇ ಪತ್ನಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಪತಿ: ವಿಡಿಯೋ ವೈರಲ್
    March 17, 2026 | 0
  • Untitled design 2026 03 16T204136.948
    ಬಂಗಾಳ ಚುನಾವಣೆ: BJP ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; ಮಮತಾ ವಿರುದ್ಧ ಸುವೇಂದು ಅಧಿಕಾರಿ ಕಣಕ್ಕೆ
    March 16, 2026 | 0
  • Untitled design 2026 03 16T154519.875
    ಮದುವೆ ಮನೆಯಲ್ಲಿ ಘೋರ ದುರಂತ: ವ್ಯಕ್ತಿಯ ಉಸಿರು ನಿಲ್ಲಿಸಿದ ರಸಗುಲ್ಲ.!
    March 16, 2026 | 0
  • LPG Tankers Cross Hormuz
    ಯುದ್ಧದ ನಡುವೆಯೂ ಹರ್ಮುಜ್ ಜಲಸಂಧಿ ದಾಟಿ ಭಾರತಕ್ಕೆ ಬಂದ ಶಿವಾಲಿಕ್ ಹಡಗು
    March 16, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version