ಪತಿಯ ಸಹೋದರರೊಂದಿಗೆ ಅಕ್ರಮ ಸಂಬಂಧ: ಅತ್ತೆಯನ್ನೇ ಕೊಲೆಗೈದ ಸೊಸೆ

Untitled design 2025 07 03t231750.117

ಪತಿಯ ಇಬ್ಬರು ಸಹೋದರರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ, ಆಸ್ತಿ ವಿವಾದದಿಂದಾಗಿ ಅತ್ತೆಯನ್ನೇ ಕೊಲೈಗೈದ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ವಿಧವೆ ಪೂಜಾ ಎಂಬ ಮಹಿಳೆ ತನ್ನ ಪತಿಯ ಇಬ್ಬರು ಸಹೋದರರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಆಸ್ತಿ ವಿವಾದದಿಂದಾಗಿ ಅವಳು ತನ್ನ ಅತ್ತೆ ಸುಶೀಲಾ ದೇವಿಯನ್ನು (54) ಕೊಲೆ ಮಾಡಿದ್ದಾಳೆ. ಈ ಘಟನೆ ಜೂನ್ 24ರಂದು ಝಾನ್ಸಿಯ ಕುಮ್ಹರಿಯಾ ಗ್ರಾಮದಲ್ಲಿ ನಡೆದಿದ್ದು, ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ಸುಶೀಲಾ ದೇವಿಯ ಕಿರಿಯ ಸೊಸೆ ಪೂಜಾ, ಆಕೆಯ ಸಹೋದರಿ ಕಮಲಾ, ಮತ್ತು ಕಮಲಾಳ ಪ್ರಿಯಕರ ಅನಿಲ್ ವರ್ಮಾ ಆರೋಪಿಗಳಾಗಿದ್ದಾರೆ. ಪೊಲೀಸರು 48 ಗಂಟೆಗಳ ಒಳಗೆ ಮೂವರನ್ನು ಬಂಧಿಸಿದ್ದು, ಆರೋಪಿಗಳು ಚಿನ್ನ ಮತ್ತು ಆಸ್ತಿಗಾಗಿ ಕೊಲೆಯನ್ನು ಒಪ್ಪಿಕೊಂಡಿದ್ದಾರೆ. ಮೂವರಿಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಘಟನೆಯ ಹಿನ್ನೆಲೆ

ಸುಶೀಲಾ ದೇವಿಯ ಶವ ಜೂನ್ 24ರಂದು ಬೆಳಗ್ಗೆ ಝಾನ್ಸಿಯ ಕುಮ್ಹರಿಯಾ ಗ್ರಾಮದ ತಮ್ಮ ಮನೆಯಲ್ಲಿ ಪತ್ತೆಯಾಗಿತ್ತು. ತನಿಖೆಯನ್ನು ಆರಂಭಿಸಿದ ಪೊಲೀಸರು ವಿಧಿವಿಜ್ಞಾನ ಸಾಕ್ಷಿಗಳು ಮತ್ತು ಕುಟುಂಬದ ಸದಸ್ಯರ ವಿಚಾರಣೆಯ ಆಧಾರದ ಮೇಲೆ ಪೂಜಾ, ಕಮಲಾ ಮತ್ತು ಅನಿಲ್ ವರ್ಮಾನನ್ನು ಬಂಧಿಸಿದ್ದರು. ಪೂಜಾ ಕೊಲೆಗೆ ಪ್ರಮುಖ ಸಂಚುಕಾರಳಾಗಿದ್ದು, ಇತರ ಇಬ್ಬರು ಆಕೆಗೆ ಸಹಾಯ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಪೂಜಾ ತನ್ನ ಗಂಡನ ಮನೆಯಿಂದ ಸುಮಾರು 8 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಕದ್ದು ಸಂಬಂಧಿಕರಿಗೆ ಮಾರಾಟ ಮಾಡಲು ಯತ್ನಿಸಿದ್ದಳು. ಈ ವೇಳೆ ನಾಪತ್ತೆಯಾಗಿದ್ದ ಅನಿಲ್ ವರ್ಮಾನನ್ನು ಪೊಲೀಸರು ಗುಂಡಿನ ದಾಳಿಯ ಮೂಲಕ ಬಂಧಿಸಿದ್ದರು. ಬಂಧನದ ಸಂದರ್ಭದಲ್ಲಿ ಅನಿಲ್ ಪೊಲೀಸರ ಮೇಲೆ ಗುಂಡು ಹಾರಿಸಿದ್ದಾನೆ. ಪ್ರತಿದಾಳಿಯಾಗಿ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದು, ಆತನನ್ನು ಝಾನ್ಸಿಯ ಮೆಡಿಕಲ್ ಕಾಲೇಜಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಕೊಲೆಗೆ ಕಾರಣ

ಪೊಲೀಸ್ ವರಿಷ್ಠಾಧಿಕಾರಿ (ನಗರ) ಜ್ಞಾನೇಂದ್ರ ಕುಮಾರ್ ಪ್ರಕಾರ, ಪೂಜಾ ತನ್ನ ಸಹೋದರಿ ಕಮಲಾ ಮತ್ತು ಅನಿಲ್ ವರ್ಮಾನ ಸಹಾಯದಿಂದ ಕೊಲೆಯನ್ನು ಯೋಜಿಸಿದ್ದಳು. ಪಿತ್ರಾರ್ಜಿತ ಆಸ್ತಿಯನ್ನು ಮಾರಾಟ ಮಾಡುವ ವಿಷಯದಲ್ಲಿ ದೀರ್ಘಕಾಲದಿಂದ ಕೌಟುಂಬಿಕ ವಿವಾದ ಇತ್ತು. ಸುಶೀಲಾ ದೇವಿ ಆಸ್ತಿ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಪೂಜಾಳ ಮಾವ ಅಜಯ್ ಸಿಂಗ್ ಮತ್ತು ಪತಿಯ ಸೋದರ ಸಂತೋಷ್ ಒಪ್ಪಿಗೆ ನೀಡಿದ್ದರು. ಈ ವಿರೋಧವೇ ಸುಶೀಲಾ ದೇವಿಯ ಕೊಲೆಗೆ ಕಾರಣವಾಯಿತು.

ಅಕ್ರಮ ಸಂಬಂಧ

ಪೂಜಾ ತನ್ನ ಗಂಡನ ಸಾವಿನ ಬಳಿಕ ಗಂಡನ ಸೋದರ ಕಲ್ಯಾಣ್ ಸಿಂಗ್‌ನೊಂದಿಗೆ ಅಕ್ರಮ ಸಂಬಂಧದಲ್ಲಿದ್ದಳು. ಕಲ್ಯಾಣ್ ಸಿಂಗ್ ಕೂಡ ಸಾವನ್ನಪ್ಪಿದ ಬಳಿಕ, ಪೂಜಾ ತನ್ನ ಮಾವ ಅಜಯ್ ಸಿಂಗ್ ಮತ್ತು ಗಂಡನ ಮತ್ತೊಬ್ಬ ಸೋದರ ಸಂತೋಷ್‌ನೊಂದಿಗೆ ಸಂಬಂಧದಲ್ಲಿದ್ದಳು. ಈ ಸಂಬಂಧದಿಂದ ಸಂತೋಷ್‌ಗೆ ಒಂದು ಹೆಣ್ಣು ಮಗುವೂ ಜನಿಸಿತ್ತು. ಇದಕ್ಕೆ ವಿರೋಧವಾಗಿ ಸಂತೋಷ್‌ನ ಪತ್ನಿ ರಾಗಿಣಿ ತವರು ಮನೆಗೆ ತೆರಳಿದ್ದಾಳೆ.

Exit mobile version