ವಿಶ್ವ ಭ್ರಷ್ಟಾಚಾರ ಸೂಚ್ಯಂಕ 2025: ಭಾರತಕ್ಕೆ ಎಷ್ಟನೇ ಸ್ಥಾನ, ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

Untitled design 2026 02 11T191313.660

ಬರ್ಲಿನ್ ಮೂಲದ ಪ್ರತಿಷ್ಠಿತ ‘ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್’ ಸಂಸ್ಥೆಯು 2025ನೇ ಸಾಲಿನ ಭ್ರಷ್ಟಾಚಾರ ಪರಿಕಲ್ಪನಾ ಸೂಚ್ಯಂಕ (CPI) ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ, ಭಾರತವು ಭ್ರಷ್ಟಾಚಾರ ನಿಗ್ರಹದಲ್ಲಿ ಕಳೆದ ಬಾರಿಗಿಂತ ಉತ್ತಮ ಪ್ರಗತಿ ಸಾಧಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

ಭಾರತದ ಸಾಧನೆ ಮತ್ತು ಸುಧಾರಣೆ:

ಕಳೆದ ಕೆಲವು ವರ್ಷಗಳಿಂದ ಭಾರತವು ಡಿಜಿಟಲೀಕರಣ ಮತ್ತು ಆಡಳಿತಾತ್ಮಕ ಸುಧಾರಣೆಗಳ ಮೂಲಕ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದು, ಅದರ ಫಲಿತಾಂಶ ಈ ಬಾರಿಯ ಶ್ರೇಯಾಂಕದಲ್ಲಿ ಪ್ರತಿಫಲಿಸಿದೆ.

ವಿಶ್ವದ ‘ಕ್ಲೀನ್’ ಮತ್ತು ‘ಕರಪ್ಟ್’ ದೇಶಗಳು: ಈ ಪಟ್ಟಿಯಲ್ಲಿ ಎಂದಿನಂತೆ ಯುರೋಪ್ ರಾಷ್ಟ್ರಗಳು ತಮ್ಮ ಪ್ರಾಬಲ್ಯ ಮುಂದುವರಿಸಿವೆ.

ಭಾರತದ ಶ್ರೇಯಾಂಕಕ್ಕೆ ಹೋಲಿಸಿದರೆ, ನೆರೆರಾಷ್ಟ್ರಗಳ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಚೀನಾ 76ನೇ ಸ್ಥಾನದಲ್ಲಿದ್ದರೆ, ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಶ್ರೀಲಂಕಾ 121ನೇ ಸ್ಥಾನದಲ್ಲಿದೆ. ಇನ್ನು ಪಾಕಿಸ್ತಾನ 135ನೇ ಸ್ಥಾನದಲ್ಲಿದ್ದು, ಭ್ರಷ್ಟಾಚಾರದ ಕೂಪದಲ್ಲಿ ಸಿಲುಕಿದೆ ಎಂಬುದು ಸಾಬೀತಾಗಿದೆ.

ಶ್ರೀಮಂತ ರಾಷ್ಟ್ರಗಳಿಗೂ ಭ್ರಷ್ಟಾಚಾರದ ಬಿಸಿ: ಆಶ್ಚರ್ಯಕರ ಸಂಗತಿಯೆಂದರೆ, ಕೇವಲ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲದೆ ಪ್ರಬಲ ದೇಶಗಳೂ ಈ ಬಾರಿ ಹಿನ್ನಡೆ ಅನುಭವಿಸಿವೆ. ವಿಶ್ವದ ದೊಡ್ಡಣ್ಣ ಅಮೆರಿಕ 29ನೇ ಸ್ಥಾನಕ್ಕೆ ಕುಸಿದಿದೆ. ಬ್ರಿಟನ್, ಫ್ರಾನ್ಸ್ ಮತ್ತು ಇಟಲಿ ದೇಶಗಳಲ್ಲೂ ಭ್ರಷ್ಟಾಚಾರ ವಿರೋಧಿ ಕ್ರಮಗಳು ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ವರದಿ ಎಚ್ಚರಿಸಿದೆ.

ಭಾರತವು 91ನೇ ಸ್ಥಾನಕ್ಕೆ ಬಂದಿರುವುದು ಶುಭ ಸೂಚನೆಯಾದರೂ, ಇನ್ನೂ ಸಾಗಬೇಕಾದ ಹಾದಿ ಬಹಳಷ್ಟಿದೆ. ಸರ್ಕಾರಿ ಸೇವೆಗಳಲ್ಲಿ ಪಾರದರ್ಶಕತೆ ಮತ್ತು ತಂತ್ರಜ್ಞಾನದ ಬಳಕೆ ಹೆಚ್ಚಾದರೆ ಮುಂದಿನ ವರ್ಷಗಳಲ್ಲಿ ಭಾರತ ಮೊದಲ 50ರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ.

Exit mobile version