• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, November 23, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ದೇಶ

ದೆಹಲಿ ಕಾರ್‌ ಬಾಂಬ್‌ ಸ್ಫೋಟ ಪ್ರಕರಣ: ಮತ್ತೋರ್ವ ಆರೋಪಿ ಬಂಧನ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 23, 2025 - 11:58 am
in ದೇಶ
0 0
0
Untitled design 2025 11 23T114949.546

ನವದೆಹಲಿ: ದೆಹಲಿಯ ಹೃದಯಭಾಗದಲ್ಲಿರುವ ಕೆಂಪುಕೋಟೆ ಬಳಿ ನವೆಂಬರ್ 10ರಂದು ಸಂಭವಿಸಿದ ಭಾರೀ ಕಾರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ದಿನೇದಿನೇ ತೀವ್ರಗೊಳ್ಳುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ ನಾಲ್ಕನೇ ಪ್ರಮುಖ ಆರೋಪಿನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿ ತುಫೈಲ್ ನಿಯಾಜ್ ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ, ಈತನಿಗೆ ಈ ದಾಳಿಯ ಪ್ರಮುಖ ಆರೋಪಿ ಮತ್ತು ಆತ್ಮಹತ್ಯೆ ಬಾಂಬರ್ ಎಂದೇ ಗುರುತಿಸಲಾದ ಉಮರ್‌ನೊಂದಿಗೆ ನೇರ ಸಂಪರ್ಕವಿತ್ತು ಎಂಬುದು ಪತ್ತೆಯಾಗಿದೆ.

RelatedPosts

ಬಂಗಾಳದಲ್ಲಿ 37 ವರ್ಷಗಳ ಬಳಿಕ ಅಪ್ಪ-ಮಗನನ್ನು ಒಂದಾಗಿಸಿದ SIR

ಉತ್ತರಾಖಂಡ ಶಾಲೆಯ ಬಳಿ ಜಿಲೆಟಿನ್ ಕಡ್ಡಿಗಳು ಪತ್ತೆ

ಬಿಹಾರದ 6 ಜಿಲ್ಲೆಗಳಲ್ಲಿ ತಾಯಂದಿರ ಎದೆಹಾಲಿನಲ್ಲಿ ವಿಷಕಾರಿ ಯುರೇನಿಯಂ ಪತ್ತೆ!

ತಿರುಪತಿಯಲ್ಲಿ 20 ಕೋಟಿ ಕಲಬೆರಕೆ ಲಡ್ಡು ವಿತರಣೆ: ಸ್ಫೋಟಕ ಮಾಹಿತಿ ಬಯಲು

ADVERTISEMENT
ADVERTISEMENT

ಪೊಲೀಸ್ ಮೂಲಗಳ ಪ್ರಕಾರ ತುಫೈಲ್ ನಿಯಾಜ್ ಕಳೆದ ಕೆಲ ವರ್ಷಗಳಿಂದ ಉಗ್ರ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಗುಪ್ತ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದ್ದಾನೆ. ಉಮರ್ ಕಾರ್ಯಚಟುವಟಿಕೆಗಳನ್ನು ಸಂಯೋಜಿಸುವಲ್ಲಿ ಮತ್ತು  ಸಹಾಯ ಮಾಡಲು ತುಫೈಲ್ ಪ್ರಮುಖ ಪಾತ್ರವಹಿಸಿದ್ದಾನೆ ಎಂದು ತನಿಖಾ ಅಧಿಕಾರಿಗಳು ಶಂಕಿಸಿದ್ದಾರೆ. ಬಂಧನದ ಬಳಿಕ ನಡೆದ ತಪಾಸಣೆಯಲ್ಲಿ, ಇಬ್ಬರ ಮಧ್ಯೆ ನಡೆದಿರುವ ಕರೆ ದಾಖಲೆಗಳು, ಚಾಟ್‌ಗಳು ಮತ್ತು ಹಣ ವರ್ಗಾವಣೆಯ ಸುಳಿವೆಲ್ಲಾ ಸಿಕ್ಕಿರುವುದಾಗಿ ಮೂಲಗಳು ತಿಳಿಸಿವೆ.

ಘಟನೆಯ ಹಿನ್ನೆಲೆ

ನವೆಂಬರ್ 10ರಂದು ಸಂಜೆ 6:40 ರ ಸಮಯದಲ್ಲಿ ಕೆಂಪುಕೋಟೆ ಮೆಟ್ರೋ ನಿಲ್ದಾಣದ ಬಳಿ ಪಾರ್ಕ್ ಮಾಡಲಾಗಿದ್ದ ಹಳೆಯ ಕಾರಿನೊಳಗೆ ಅಳವಡಿಸಲಾಗಿದ್ದ ಸ್ಪೋಟಕ ವಸ್ತುಗಳು ಸ್ಫೋಟಗೊಂಡಿದ್ದವು. ಶಕ್ತಿಶಾಲಿ ಸ್ಫೋಟದಿಂದ ಪಾರ್ಕಿಂಗ್ ಪ್ರದೇಶದಲ್ಲಿ ನಿಂತಿದ್ದ ಹಲವು ಕಾರುಗಳು ಬೆಂಕಿಗೆ ಆಹುತಿಯಾಗಿದ್ದವು. ಸ್ಥಳದಲ್ಲಿದ್ದ ಹಲವಾರು ಪ್ರಯಾಣಿಕರು ಮತ್ತು ಸ್ಥಳೀಯರು ಗಾಯಗೊಂಡಿದ್ದು, 15 ಜನರು ದಾರುಣವಾಗಿ ಸಾವನ್ನಪ್ಪಿದ್ದರು.

ದೆಹಲಿ ಕಾರ್‌ ಬಾಂಬ್‌ ಸ್ಫೋಟ ಕೇಸ್‌: ಆತ್ಮಹತ್ಯಾ ಬಾಂಬರ್ ಸಹಾಯಕನ ಬಂಧನ

ನವದೆಹಲಿ: ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಭಯಾನಕ ಕಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮಹತ್ವದ ಬೆಳವಣಿಗೆಯನ್ನು ಸಾಧಿಸಿದೆ. ಆತ್ಮಹತ್ಯಾ ಬಾಂಬರ್‌ಗೆ ಸಹಾಯ ಮಾಡಿದ್ದ ಕಾಶ್ಮೀರಿ ನಿವಾಸಿಯನ್ನು ಬಂಧಿಸಿದೆ. ಈ ದಾಳಿಯು ನವೆಂಬರ್ 10ರಂದು ಕೆಂಪು ಕೋಟೆ ಪ್ರದೇಶದಲ್ಲಿ ನಡೆದು, ಅಮಾಯಕರ ಜೀವವನ್ನು ಬಲಿ ತೆಗೆದುಕೊಂಡಿತ್ತು. ಹಲವರಿಗೆ ಗಂಭೀರ ಗಾಯಗಳಾಗಿತ್ತು.

ಬಂಧಿತ ಆರೋಪಿಯ ಹೆಸರು ಅಮೀರ್ ರಶೀದ್ ಅಲಿ. ಜಮ್ಮು ಮತ್ತು ಕಾಶ್ಮೀರದ ಪ್ಯಾಂಪೋರ್ ತಾಲೂಕಿನ ಸಂಬೂರಾ ಗ್ರಾಮದ ನಿವಾಸಿಯಾದ ಇವನು, ಸ್ಫೋಟಕ್ಕೆ ಬಳಸಲಾದ ಕಾರನ್ನು ನೋಂದಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ದೆಹಲಿ ಪೊಲೀಸರು ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಿದ ನಂತರ, ಬೃಹತ್ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಈ ಕಾರ್ಯಾಚರಣೆಯ ಫಲವಾಗಿ ಅಮೀರ್ ಅವರನ್ನು ದೆಹಲಿಯಲ್ಲೇ ಬಂಧಿಸಲಾಯಿತು. ತನಿಖೆಯಲ್ಲಿ ಬಯಲಾದಂತೆ, ಅಮೀರ್ ಆತ್ಮಹತ್ಯಾ ಬಾಂಬರ್ ಉಮರ್ ಉನ್ ನಬಿ ಜೊತೆ ಸೇರಿ ದಾಳಿಯ ಸಂಚು ರೂಪಿಸಿದ್ದಾನೆ. ಸ್ಪೋಟಕ ಸಾಧನ (ಐಇಡಿ)ವನ್ನು ವಾಹನದಲ್ಲಿ ಸಾಗಿಸಲು ಅನುಕೂಲವಾಗುವಂತೆ ಕಾರನ್ನು ಖರೀದಿಸಲು ಅಮೀರ್ ದೆಹಲಿಗೆ ಬಂದಿದ್ದರು ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟದಲ್ಲಿ ಮೃತಪಟ್ಟ ಚಾಲಕನನ್ನು ಉಮರ್ ಉನ್ ನಬಿ ಎಂದು ಗುರುತಿಸಲಾಗಿದೆ. ಪುಲ್ವಾಮಾ ಜಿಲ್ಲೆಯ ನಿವಾಸಿಯಾದ ಇವನು, ಹರಿಯಾಣದ ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಜನರಲ್ ಮೆಡಿಸಿನ್ ವಿಭಾಗದ ಸಹಾಯಕ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದನು. ವಿಧಿವಿಜ್ಞಾನ ಪರೀಕ್ಷೆಗಳ ಮೂಲಕ ಇದನ್ನು ದೃಢಪಡಿಸಲಾಗಿದೆ. ಉಮರ್ ಅವರಿಗೆ ಸೇರಿದ ಮತ್ತೊಂದು ವಾಹನವನ್ನು ಎನ್‌ಐಎ ವಶಪಡಿಸಿಕೊಂಡಿದ್ದು, ಇದನ್ನು ಸಾಕ್ಷ್ಯಕ್ಕಾಗಿ ಪರಿಶೀಲಿಸಲಾಗುತ್ತಿದೆ.

ಈ ಪ್ರಕರಣದಲ್ಲಿ ಎನ್‌ಐಎ ಈಗಾಗಲೇ 73 ಸಾಕ್ಷಿಗಳನ್ನು ವಿಚಾರಣೆ ನಡೆಸಿದೆ. ಗಾಯಗೊಂಡವರು ಸೇರಿದಂತೆ ಹಲವು ಸಾಕ್ಷಿಗಳ ಹೇಳಿಕೆಗಳು ತನಿಖೆಗೆ ಹೊಸ ಆಯಾಮ ನೀಡಿದೆ. ದೆಹಲಿ ಪೊಲೀಸ್, ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಹರಿಯಾಣ ಪೊಲೀಸ್, ಉತ್ತರ ಪ್ರದೇಶ ಪೊಲೀಸ್ ಮತ್ತು ಇತರ ಸಂಸ್ಥೆಗಳೊಂದಿಗೆ ನಿಕಟ ಸಮನ್ವಯದಲ್ಲಿ ಎನ್‌ಐಎ ಕಾರ್ಯನಿರ್ವಹಿಸುತ್ತಿದೆ.

ಉಮರ್ ಉನ್ ನಬಿ ಒಬ್ಬ ವೈದ್ಯಕೀಯ ಪ್ರಾಧ್ಯಾಪಕನಾಗಿದ್ದರೂ, ಆಘಾತಕಾರಿ ಚಟುವಟಿಕೆಗಳಲ್ಲಿ ತೊಡಗಿದ್ದಾನೆ ಎಂಬುದು ತಿಳಿದುಬಂದಿದೆ. ಅಮೀರ್ ರಶೀದ್ ಅಲಿ ಅವರ ಬಂಧನವು ಈ ಪಿತೂರಿಯ ಇನ್ನೊಂದು ಆಯಾಮವನ್ನು ಬಯಲುಮಾಡಿದೆ. ತನಿಖೆಯು ಇನ್ನೂ ಮುಂದುವರಿದಿದೆ. ಇತರ ಆರೋಪಿಗಳನ್ನು ಗುರುತಿಸಲು ಡಿಜಿಟಲ್ ಸಾಕ್ಷ್ಯಗಳು, ಫೋನ್ ರೆಕಾರ್ಡ್‌ಗಳು ಮತ್ತು ಹಣಕಾಸು ವಹಿವಾಟುಗಳನ್ನು ಪರಿಶೀಲಿಸಲಾಗುತ್ತಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design (68)

IFFI ಗಾಲಾ ಪ್ರೀಮಿಯರ್‌ನಲ್ಲಿ ‘ರುಧಿರ್ವನ’ ಸಿನಿಮಾ ಹೌಸ್ ಫುಲ್

by ಯಶಸ್ವಿನಿ ಎಂ
November 23, 2025 - 8:21 pm
0

Untitled design (67)

‘ಅಪರಿಚಿತೆ’ ಚಿತ್ರದ ಟ್ರೇಲರ್ ರಿಲೀಸ್‌ ಮಾಡಿದ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ

by ಯಶಸ್ವಿನಿ ಎಂ
November 23, 2025 - 8:05 pm
0

Untitled design (66)

ಗಾಜಾ ಮೇಲೆ ಇಸ್ರೇಲ್ ಮತ್ತೆ ಭೀಕರ ದಾಳಿ: 24 ಪ್ಯಾಲೆಸ್ಟೀನಿಯರು ಸಾ*ವು

by ಯಶಸ್ವಿನಿ ಎಂ
November 23, 2025 - 7:19 pm
0

Untitled design (65)

ಕೊರಗಜ್ಜದಲ್ಲಿ ಗುಳಿಗ ನರ್ತನ.. ಇದು ಮತ್ತೊಂದು ದಂತಕಥೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 23, 2025 - 7:03 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 11 23T134332.494
    ಬಂಗಾಳದಲ್ಲಿ 37 ವರ್ಷಗಳ ಬಳಿಕ ಅಪ್ಪ-ಮಗನನ್ನು ಒಂದಾಗಿಸಿದ SIR
    November 23, 2025 | 0
  • Untitled design 2025 11 23T120319.429
    ಉತ್ತರಾಖಂಡ ಶಾಲೆಯ ಬಳಿ ಜಿಲೆಟಿನ್ ಕಡ್ಡಿಗಳು ಪತ್ತೆ
    November 23, 2025 | 0
  • Untitled design 2025 11 23T085005.791
    ಬಿಹಾರದ 6 ಜಿಲ್ಲೆಗಳಲ್ಲಿ ತಾಯಂದಿರ ಎದೆಹಾಲಿನಲ್ಲಿ ವಿಷಕಾರಿ ಯುರೇನಿಯಂ ಪತ್ತೆ!
    November 23, 2025 | 0
  • Untitled design 2025 11 23T081554.527
    ತಿರುಪತಿಯಲ್ಲಿ 20 ಕೋಟಿ ಕಲಬೆರಕೆ ಲಡ್ಡು ವಿತರಣೆ: ಸ್ಫೋಟಕ ಮಾಹಿತಿ ಬಯಲು
    November 23, 2025 | 0
  • Untitled design (52)
    ವೈಟ್ ಕಾಲರ್ ಭಯೋತ್ಪಾದನಾ ಮಾಡ್ಯೂಲ್ ಪ್ರಕರಣ-ಮತ್ತೊಬ್ಬ ಶಂಕಿತ ಅರೆಸ್ಟ್‌
    November 22, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version