ಹೋಟೆಲ್‌ಗಳಲ್ಲಿ ಸೇವಾ ಶುಲ್ಕ ಕಡ್ಡಾಯವಲ್ಲ! ಸರ್ವಿಸ್‌‌ ಚಾರ್ಜ್ ನೀಡೋದು ನಿಮ್ಮಇಷ್ಟ!

Film 2025 03 29t095718.129

ಹೋಟೆಲ್‌ಗಳಲ್ಲಿ ಊಟ , ತಿಂಡಿ  ಬಿಲ್‌‌ಗಳ ಮೇಲೆನ ಸರ್ವಿಸ್‌‌ ಚಾರ್ಜ್ ಪಾವತಿಸುವುದು ಗ್ರಾಹಕರಿಗೆ ಕಡ್ಡಾಯವಲ್ಲ.ಇದು ಗ್ರಾಹಕರ ಸ್ವಯಂಪ್ರೇರಿತ ಆಯ್ಕೆ. ಹೋಟಲ್‌ಗಳ ಈ ಶುಲ್ಕವನ್ನು ಗ್ರಾಹಕರ ಮೇಲೆ ಕಡ್ಡಾಯವಾಗಿ ವಿಧಿಸುವಂತಿಲ್ಲ ಎಂದು ದೆಹಲಿ  ಹೈಕೋರ್ಟ್ ತೀರ್ಪು ನೀಡಿದೆ.

ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಇದನ್ನು “ಇದು ಗ್ರಾಹಕರಿಗೆ ಸಂದ  ಜಯ” ಎಂದು ಪರಿಗಣಿಸಿದ್ದಾರೆ.

ಹೋಟಲ್‌‌‌ಗಳು ಮತ್ತು ರೆಸ್ಟೋರೆಂಟ್‌‌ಗಳ ಬಿಲ್‌ಗಳ ಮೇಲೆ ಕಡ್ಡಾಯವಾಗಿ ಸೇವಾ ಶುಲ್ಕ ವಿಧಿಸುವುದನ್ನು ಸ್ಥಗಿತಗೊಳಿಸಿ  ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಮಾರ್ಗ ಸೂಚಿ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಹೋಟೆಲ್‌‌ ಸಂಘಗಳು ಅರ್ಜಿ ಸಲ್ಲಿಸಿದ್ದವು.

ಈ ಅರ್ಜಿ ವಜಾಗೊಳಿಸಿದ  ನ್ಯಾಯಾಂಗ ಪ್ರತಿಭಾ ಎಂ. ಸಿಂಗ್ ಅವರಿಂದ ಪೀಠ, ‘ಕಡ್ಡಾಯವಾಗಿ ಸೇವಾ ಶುಲ್ಕ ಪಡೆಯುವುದು ಗ್ರಾಹಕರ ಹಕ್ಕಿಗೆ ಮತ್ತು ಕಾನೂನಿಗೆ ವಿರುದ್ಧವಾದದ್ದು. ಗ್ರಾಹಕರು ಸ್ವಇಚ್ಛೆಯಿಂದ ಪಾವತಿಸಬಹುದು. ಆದರೆ ಅವರ ಮೇಲೆ ಸೇವಾ ಶುಲ್ಕವನ್ನು ಹೇರಿಕೆ ಮಾಡುವಂತಿಲ್ಲ. ಅದು ಗ್ರಾಹಕರ ದಾರಿತಪ್ಪಿಸುವ, ಮೋಸದ ಹಾಗೂ ಅನ್ಯಾಯಯುತ ವ್ಯಾಪಾರ ಪದ್ಧತಿ’ ಎಂದು ಹೇಳಿದೆ. ಅಲ್ಲದೆ, ಸಿಸಿಪಿಎ ನಿರ್ಧಾರ ಪ್ರಶ್ನಿಸಿದ್ದ ಇಬ್ಬರು ಅರ್ಜಿದಾರರಿಗೆ ತಲಾ 1 ಲಕ್ಷ ರೂ. ದಂಡ ವಿಧಿಸಿದೆ.

ಹೋಟೆಲ್‌ಗಳು ಊಟ-ತಿಂಡಿಯನ್ನು ಲಾಭ ಇಟ್ಟುಕೊಂಡೇ ಮಾರುತ್ತವೆ. ಅದರಲ್ಲೇ ಅವು ನೌಕರರ ವೇತನದ ಖರ್ಚನ್ನೂ ಸೇರಿಸಿರುತ್ತವೆ. ಆದಾಗ್ಯೂ ಸೇವಾ ಶುಲ್ಕ ಎಂದು ಹೇಳಿ ಮುಖ್ಯ ಬಿಲ್‌ಗಳ  ಜತೆಗೇ ಸೇರಿಸಿಕೊಂಡು ಬಿಲ್‌‌‌ ಚೀಟಿಯನ್ನು ಗ್ರಾಹಕರಿಗೆ ನೀಡುತ್ತವೆ. ಸೇವಾ ಶುಲ್ಕವನ್ನು ‘ಸೇವಾ ತೆರಿಗೆ’ ಎಂಬ ರೀತಿಯಲ್ಲಿ ಮರೆಮಾಡಿ ನೀಡುವ ಪರಿಪಾಠವಿದೆ. ಗ್ರಾಹಕ ಸಂರಕ್ಷಣಾ ಕಾಯ್ದೆ, 2019 ರ ಸೆಕ್ಷನ್ 2(47) ರ ಅಡಿಯಲ್ಲಿ ಇಂತಹ ಪರಿಪಾಠವು ಅನ್ಯಾಯದ ವ್ಯಾಪಾರ ಕ್ರಮವಾಗಿದೆ. ಇದನ್ನು ಅನುಸರಿಸಿ, ಸೇವಾ ಶುಲ್ಕವನ್ನು ಐಚ್ಛಿಕ ಎಂದು 2022ರಲ್ಲಿ ಸಿಸಿಪಿಎ ಹೇಳಿದೆ.

ಸಿಸಿಪಿಎ ಎಂಬುದು ಕೇವಲ ಸಲಹಾ ಮಂಡಳಿಯಲ್ಲ. ಅದಕ್ಕೆ ಆದೇಶ ಹೊರಡಿಸುವ ಅಧಿಕಾರವಿದೆ’ ಎಂದು ಕೋರ್ಟ್ ಹೇಳಿದೆ. ಆದರೆ ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿ ಅರ್ಜಿದಾರರು ವ್ಯಕ್ತಪಡಿಸಿದ್ದಾರೆ.

ಹೋಟೆಲ್‌ಗಳ  ವಾದವೇನು?

‘ಗ್ರಾಹಕರಿಗೆ ಊಟ-ತಿಂಡಿಯನ್ನು ಸರ್ವ್ ಮಾಡುವವರ ಹಿತದೃಷ್ಟಿಯಿಂದ ಸೇವಾ ಶುಲ್ಕ ವಿಧಿಸುವುದು ಅನಿವಾರ್ಯ ಎಂಬುದು ಅರ್ಜಿದಾರರ ವಾದವಾಗಿತ್ತು. ಆದರೆ ಇದನ್ನು ವಿರೋಧಿಸಿದ್ದ ಕೇಂದ್ರ ಸರ್ಕಾರ, ‘ಸೇವಾ ಶುಲ್ಕವನ್ನು ಹೋಟೆಲ್ ಸಿಬ್ಬಂದಿಗೇ ನೀಡಲಾಗುತ್ತದೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ’ ಎಂದಿತ್ತು.

ಏನಿದೆ ಸಿಸಿಪಿಎ ಮಾರ್ಗಸೂಚಿ?

2022ರಲ್ಲಿ ಸಿಸಿಪಿಎ ಮಾರ್ಗಸೂಚಿ ಹೊರಡಿಸಿ, ‘ಕಾನೂನುಬಾಹಿರವಾಗಿ ಮರೆಮಾಡಿ ಸೇವಾ ಶುಲ್ಕವನ್ನು ಮೂಲ ಬಿಲ್‌ನಲ್ಲೇ ಸೇರಿಸಿ ನೀಡಲಾಗುತ್ತದೆ. ಇದು ಕಾನೂನುಬಾಹಿರ. ಸೇವಾ ಶುಲ್ಕವನ್ನು ಪ್ರತ್ಯೇಕವಾಗಿ ನಮೂದಿಸಿ ನೀಡಬೇಕು. ಸೇವಾ ಶುಲ್ಕ ಪಾವತಿಸುವುದು ಗ್ರಾಹಕರಿಗೆ ಐಚ್ಚಿಕ ಎಂದು ಹೇಳಿತ್ತು.

ಸೇವಾ ಶುಲ್ಕ ಕೇಳಿದರೆ ನೀವೇನು ಮಾಡಬೇಕು?

“ಯಾವುದೇ ಗ್ರಾಹಕರಿಗೆ ಸೇವಾ ಶುಲ್ಕವನ್ನು ನೀಡಲೇಬೇಕು ಎಂದು ಇನ್ನು ಮುಂದೆ ಹೋಟೆ ಲ್‌ಗಳು ಬಲವಂತ ಮಾಡಿದರೆ ಗ್ರಾಹಕರು ತಮ್ಮ ದೂರುಗಳನ್ನು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ 1915 ರಲ್ಲಿ ನೋಂದಾಯಿಸಬಹುದು’ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಗ್ರಾಹಕರಿಗೆ ಸಂದ ಜಯ ಇದು

ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌‌‌ಗಳು ಕಡ್ಡಾಯವಾಗಿ ವಿಧಿಸುವ ಸೇವಾ ಶುಲ್ಕ ನಿಷೇಧಿಸುವ ಸಿಸಿಪಿಎ ಮಾರ್ಗಸೂಚಿಯನ್ನು ದೆಹಲಿ ಹೈಕೋರ್ಟ್‌ ಎತ್ತಿಹಿಡಿದಿದೆ. ಇದು ಗ್ರಾಹಕರಿಗೆ ಸಂದ ಜಯ. ಆಹಾರ ಮತ್ತು ಪಾನೀಯ ಬಿಲ್‌ ಮೇಲಿನ ಸೇವಾ ಶುಲ್ಕಗಳು ಸ್ವಯಂಪ್ರೇರಿತವಾಗಿದೆ.

Exit mobile version