ಇಂಡಿಗೋ ಚೆಲ್ಲಾಟ..ವಿಮಾನ ಪ್ರಯಾಣಿಕರಿಗೆ ಪ್ರಾಣ ಸಂಕಟ..!

ಊಟ, ನಿದ್ದೆ ಇಲ್ಲದೆ ಏರ್ಪೋರ್ಟ್‌ನಲ್ಲೇ ಜನ ಸುಸ್ತೋ..ಸುಸ್ತು

Web 2025 12 05T215029.412

ಭಾರತದ ಅತಿದೊಡ್ಡ ಏರ್‌ಲೈನ್ ಇಂಡಿಗೋ ಈಗ ಪ್ರಯಾಣಿಕರಿಗೆ ಭಾರೀ ಸಂಕಟ ತಂದೊಡ್ಡಿದೆ. DGCAಯ ಹೊಸ ನಿಯಮದಿಂದಾಗಿ ಪೈಲಟ್‌ಗಳು-ಕ್ರೂ ಸದಸ್ಯರ ಕೆಲಸದ ಸಮಯ ಮಿತಿ (ವಾರಕ್ಕೆ 35 ಗಂಟೆ, ಗರಿಷ್ಠ) ಜಾರಿಯಾಗಿ ಸಿಬ್ಬಂದಿ ಕೊರತೆ ಉಂಟಾಗಿದೆ.  ಕಳೆದ 4 ದಿನಗಳಲ್ಲಿ 1,200ಕ್ಕೂ ಹೆಚ್ಚು ಫ್ಲೈಟ್‌ಗಳು ರದ್ದು. ದೆಹಲಿಯಲ್ಲಿ 225, ಬೆಂಗಳೂರಿನಲ್ಲಿ 102, ಪುಣೆ-ಹೈದರಾಬಾದ್ ತಲಾ 32, ಮುಂಬೈ-ಚೆನ್ನೈ-ಗೋವಾ-ಕೋಲ್ಕತ್ತಾ-ಜೈಪುರ-ಚಂಡೀಗಢ್‌ಗಳಲ್ಲೂ ನೂರಾರು ಫ್ಲೈಟ್ ರದ್ದು.

ಏರ್‌ಪೋರ್ಟ್‌ಗಳಲ್ಲಿ ಜನರ ದುಸ್ಥಿತಿ:

ಇಂಡಿಗೋ ಸಮಸ್ಯೆ ಯಾಕೆ? DGCAಯ ಹೊಸ ನಿಯಮದ ಪ್ರಕಾರ ಪೈಲಟ್‌ಗಳು ವಾರಕ್ಕೆ 35 ಗಂಟೆ ಮಾತ್ರ ಕೆಲಸ ಮಾಡಬೇಕು, ರಾತ್ರಿ ಲ್ಯಾಂಡಿಂಗ್ ವಾರಕ್ಕೆ 2 ಬಾರಿ ಮಾತ್ರ. ಇದರಿಂದ ಸಿಬ್ಬಂದಿ ಕೊರತೆ ಉಂಟಾಗಿ ಸಾವಿರಾರು ಫ್ಲೈಟ್ ರದ್ದಾಗಿವೆ. ದೇಶದಲ್ಲಿ ಶೇ.60ರಷ್ಟು ಮಾರ್ಕೆಟ್ ಶೇರ್ ಹೊಂದಿರುವ ಇಂಡಿಗೋ ತೋಚದಂತೆ ಪ್ರಯಾಣಿಕರನ್ನು ಬೀದಿಗೆಳೆದಿದೆ ಎಂಬ ಆಕ್ರೋಶ ಎದ್ದಿದೆ.

ಪ್ರಯಾಣಿಕರು ಇಂಡಿಗೋ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ. ಇಂಡಿಗೋ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ, ಆದರೆ ಮುಂದಿನ ಕೆಲವು ದಿನಗಳವರೆಗೂ ಸಮಸ್ಯೆ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Exit mobile version