ಅಜಿತ್ ಪವಾರ್ ನಿಧನ: ಪವಾರ್ ಸಾಮ್ರಾಜ್ಯದ ಮುಂದಿನ ನಾಯಕ ಯಾರು..?

Untitled design 2026 01 28T141752.419

ಮಹಾರಾಷ್ಟ್ರ: ಎರಡು ದಶಕಗಳಿಗೂ ಹೆಚ್ಚು ಕಾಲ ಮಹಾರಾಷ್ಟ್ರ ರಾಜಕೀಯದ ದಿಕ್ಸೂಚಿಯಾಗಿದ್ದ, ಪ್ರೀತಿಯಿಂದ ದಾದಾ ಎಂದೇ ಕರೆಯಲ್ಪಡುತ್ತಿದ್ದ ಅಜಿತ್ ಪವಾರ್ ಅವರ ಅನಿರೀಕ್ಷಿತ ಸಾವು ಇಡೀ ದೇಶದ ರಾಜಕೀಯ ವಲಯದಲ್ಲಿ ಅಚ್ಚರಿ ಜೊತೆಗೆ ಶೋಕ ಉಂಟು ಮಾಡಿದೆ. ಅವರ ಸಾವು ಕೇವಲ ಆಡಳಿತಾರೂಢ ಮಹಾಯುತಿ ಮೈತ್ರಿಕೂಟಕ್ಕೆ ಮಾತ್ರವಲ್ಲದೆ, ಇಡೀ ಮಹಾರಾಷ್ಟ್ರ ರಾಜಕೀಯ ತುಂಬಲಾರದ ನಷ್ಟವಾಗಿದೆ.

ಅಜಿತ್ ಪವಾರ್ ಎಂದರೆ ಕೇವಲ ಒಬ್ಬ ರಾಜಕಾರಣಿಯಲ್ಲ, ಬದಲಿಗೆ ಆಡಳಿತಾತ್ಮಕ ಚಾಣಕ್ಷನ ಸಂಕೇತ. ಯಾವುದೇ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಮತ್ತು ನೀತಿ ನಿರೂಪಣೆಯಲ್ಲಿ ಅವರದು ಎತ್ತಿದ ಕೈ. ತಳಮಟ್ಟದ ಜನರೊಂದಿಗೆ ಅವರು ಹೊಂದಿದ್ದ ಅವಿನಾಭಾವ ಸಂಬಂಧವು ಅವರನ್ನು ಜನನಾಯಕನನ್ನಾಗಿ ರೂಪಿಸಿತ್ತು. ವಿಶೇಷವಾಗಿ ಬಡವರು ಮತ್ತು ಸಮಾಜದ ಹಿಂದುಳಿದ ವರ್ಗಗಳ ಸಬಲೀಕರಣಕ್ಕಾಗಿ ಅವರು ಹಗಲಿರುಳು ಶ್ರಮಿಸಿದ್ದರು. ಅವರ ಪ್ರಾಯೋಗಿಕ ಅಭಿವೃದ್ಧಿ ಮಾದರಿಯು ಮಹಾರಾಷ್ಟ್ರದಾದ್ಯಂತ ಅಪಾರ ಮೆಚ್ಚುಗೆ ಗಳಿಸಿತ್ತು.

ಅಜಿತ್ ಪವಾರ್ ಅವರ ನಿಧನವು ಬಾರಾಮತಿ ಮತ್ತು ಮರಾಠವಾಡ ಪ್ರಾಂತ್ಯದಲ್ಲಿ ಭರಿಸಲಾಗದ ನಷ್ಟವನ್ನ ಸೃಷ್ಟಿಸಿದೆ. ಮುಂಬರುವ ಪುರಸಭೆ ಮತ್ತು ಜಿಲ್ಲಾ ಪರಿಷತ್ ಚುನಾವಣೆಗಳ ಹೊಸ್ತಿಲಲ್ಲಿ ಅವರ ಅನುಪಸ್ಥಿತಿಯು ಮೈತ್ರಿಕೂಟಕ್ಕೆ ದೊಡ್ಡ ಹೊಡೆತ ನೀಡಲಿದೆ.

ಅಜಿತ್ ಪವಾರ್ ಅವರ ನಿರ್ಗಮನದ ನಂತರ ಈಗ ಉತ್ತರಾಧಿಕಾರಿ ಯಾರು ? ಎಂಬ ಪ್ರಶ್ನೆ ಕಾಡುತ್ತಿದೆ. ಅವರ ಕುಟುಂಬದಲ್ಲಿ ಪ್ರಸ್ತುತ ರಾಜಕೀಯವಾಗಿ ಸಕ್ರಿಯರಾಗಿರುವವರ ಪೈಕಿ:

ಒಂದಾಗುತ್ತಾ ಪವಾರ್ ಕುಟುಂಬ ?

ಈ ಮಹಾನ್ ದುರಂತವು ಪವಾರ್ ಕುಟುಂಬವನ್ನು ಮತ್ತೆ ಒಂದು ಮಾಡುವ ಲಕ್ಷಣಗಳನ್ನು ತೋರುತ್ತಿದೆ. ಹಿರಿಯ ನಾಯಕ ಶರದ್ ಪವಾರ್ ಅವರು ಈಗ ಕುಟುಂಬ ಮತ್ತು ಪಕ್ಷದ ಬಣಗಳನ್ನು ಒಗ್ಗಟ್ಟಿನಿಂದ ಕೊಂಡೊಯ್ಯುವ ಗುರುತರ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸುಪ್ರಿಯಾ ಸುಲೆ ಮತ್ತು ಅಜಿತ್ ಪವಾರ್ ಅವರ ನಡುವಿನ ಸಹಯೋಗವು ಎನ್‌ಸಿಪಿ ಬಣಗಳ ವಿಲೀನದ ಮುನ್ಸೂಚನೆಯನ್ನು ನೀಡಿದೆ. ಬಾರಾಮತಿ ಸಂಸದೆ ಸುಪ್ರಿಯಾ ಸುಲೆ ಈ ಸಂಕಷ್ಟದ ಸಮಯದಲ್ಲಿ ಕುಟುಂಬದ ಆಧಾರಸ್ತಂಭವಾಗಿ ನಿಂತಿದ್ದಾರೆ.

ರಾಜ್ಯ ಶೋಕಾಚರಣೆ ಮತ್ತು ಅಂತ್ಯಕ್ರಿಯೆ

ಅಜಿತ್ ಪವಾರ್ ಅವರಿಗೆ ಗೌರವ ಸಲ್ಲಿಸುವ ಸೂಚಕವಾಗಿ ಮಹಾರಾಷ್ಟ್ರ ಸರ್ಕಾರವು ಮೂರು ದಿನಗಳ ಕಾಲ ರಾಜ್ಯ ಶೋಕಾಚರಣೆಯನ್ನು ಘೋಷಿಸಿದೆ. ಬುಧವಾರ ಸಂಜೆ ಬಾರಾಮತಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಯಲಿದೆ. ಪಕ್ಷಾತೀತವಾಗಿ ದೇಶದ ಗಣ್ಯಾತಿಗಣ್ಯರು ಈ ಅಂತಿಮ ಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

Exit mobile version