ನೈಋತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಅನಂತ್‌ಗೆ ಡಾ. ಸಿಎಚ್ ವಿಎಸ್ ವಿ ಪ್ರಸಾದ್ ಅವರಿಂದ ಸನ್ಮಾನ

Untitled design 2026 04 10T180720.742

ನೈಋತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಆಗಿ ಅಧಿಕಾರ ವಹಿಸಿಕೊಂಡ ಪಿ. ಅನಂತ್ ಅವರನ್ನು ಸ್ವರ್ಣ ಗ್ರೂಪ್ ಆಫ್ ಕಂಪನಿಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಸಿಎಚ್ ವಿಎಸ್ ವಿ ಪ್ರಸಾದ್ ಅವರು ಸನ್ಮಾನಿಸಿದರು. ಹುಬ್ಬಳ್ಳಿಯ ನೈಋತ್ಯ ರೈಲ್ವೆ ವಿಭಾಗದ ಕಚೇರಿಯಲ್ಲಿ ಪಿ. ಅನಂತ್‌ ಅವರನ್ನು ಭೇಟಿಯಾಗಿ ಸಿಎಚ್ ವಿಎಸ್ ವಿ ಪ್ರಸಾದ್ ಹೂಗುಚ್ಛ ನೀಡಿ ಸತ್ಕರಿಸಿದರು. ಇದೇ ವೇಳೆ ಡಾ. ಪ್ರಸಾದ್ ಅವರು ನೈಋತ್ಯ ರೈಲ್ವೆಯಲ್ಲಿನ ಎಲ್ಲಾ ಯೋಜನೆಗಳ ಸಕಾಲಿಕ ಅನುಷ್ಠಾನ ಮತ್ತು ಪೂರ್ಣಗೊಳಿಸಲು ಎಲ್ಲಾ ಗುತ್ತಿಗೆದಾರರ ಸಂಪೂರ್ಣ ಸಹಕಾರವನ್ನು ಭರವಸೆ ನೀಡಿದ್ದಾರೆ.

ಅಲ್ಲದೇ ಎಲ್ಲಾ ಗುತ್ತಿಗೆದಾರರು ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಜನರಲ್ ಮ್ಯಾನೇಜರ್ ಬಳಿ  ಸಿಎಚ್ ವಿಎಸ್ ವಿ ಪ್ರಸಾದ್  ವಿನಂತಿಸಿದರು. ಇದಕ್ಕೆ ಜನರಲ್ ಮ್ಯಾನೇಜರ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿ, ಅದನ್ನು ಆದಷ್ಟು ಬೇಗ ಪರಿಹರಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬಿ. ರಾಮಮೋಹನ್ ರೆಡ್ಡಿ, ಮುಖ್ಯ ಆಡಳಿತಾಧಿಕಾರಿ, ರಸ್ತೆ ಸುರಕ್ಷತಾ ಯೋಜನೆಗಳು, ನೈಋತ್ಯ ರೈಲ್ವೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Exit mobile version