ಹಿರಿಯ ಸಾಹಿತಿ ಎಸ್‌.ಎಲ್‌ ಭೈರಪ್ಪ ನಿಧನ

Untitled design 2025 09 24t145608.892

ನಾಡಿನ ಹಿರಿಯ ಸಾಹಿತಿ ಎಸ್​ಎಲ್ ಬೈರಪ್ಪ ಅವರು ನಿಧನರಾಗಿದ್ದಾರೆ. 94 ವರ್ಷದ ಬೈರಪ್ಪ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. ಅವರಿಗೆ ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಭಾಜನರಾಗಿದ್ದರು.

ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪನವರು 1931ರ ಆಗಸ್ಟ್ 20ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಸಂತೇಶಿವರದಲ್ಲಿ ಜನಿಸಿದರು. ಭೈರಪ್ಪನವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸಂತೇಶಿವರದಲ್ಲೇ ಪೂರೈಸಿದರು. ಕಷ್ಟದ ಬಾಲ್ಯವನ್ನು ಎದುರಿಸಿದ ಅವರು ತಮ್ಮ ಬರವಣಿಗೆಯ ಮೂಲಕ ಜೀವನದವನ್ನು ಚಿತ್ರಿಸುವಲ್ಲಿ ಯಶಸ್ವಿಯಾದರು.

ಎಸ್.ಎಲ್. ಭೈರಪ್ಪನವರು ಕನ್ನಡ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಅವರ ಕಾದಂಬರಿಗಳು ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ, ಇಂಗ್ಲಿಷ್ ಮತ್ತು ಇತರ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ದೇಶಾದ್ಯಂತ ಮನ್ನಣೆ ಪಡೆದಿವೆ. ಭೀಮಕಾಯ, ದೂರ ಸರಿದರು, ಜಲಪಾತ, ನಾಯಿ ನೆರಳು, ತಬ್ಬಲಿಯು ನೀನಾದೆ ಮಗನೆ, ಗ್ರಹಣ, ಮತ್ತು ನೆಲೆ ಮುಂತಾದ ಕಾದಂಬರಿಗಳು ಓದುಗರಿಂದ ಭಾರೀ ಜನಮನ್ನಣೆಯನ್ನು ಗಳಿಸಿವೆ.

ಭೈರಪ್ಪನವರ ಕೆಲವು ಪ್ರಮುಖ ಕೃತಿಗಳು

* ಭೀಮಕಾಯ: (1958)
* ವಂಶವೃಕ್ಷ: (1965)
* ತಬ್ಬಲಿಯು ನೀನಾದೆ ಮಗನೆ: (1968)
* ಗೃಹಭಂಗ: (1970)
* ಪರ್ವ: (1979)
* ಸಾರ್ಥ: (1998)
* ಆವರಣ: (2007)
* ಕವಲು: (2010)
* ಯಾನ: (2014)
* ಉತ್ತರಕಾಂಡ: (2017)

ಭೈರಪ್ಪನವರ ಆತ್ಮಕಥೆ

ತಮ್ಮ ಆತ್ಮಕಥೆ ಭಿತ್ತಿಯಲ್ಲಿ ಭೈರಪ್ಪನವರು ತಮ್ಮ ಬಾಲ್ಯ, ಶಿಕ್ಷಣ, ಮತ್ತು ಸಾಹಿತ್ಯ ಜೀವನದ ಬಗ್ಗೆ ವಿವರವಾಗಿ ಬರೆದಿದ್ದಾರೆ. ಈ ಕೃತಿಯು ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಒಂದು ಒಳನೋಟವನ್ನು ತಿಳಿಸುತ್ತದೆ.

 

 

Exit mobile version