ನೆಲಮಂಗಲ: ಚಾಲಕನ ನಿರ್ಲಕ್ಷ್ಯದಿಂದ ಲಾರಿವೊಂದು ಮನೆಯೊಳಗೆ ನುಗ್ಗಿದ ಭೀಕರ ಘಟನೆ ಬೆಂಗಳೂರು ಉತ್ತರ ತಾಲೂಕಿನ ಆಲೂರು ತಪೋವನ ಗ್ರಾಮದಲ್ಲಿ ನಡೆದಿದೆ. ರಾತ್ರಿ 2:13 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದ ಆರು ಮಂದಿ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಕುಡಿದ ಮತ್ತಿನಲ್ಲಿ ಚಾಲಕ ಜಗದೀಶ್ ಎಂಬುವವರು ಲಾರಿ ಚಾಲನೆ ಮಾಡಿದ್ದಾನೆ ಎನ್ನಲಾಗಿದೆ
ಜಲ್ಲಿ ಲಾರಿಯು ರಾತ್ರಿ 2.13ರ ಸುಮಾರಿಗೆ ಚಾಲಕನ ನಿಯಂತ್ರಣ ಕಳೆದುಕೊಂಡು ರೈತ ನಂಜಪ್ಪ ಅವರಿಗೆ ಸೇರಿದ ಮನೆಯಲ್ಲಿ ನುಗ್ಗಿದೆ. ಲಾರಿಯು ಗಿದ್ದಿದ ಪರಿಣಾಮ ಮನೆಯ ಕಾಂಪೌಂಡ್ ಗೋಡೆ, ಪಿಲ್ಲರ್ ಮತ್ತು ಮನೆ ಎದುರಿನ ಎರಡು ಕಾರುಗಳು ಹಾಗೂ ಮೂರು ಬೈಕ್‌ಗಳಿಗೆ ಡಿಕ್ಕಿ ಹೊಡೆದು ಸಂಪೂರ್ಣ ಹಾನಿಯಾಗಿದೆ.
ಆ ಘಟನೆಯ ಸಮಯದಲ್ಲಿ ಮನೆಯ ಒಳಗೆ ನಂಜಪ್ಪ ಅವರ ಕುಟುಂಬದ ಆರು ಮಂದಿ ಮಲಗಿದ್ದರು. ಭೀಕರ ಸದ್ದು ಕೇಳಿ ಎಚ್ಚರಗೊಂಡ ಕುಟುಂಬದವರು ಆತಂಕಗೊಂಡಿದ್ದರು. ಲಾರಿ ಮನೆಯ ಒಳಗೆ ನುಗ್ಗುತ್ತಿದ್ದಂತೆಯೇ ಎಲ್ಲರೂ ಭಯಭೀತರಾಗಿ ಹೊರಗೆ ಓಡಿದ್ದಾರೆ. ಸದ್ಯ ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯಗಳಾಗಿಲ್ಲ.
ಘಟನೆಯ ದೃಶ್ಯಗಳು ಸಿಸಿಟಿವಿ ಸೆರೆಯಾಗಿದ್ದು, ಲಾರಿ ಅತಿ ವೇಗದಲ್ಲಿ ಬಂದು ನೇರವಾಗಿ ಮನೆಯತ್ತ ನುಗ್ಗುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಲಾರಿ ಚಾಲಕನಾದ ಜಗದೀಶ್‌ರನ್ನು ವಶಕ್ಕೆ ಪಡೆದಿದ್ದಾರೆ.
ಭೀಕರ ರಸ್ತೆ ಅಪಘಾತ: ಲಾರಿ ಡ್ರೈವರ್ ನಿರ್ಲಕ್ಷ್ಯಕ್ಕೆ ಮಹಿಳೆ ಬಲಿ
ಬೆಂಗಳೂರು, ಆಗಸ್ಟ್ 20, 2025: ಲಾರಿ ಚಾಲಕನ ಅಜಾಗರೂಕತೆಯಿಂದ ಮಹಿಳೆಯೊಬ್ಬರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಈ ಘಟನೆ ಬೆಂಗಳೂರಿನ ಜಾಲಹಳ್ಳಿ ಸರ್ಕಲ್‌ನಲ್ಲಿ ನಡೆದಿದೆ. ಈ ಘಟನೆ ಆಗಸ್ಟ್ 20 ರಂದು ರಾತ್ರಿ 8:30ರ ಸುಮಾರಿಗೆ ಸಂಭವಿಸಿದ್ದು, ಜಾಲಹಳ್ಳಿ ಸರ್ಕಲ್ ಸಿಗ್ನಲ್ ಬಳಿ ಭಾರೀ ಟ್ರಾಫಿಕ್ ಜಾಮ್‌ಗೆ ಕಾರಣವಾಯಿತು. ಪೀಣ್ಯ ಸಂಚಾರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.
ಜಾಲಹಳ್ಳಿ ಸರ್ಕಲ್‌ನ ಸಿಗ್ನಲ್ ದಾಟುವ ಪ್ರಯತ್ನದಲ್ಲಿದ್ದ ಮಹಿಳೆಯೊಬ್ಬರು, 20 ಅಡಿ ಉದ್ದದ ಲಾರಿಯೊಂದು ಯೂ-ಟರ್ನ್ ಮಾಡುವಾಗ ಅದರ ಹಿಂಬದಿ ಚಕ್ರಕ್ಕೆ ಸಿಲುಕಿದ್ದಾರೆ. ಮಹಿಳೆ ಚಕ್ರದಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಸುತ್ತಮುತ್ತಲಿನ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ, ಸ್ಥಳೀಯರಿಗೆ ಮತ್ತು ವಾಹನ ಚಾಲಕರಿಗೆ ತೀವ್ರ ತೊಂದರೆಯಾಯಿತು.
ಪೀಣ್ಯ ಸಂಚಾರಿ ಪೊಲೀಸರು ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಲಾರಿ ಚಾಲಕನ ವಿರುದ್ಧ ತನಿಖೆ ಆರಂಭವಾಗಿದ್ದು, ಆತನ ನಿರ್ಲಕ್ಷ್ಯದ ಚಾಲನೆಗೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಿಂದ ಜಾಲಹಳ್ಳಿ ಸರ್ಕಲ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ವ್ಯವಸ್ಥೆಗೆ ತೀವ್ರ ತೊಂದರೆಯಾಯಿತು. ಸಿಗ್ನಲ್‌ನಲ್ಲಿ ಟ್ರಾಫಿಕ್ ಜಾಮ್‌ನಿಂದಾಗಿ ವಾಹನಗಳು ಗಂಟೆಗಟ್ಟಲೆ ಒಂದೇ ಸ್ಥಳದಲ್ಲಿ ನಿಂತಿದ್ದವು.





