ಬೆಂಗಳೂರು: ತಾನು ಬುರುಡೆ ಗ್ಯಾಂಗ್ ಹಿಂದೆ ಹೋಗಿ ತಪ್ಪು ಮಾಡಿದೆ. ಈಗ ತನ್ನ ಕೃತ್ಯಕ್ಕೆ ಪಶ್ಚಾತ್ತಾಪವಾಗುತ್ತಿದೆ. ಮುಂದಿನ ವಾರ ಧರ್ಮಸ್ಥಳಕ್ಕೆ ತೆರಳಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಕ್ಷಮೆಯಾಚಿಸುವೇ ಎಂದು ಸುಜಾತಾ ಭಟ್ ತಿಳಿಸಿದ್ದಾರೆ.
“ನಾನು ಬುರುಡೆ ಗ್ಯಾಂಗ್‌ನೊಂದಿಗೆ ಸಂಬಂಧ ಹೊಂದಿದ್ದು ತಪ್ಪಾಯಿತು. ಆಗ ಏನೋ ಗೊತ್ತಿಲ್ಲದೇ ತಪ್ಪು ಮಾಡಿದೆ. ಈಗ ಅದಕ್ಕೆ ತೀವ್ರವಾಗಿ ಪಶ್ಚಾತ್ತಾಪವಾಗುತ್ತಿದೆ. ಮುಂದಿನ ವಾರ ಧರ್ಮಸ್ಥಳಕ್ಕೆ ತೆರಳಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆಯುವೆ. ಜೊತೆಗೆ ಡಾ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ, ನನ್ನಿಂದ ಆದ ತಪ್ಪಿಗೆ ಕ್ಷಮೆ ಕೇಳುವೆ,” ಎಂದು ಸುಜಾತಾ ಭಟ್ ತಿಳಿಸಿದರು. “ನನ್ನ 60 ವರ್ಷದ ಜೀವನದಲ್ಲಿ ಈ ಘಟನೆಯೊಂದು ಕಪ್ಪು ಚುಕ್ಕೆಯಾಗಿದೆ. ಇನ್ನಾದರೂ ಒಳ್ಳೆಯ ಜೀವನ ನಡೆಸುವ ಆಸೆ ಇದೆ,” ಎಂದು ಅವರು ಹೇಳಿದರು.
ಈ ವೇಳೆ ಸುಜಾತಾ ಭಟ್, ತಮಾಷೆಗೆ ತಾವು ವಾಸಂತಿಯ ಫೋಟೋಗೆ ಬೊಟ್ಟಿಟ್ಟು ತೋರಿಸಿದ್ದಾಗಿ ತಿಳಿಸಿದರು. “ನಾನೇ ಆ ಫೋಟೋ ತೋರಿಸಿದ್ದು. ಆದರೆ ಇದು ಇಷ್ಟು ದೊಡ್ಡ ವಿಷಯವಾಗಿ ಬೆಳೆಯುತ್ತದೆ ಎಂದು ಊಹಿಸಿರಲಿಲ್ಲ. ಈಗಲಾದರೂ ನ್ಯಾಯ ಸಿಗಲಿ ಎಂದು ಆ ಫೋಟೋ ತೋರಿಸಿದೆ,” ಎಂದು ಅವರು ಸ್ಪಷ್ಟಪಡಿಸಿದರು.