ಹಣಕ್ಕಾಗಿ ತಾಯಿಯನ್ನೇ ಹ*ತ್ಯೆಗೈದ ಮಗ

Untitled design 2025 04 11t215615.783

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ದಾರುಣ ಕೊಲೆ ಸಂಭವಿಸಿದೆ. ಹಣದ ಆಸೆಗಾಗಿ ಮಗನೇ ಹೆತ್ತ ತಾಯಿಯನ್ನೇ  ಕಬ್ಬಿಣದ ರಾಡ್‌ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ನಗರದ ಬಾಗಲಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ನಗರದಲ್ಲಿ ನಡೆದಿದೆ. ತಾಯಿಯನ್ನು ಕೊಲೆ ಮಾಡಿದ ಬಳಿಕ ಪಾಪಿ ಮಗ ಪರಾರಿಯಾಗಿದ್ದ. ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆರೋಪಿ ಮಹೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಕೊಲೆಯಾದ ಮಹಿಳೆ ಶಾಂತಾಬಾಯಿ (65) ಅವರು ಮಹೇಂದ್ರ ಸಿಂಗ್‌ನ ತಾಯಿ. ಕುಟುಂಬದಲ್ಲಿ ಹಣಕಾಸು ವಿಚಾರಕ್ಕೆ ಆಗಾಗ ಜಗಳಗಳು ನಡೆಯುತ್ತಿದ್ದವು ಎನ್ನಲಾಗುತ್ತಿದೆ. ಮಹೇಂದ್ರ ಸಿಂಗ್ ಪ್ರತಿದಿನವೂ ತಾಯಿಗೆ ಹಣಕ್ಕಾಗಿ ಗಲಾಟೆ ಮಾಡುತ್ತಿದ್ದ. ಇದೀಗ ಈ ಹಣ ವಿಚಾರಕ್ಕೆ ಜಗಳವಾಗಿದೆ ಎನ್ನಲಾಗಿದೆ.

ಮಗನ ನಿರಂತರ ಹಣದ ಬೇಡಿಕೆ ಹಾಗೂ ಕಿರುಕುಳದಿಂದ ಅವರು ಮಾನಸಿಕವಾಗಿ ತೀವ್ರ ತೊಂದರೆ ಅನುಭವಿಸುತ್ತಿದ್ದರು. ನಿನ್ನೆ ರಾತ್ರಿ, ಎಂದಿನಂತೆ ಮಗ ಮಹೇಂದ್ರ ಅವರ ಬಳಿ ಹಣಕ್ಕಾಗಿ ಕಿರಿಕ್ ಮಾಡಿದ್ದ. ತಾಯಿ ಹಣ ನೀಡಲು ನಿರಾಕರಿಸಿದಾಗ, ಜಗಳ ಶುರುವಾಗಿದೆ. ಕೋಪಗೊಂಡ ಮಗನು ಅಡಿಗೆ ಮನೆಗೆ ಹೋಗಿ ಕಬ್ಬಿಣದ ರಾಡ್ ತೆಗೆದುಕೊಂಡು ಬಂದಿದ್ದು, ತಾಯಿಯ ತಲೆಗೆ ಬಲವಾಗಿ ಏಕಾಏಕಿ ಹೊಡೆದಿದ್ದಾನೆ.

ಈ ಹೊಡೆತದ ಪರಿಣಾಮ ಶಾಂತಾಬಾಯಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಕೊಲೆ ನಂತರ ಮಹೇಂದ್ರ ಸಿಂಗ್ ಸ್ಥಳದಿಂದ ಪರಾರಿಯಾಗಿದ್ದಾನೆ. ಬಾಗಲಕುಂಟೆ ಪೊಲೀಸರು ಸ್ಥಳಕ್ಕೆ ತಕ್ಷಣವೇ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸಾಗಿಸಲಾಗಿದ್ದು, ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

 

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
Exit mobile version