ಬೆಂಗಳೂರು: ಬೆಂಗಳೂರು ನಗರದ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ತಡರಾತ್ರಿ ಒಂದು ವಿಚಿತ್ರ ಘಟನೆ ನಡೆದಿದೆ. ರಾತ್ರಿ 11 ಗಂಟೆ ಸುಮಾರಿಗೆ, ಐಟಿ ಉದ್ಯೋಗಿಯೊಬ್ಬ (ಟೆಕ್ಕಿ) ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದಾಗ, ಇದ್ದಕ್ಕಿದ್ದಂತೆ ಬೀದಿ ನಾಯಿಗಳ ಗುಂಪೊಂದು ಅವರನ್ನು ಬೆನ್ನಟ್ಟಿ ದಾಳಿ ಮಾಡಲು ಯತ್ನಿಸಿದ್ದವು. ಜೀವ ಭಯಕ್ಕೆ ಹೆದರಿದ ಟೆಕ್ಕಿ, ತಕ್ಷಣ ಓಡತೊಡಗಿದನು. ನಾಯಿಗಳಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ, ಸಮೀಪದ ಮನೆಯ ಕಾಂಪೌಂಡ್ ಗೋಡೆಯ ಮೇಲೆ ಹಾರಿದ್ದಾನೆ. ಆದರೆ, ಒಳಗೆ ಹಾರಿದ ಕೂಡಲೇ, ಮನೆಯವರು ಅವರನ್ನು ಕಳ್ಳನೆಂದು ಭಾವಿಸಿ ಹಿಡಿದುಕೊಂಡರು.
ಮನೆಯವರು ಕೋಪಗೊಂಡು ಟೆಕ್ಕಿಯ ಮೊಬೈಲ್‌ನ್ನು ಕಿತ್ತುಕೊಂಡು ಪರಿಶೀಲನೆ ಮಾಡಲು ಮುಂದಾದರು. ಟೆಕ್ಕಿ ತಮ್ಮ ಗುರುತಿನ ದಾಖಲೆಗಳಾದ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ನೀಡಿದನು. ಅಲ್ಲದೇ ತಾವು ಸಾಫ್ಟ್‌ವೇರ್ ಎಂಜಿನಿಯರ್ ಎಂಬುದನ್ನು ಸಾಬೀತುಪಡಿಸಲು ಡಾರ್ವಿನ್‌ಬಾಕ್ಸ್ ಪ್ರೊಫೈಲ್ ತೋರಿಸಿದರೂ, ಮನೆಯವರು ನಂಬಲಿಲ್ಲ. “ನಾಯಿಗಳು ಬೆನ್ನಟ್ಟುತ್ತಿದ್ದರೂ ನಮ್ಮ ಆವರಣಕ್ಕೆ ಏಕೆ ಪ್ರವೇಶಿಸಿದಿರಿ?” ಎಂದು ಪ್ರಶ್ನಿಸಿದರು. ಮನೆಯವರಿಗೆ ತಕ್ಷಣ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲು ಮತ್ತು ಪೊಲೀಸರಿಗೆ ಕರೆ ಮಾಡಿ ಎಂದು ಹೇಳಿದೆ. ಆದರೆ ಅವರು ಅದನ್ನು ನಿರಾಕರಿಸಿದರು. ಬದಲಿಗೆ, ಟೆಕ್ಕಿಯ ಫೋನ್‌ನ್ನು ತಮ್ಮ ಬಳಿ ಇಟ್ಟುಕೊಂಡು, “ನಾಳೆ ಬೆಳಿಗ್ಗೆ ಪರಿಶೀಲನೆಯ ನಂತರವೇ ಹಿಂತಿರುಗಿಸುತ್ತೇವೆ” ಎಂದು ಹೇಳಿದರು.
ಸುಮಾರು 30 ನಿಮಿಷಗಳ ಕಾಲ ಟೆಕ್ಕಿ ಅಸಹಾಯಕನಾಗಿ ನಿಂತಿದ್ದೆ ಎಂದನು. ಕೊನೆಗೆ, ಮನೆಯವರು ನೆರೆಹೊರೆಯವರನ್ನು ಕರೆದು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ, ಟೆಕ್ಕಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಮಾತ್ರ ಗೇಟ್ ಹಾರಿದ್ದರು ಎಂಬ ಸತ್ಯ ಬೆಳಕಿಗೆ ಬಂದಿತ್ತು. ನೆರೆಹೊರೆಯವರು ಈ ವಿಷಯವನ್ನು ದೃಢಪಡಿಸಿದ ನಂತರ, ಮನೆಯವರು ತಪ್ಪು ತಿಳಿದುಕೊಂಡಿದ್ದಕ್ಕೆ ಕ್ಷಮೆಯಾಚಿಸಿ, ಟೆಕ್ಕಿಯ ಫೋನ್‌ನ್ನು ಹಿಂತಿರುಗಿಸಿದರು. ಟೆಕ್ಕಿಯು ಈ ಘಟನೆಯನ್ನು ತಮ್ಮ ರೆಡಿಟ್ ಖಾತೆಯಲ್ಲಿ ವಿವರವಾಗಿ ಬರೆದು ಹಂಚಿಕೊಂಡಿದ್ದಾರೆ. ಇದೀಗ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.