ಇಂದು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಯಾಗಲಿದೆ. ಇದಕ್ಕೆ ಮುಖ್ಯ ಕಾರಣ ರಾಜ್ಯದ ಸುದೀರ್ಘ ಅವಧಿಗೆ ಸಿಎಂ ಆಗಿದ್ದ ದೇವರಾಜ ಅರಸ್ ದಾಖಲೆಯನ್ನು ಸಿದ್ದರಾಮಯ್ಯ ಮುರಿಯುತ್ತಿದ್ದಾರೆ. ಇದರೊಂದಿಗೆ 17ನೇ ಬಜೆಟ್ ಮಂಡಿಸಿ ಹೊಸ ದಾಖಲೆ ನಿರ್ಮಿಸಲು ಮುಂದಾಗಿದ್ದಾರೆ.
ಸಿದ್ದರಾಮಯ್ಯ ಎಂಬ ಹೆಸರೇ ಒಂದು ಬ್ರಾಂಡ್..ಅಹಿಂದ ಕೋಟೆ ಕಟ್ಟಿ ಚಕ್ರಾಧಿಪತಿಯಾದ ಚಕ್ರವರ್ತಿ. ಕಾಂಗ್ರೆಸ್ ಪಕ್ಷವನ್ನು ಪುನರುಜ್ಜೀವನ ಮಾಡಿದ ಚಾಣಾಕ್ಯ ನಾಯಕ..ಕರ್ನಾಟಕದ ರಾಜಕೀಯದಲ್ಲಿ ಮಾಸ್ ಲೀಡರ್ ಎಂದೇ ಖ್ಯಾತಿ ಗಳಿಸಿರುವ ಸಿದ್ದರಾಮಯ್ಯ ಇಂದು ಕರ್ನಾಟಕದ ರಾಜಕೀಯದಲ್ಲಿ ಹೊಸ ಮೈಲಿಗಲ್ಲನ್ನು ಸೃಷ್ಟಿಸಿದ್ದಾರೆ. ಭಾಗ್ಯಗಳ ಭಾಗ್ಯದಾತ ಎಂದೇ ಕರೆಯುವ ಸಿದ್ದರಾಮಯ್ಯ ದೀರ್ಘಾವಧಿ ಸಿಎಂ ಎಂಬ ಹೊಸ ದಾಖಲೆ ಬರೆದಿದ್ದಾರೆ.
ರಾಜ್ಯದ ದೀರ್ಘಾವಧಿ ಸಿಎಂ ಎಂಬ ಹೆಗ್ಗಳಿಕೆಗೆ ಸಿಎಂ ಸಿದ್ದರಾಮಯ್ಯ ಪಾತ್ರರಾಗಿದ್ದಾರೆ. ದಿವಗಂತ ದೇವರಾಜ್ ಅರಸು ಬಳಿಕ ರಾಜ್ಯದಲ್ಲಿ ಅತಿ ದಿರ್ಘಾವಧಿ ಮುಖ್ಯಮಂತ್ರಿ ಆಗಿ ಆಡಳಿತ ನಡೆಸಿದ ಕೀರ್ತಿ ಸಿದ್ದರಾಮಯ್ಯನವರಿಗೆ ಸಲ್ಲುತ್ತದೆ. ಅಹಿಂದ ಶಕ್ತಿಯ ಪರಿಕಲ್ಪನೆಯ ಜನ್ಮದಾತ ಅರಸು ಆದರೆ, ಅದೇ ಅಹಿಂದ ಪರಿಕಲ್ಪನೆಯ ಮೂಲಕ ರಾಜಕಾರಣ ಮಾಡಿ ಅಹಿಂದಾ ನಾಯಕನಾಗಿ ಏಕಚಕ್ರಾಧಿಪತ್ಯ ಸ್ಥಾಪಿಸಿ ಆ ವರ್ಗಗಳ ಪ್ರಶ್ನಾತೀತ ನಾಯಕರಾಗಿ ಹೊರಹೊಮ್ಮಿದ್ದು ಮಾತ್ರ ಸಿದ್ದರಾಮಯ್ಯ.
ದೇವರಾಜ್ ಅರಸು 7 ವರ್ಷ 239 ದಿನಗಳ ಕಾಲ ರಾಜ್ಯದಲ್ಲಿ ಆಡಳಿತ ನಡೆಸಿ ಸುದೀರ್ಘಕಾಲದ ಸಿಎಂ ಎಂಬ ದಾಖಲೆ ಇಲ್ಲಿಯವರೆಗೂ ಇತ್ತು ಆದರೆ ಇಂದಿನಿಂದ ಆ ದಾಖಲೆ ಸಿದ್ದರಾಮಯ್ಯನವರ ಪಾಲಾಗಿದೆ, ಅರಸು ಅವರು ಮಾರ್ಕ್ಸ್ ಸಿದ್ಧಾಂತ ಪ್ರಭಾವ ಇದ್ದರೆ, ಸಿದ್ದರಾಮಯ್ಯ ಅವರಿಗೆ ಲೋಹಿಯಾ ಸಿದ್ದಾಂತ ಪ್ರಭಾವಿಸಿತ್ತು, ಈ ಇಬ್ಬರು ನಾಯಕರು ಕಾಂಗ್ರೆಸ್‌ನಲ್ಲಿ ಧೃವ ತಾರೆಗಳಾಗಿ ಉಳಿದ್ದಿದ್ದಾರೆ. ಸಾಮಾಜಿಕ ನ್ಯಾಯದ ಮೇಲೆ ಉಳುವವನೇ ಹೊಲದೊಡೆಯ ಎಂಬ ಕ್ರಾಂತಿ ಅರುಸು ಕಾರಣರಾದ್ರೆ, ಬಡವರಿಗೆ ಅನ್ನಭಾಗ್ಯ ಕೊಟ್ಟು ಸಿದ್ದರಾಮಯ್ಯ ಅನ್ನರಾಮಯ್ಯ ಆಗಿದ್ದಾರೆ. ಸಿದ್ದರಾಮಯ್ಯನವರ ಆಡಳಿತದ ಅನುಭವ, ಜನ ಮನ್ನಣೆ, ಜನಮಾನಸ ನಾಯಕರಾಗಿ ಉಳಿದುಕೊಂಡಿದೆ.
ತಮ್ಮದೇ ತವರು ಜಿಲ್ಲೆಯ ದಿ. ದೇವರಾಜ ಅರಸು ಅವರ 2792 ದಿನಗಳ ಕಾಲ ರಾಜ್ಯದ ಸಿಎಂ ಆಗಿ ಆಳ್ವಿಕೆ ನಡೆಸಿದ ದಾಖಲೆಯನ್ನ 40 ವರ್ಷಗಳ ಬಳಿಕ ಸಿದ್ದರಾಮಯ್ಯ ತಮ್ಮದಾಗಿಸ್ತಿದ್ದಾರೆ. ಇನ್ನು ದಾಖಲೆಯ 16 ಭಾರಿ ಬಜೆಟ್ ಮಾಡಿರುವುದು ಸಹ ಮತ್ತೊಂದು ದಾಖಲೆಯಾಗಿದೆ. ಅರಸು ದಾಖಲೆ ಸರಿಗಟ್ಟಿದ ಸಂಭ್ರಮದಲ್ಲಿರುವ ಸಿಎಂ ಸಿದ್ದರಾಮಯ್ಯ ಅರಸು ದಾಖಲೆ ಮುರಿದಿರುವುದು ಜನರ ಆಶೀರ್ವಾದದಿಂದ ಸೌಜನ್ಯದಿಂದ ಎಂದು ಪ್ರತಿಕ್ರಿಯಿಸಿದ್ದಾರೆ.
ಕುರಿ ಕಾಯುವ ಹುಡುಗನೊಬ್ಬ ಕರ್ನಾಟಕ ರಾಜ್ಯದಲ್ಲಿ ಅತಿ ಬಜೆಟ್ ಮಂಡನೆ ಮಾಡಿದ್ದಾರೆ ಎಂಬುದು ನಿಜಕ್ಕೂ ದಂತಕತೆಯಾಗಿ ಉಳಿದುಕೊಳ್ಳುತ್ತದೆ. ಇನ್ನೂ ಸಿಎಂ ಸಿದ್ದರಾಮಯ್ಯ ಅವರು 2 ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಜನಸಾಮಾನ್ಯರಲ್ಲಿ ಉಳಿದುಕೊಂಡಿದ್ದಾರೆ. ಒಟ್ಟಾರೆ ಸಿದ್ದರಾಮಯ್ಯನವರಿಗೆ ಸಿದ್ದರಾಮಯ್ಯನವರೇ ಸಾಟಿ ಎಂಬುದನ್ನು ಮತ್ತೊಮ್ಮೆ ಮಗದೊಮ್ಮೆ ಸಾಬೀತು ಮಾಡುತ್ತಲೇ ಬಂದಿದ್ದಾರೆ.





