ಮೂರ್ತಿ, ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್, ನೆಲಮಂಗಲ
ಬೆಂಗಳೂರು: ನೆಲಮಂಗಲದಲ್ಲಿ ಯುವ ವಕೀಲೆ ಮತ್ತು ಮತ್ತೊಬ್ಬ ಯುವಕನ ಸಾವಿನಿಂದ ಸ್ಥಳೀಯರಲ್ಲಿ ಭೀತಿ ಮೂಡಿದೆ. ಇಬ್ಬರೂ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರಕರಣದ ಹಿಂದಿನ ರಹಸ್ಯ ಬಿಚ್ಚಿಡಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ವಕೀಲೆ ರಮ್ಯಾ (26) ಶ್ರೀನಿವಾಸಪುರದ ಶೆಡ್‌ನಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆ ಅದ್ರೆ, ಪುನೀತ್ (25) ತನ್ನ ವಾಸವಿದ್ದ ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸಾವಿಗೂ ಮೊದಲು ರಮ್ಯಾ, ಮಾವನಿಗೆ ದಿನೇಶ್ ಹಾಗೂ ಕುಟುಂಬವನ್ನ ಬಿಡಬೇಡಿ ನನ್ನ ಸಾವಿಗೆ ಇವರೆ ಕಾರಣ ಅಂತ ವಾಯ್ಸ್ ಮೆಸೇಜ್ ಮೂಲಕ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಮ್ಯಾ ಸಾವಿಗೆ ನೆಲಮಂಗಲ ಬಸವನಹಳ್ಳಿಯ ಉದ್ಯಮಿ ದಿನೇಶ್ ಎಂಬಾತ ಕಾರಣವೆಂದು ತಿಳಿಸಲಾಗಿದೆ. ಅರೋಪಿ ದಿನೇಶ್ ಗ್ರಾನೈಟ್ ವ್ಯವಹಾರ ಮಾಡುತ್ತಿದ್ದ ಉದ್ಯಮಿ. ರಮ್ಯಾ ತಾಯಿ ಸಮಾಧಿ ನಿರ್ಮಾಣ ಸಂದರ್ಭದಲ್ಲಿ ದಿನೇಶ್ ಪರಿಚಯವಾಗಿತ್ತು. ಆದರೆ ಇವರ
ಸಂಬಂಧ ಯಾವ ರೀತಿಯಲ್ಲಿ ಇತ್ತು ಅನ್ನುವುದು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ. ಶೆಡ್ ಬಳಿ ಬಂದು ಕೊಲೆ ಮಾಡಿ ಪರಾರಿಯಾದ ಶಂಕೆ ಇದೆ ಎನ್ನಲಾಗ್ತಿದೆ. ಇದರಿಂದ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಪುನೀತ್ ಕೂಡ ನೇಣುಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿರುವುದು, ಪ್ರಕರಣವನ್ನು ಮತ್ತಷ್ಟು ಗೂಢಮಯಗೊಳಿಸಿದೆ. ಆತ್ಮಹತ್ಯೆ ಅಥವಾ ಸಂಚು ಎಂಬ ಪ್ರಶ್ನೆಗೆ ಉತ್ತರಿಸಲು ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಪೊಲೀಸರ ಕ್ರಮ
ನೆಲಮಂಗಲ ಗ್ರಾಮಾಂತರ ಠಾಣೆಯ ಪೊಲೀಸರು ದಿನೇಶ್ ಪತ್ತೆಗಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದು, ಪ್ರಕರಣದ ನಿಖರ ಸತ್ಯ ಬಯಲಿಗೆಳೆಯಲು ತಂಡ ರಚಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿ, ಕಾಲ್ ಡೇಟಾ ಮತ್ತು ವಾಯ್ಸ್ ಮೆಸೇಜ್‌ಗಳನ್ನು ಪರಿಶೀಲಿಸಲಾಗುತ್ತಿದೆ.
ಇದೊಂದು ಆತ್ಮಹತ್ಯೆಯ ಸರಣಿ ಅಲ್ಲ, ಬದಲಾಗಿ ಸಂಚು ರೂಪದ ಕೊಲೆಯಾಗಿರಬಹುದೆಂಬ ಶಂಕೆ ಸಾಮಾಜಿಕ ವಲಯದಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿದೆ. ಸ್ಥಳೀಯರು ನ್ಯಾಯಕ್ಕೆ ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.
ಈ ಘಟನೆಯ ಹಿಂದಿನ ನಿಜ ರೂಪ ಬಯಲಾಗಬೇಕಿದೆ. ಕೊಲೆಯಲ್ಲವೆಂದರೆ ಇದರ ಉತ್ತರ ನಿರೀಕ್ಷಿಸುತ್ತಿರುವುದು ರಮ್ಯಾ ಮತ್ತು ಪುನೀತ್ ಕುಟುಂಬಗಳಷ್ಟೇ ಅಲ್ಲ, ಇಡೀ ಸಮಾಜವೇ ಎದುರು ನೋಡುತ್ತಿದೆ.
ಒಟ್ಟಾರೆ ವಕೀಲೆ ಸಾವಿನ ರಹಸ್ಯ ಭೇದಿಸಲು ಪೊಲೀಸರ ಹರಸಾಹಸ ಪಡುತ್ತಿದ್ದಾರೆ. ಪ್ರಮುಖ ಆರೋಪಿ ದಿನೇಶ್ ಪತ್ತೆಗಾಗಿ ಶೋಧ ನಡೆದಿದೆ. ಇದೊಂದು ಕೊಲೆಯಾ..? ಆತ್ಮಹತ್ಯೆಯಾ..? ಶಂಕೆ ಮೂಡಿಸುತ್ತಿರುವ ವಕೀಲೆಯ ಮರಣರಹಸ್ಯ ಬಯಲಾಗಬೇಕಿದೆ.
| Reported by: ಮೂರ್ತಿ ಬೀರಯ್ಯನಪಾಳ್ಯ, ಗ್ಯಾರಂಟಿ ನ್ಯೂಸ್, ನೆಲಮಂಗಲ