• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, September 29, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಭಾರತ-ಪಾಕ್‌ ಗಡಿಯ ಕಾವಲಿಗ ಮುಧೋಳ..! ಕರುನಾಡ ಹೆಮ್ಮೆಯ ಮುಧೋಳ ಬೇಟೆ ನಾಯಿ..!

ಭವ್ಯ ಶ್ರೀವತ್ಸ by ಭವ್ಯ ಶ್ರೀವತ್ಸ
March 29, 2025 - 4:48 pm
in Flash News, ಕರ್ನಾಟಕ
0 0
0
11 (67)

ಕರ್ನಾಟಕ ಹೆಮ್ಮೆಯ ಏಕೈಕ ನಾಯಿತಳಿ ಮುಧೋಳ ಇಂದು ಜಗತ್ಪ್ರಸಿದ್ಧ ಶ್ವಾನ ತಳಿಯಾಗಿದೆ. ನಮ್ಮ ಸಂಸ್ಕೃತಿ, ನಮ್ಮ ಪರಂಪರೆಯ ಪ್ರತೀಕವಾದ ಈ ತಳಿಯ ನಾಯಿಗಳು ತಮ್ಮ ಚಾಣಾಕ್ಷ ಬೇಟೆಗಾರಿಕೆಯಿಂದಾಗಿ ವಿಶ್ವಾದ್ಯಂತ ಪ್ರಖ್ಯಾತಿ ಪಡೆಯೋ ಮೂಲಕ ನಮ್ಮ ಕರುನಾಡಿನ ಹೆಸರನ್ನು ಎತ್ತರಕ್ಕೆ ಏರಿಸಿವೆ. ಮುಧೋಳ ಹೌಂಡ್ಸ್ ಎಂದು ಕರೆಯಲ್ಪಡುವ ಈ ಬೇಟೆ ನಾಯಿಗಳು ಅತ್ಯಂತ ವೇಗವಾಗಿ ಓಡಿ, ಬೇಟೆಯಾಡುವ ತೀಕ್ಷ್ಣಬುದ್ಧಿಯನ್ನು ಹೊಂದಿವೆ. ಈ ಬೇಟೆ ನಾಯಿಗಳು ತುಂಬಾ ಸಣಕಲು ದೇಹ ಹೊಂದಿದ್ದರೂ ಒಂದು ಹುಲಿಯನ್ನು ಕೂಡ ಎದುರಿಸಿ ಸೋಲಿಸಿ ಮಲಗಿಸುವ ಶಕ್ತಿಯನ್ನು ಹೊಂದಿವೆ.

ಅತ್ಯಂತ ಕಡಿಮೆ ಆಹಾರ ಸೇವಿಸಿ, ಬಹಳ ದಿವಸ ಬದುಕುವುದರಲ್ಲಿಯೂ ಇದು ಹೆಸರುವಾಸಿಯಾಗಿದೆ. ಹೀಗಾಗಿ ಯಾವುದೇ ಹವಾಮಾನಕ್ಕೆ ಹಾಗೂ ವಾತಾವರಣಕ್ಕೆ ಮತ್ತು ಎಲ್ಲ ರೀತಿಯ ಜನರಿಗೂ ಎಲ್ಲ ತರಹದ ಕಾರ್ಯಕ್ಕೂ ಸೂಕ್ತವಾದ ನಾಯಿಯಾಗಿದೆ. ಸ್ವಾಮಿನಿಷ್ಠೆಯಲ್ಲೂ ಎತ್ತಿದ ಕೈ ಅನ್ನೋ ಕಾರಣಕ್ಕೆ ಇವುಗಳನ್ನು ಮೊಟ್ಟ ಮೊದಲ ಬಾರಿ 2017ರಲ್ಲಿ ಭಾರತೀಯ ಸೇನೆಯಲ್ಲಿ ಗಡಿಯನ್ನು ಕಾಯಲು ಬಳಸಿಕೊಳ್ಳಲು ಅವಕಾಶ ನೀಡಲಾಯಿತು. ಈ ಶ್ವಾನಗಳು ಈಗ ಭಾರತ ಮತ್ತು ಪಾಕ್​ ಗಡಿಯಲ್ಲಿ ಶತ್ರುಗಳ ಪಾಳಯದ ಎದೆ ನಡುಗಿಸುವಂತೆ ಕಾವಲು ಕಾಯುತ್ತಿವೆ.

RelatedPosts

ಕರ್ನಾಟಕದಲ್ಲಿ ವರುಣನ ಅಬ್ಬರ: 19 ಜಿಲ್ಲೆಗಳಿಗೆ ಭಾರಿ ಮಳೆ ಮುನ್ಸೂಚನೆ

ಆನೆ ದಾಳಿಗೆ ವ್ಯಕ್ತಿ ಸಾವು: ಮೃತರ ಕುಟುಂಬಕ್ಕೆ 20 ಲಕ್ಷ ರೂ.ಪರಿಹಾರ ಘೋಷಣೆ

ಮೈಸೂರು ದಸರಾ ಉದ್ಘಾಟನೆಗೆ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ

50 ಬಗೆಯ ಬಿಯರ್, ಲೈವ್ ಮ್ಯೂಸಿಕ್, ಬಗೆಬಗೆಯ ಖಾದ್ಯ: ಬೆಂಗಳೂರಿನ ‘ಬ್ರೂ ಫೆಸ್ಟಿವಲ್’ಗೆ ಯುವಜನತೆ ಫಿದಾ!

ADVERTISEMENT
ADVERTISEMENT

ತೀಕ್ಷ್ಣ ಕಣ್ಣುಗಳನ್ನು ಹೊಂದಿರೋ ಈ ನಾಯಿಗಳ ಬಾಯಿಗೆ ಒಂದು ಬಾರಿ ಬೇಟೆ ಸಿಕ್ಕಿದರೆ ಅದನ್ನು ಬಾಯಿಯಿಂದ ಬಿಡಿಸುವುದು ಸಾಧ್ಯವೇ ಇಲ್ಲ. ಮುಧೋಳ ನಾಯಿಗಳು ಮನೆಯಲ್ಲಿ, ತೋಟದಲ್ಲಿ ಇದ್ದರೆ ಯಾವ ಸೆಕ್ಯೂರಿಟಿ ಗಾರ್ಡ್​​ನ ಅವಶ್ಯಕತೆ ಇರುವುದಿಲ್ಲ. ಥೇಟ್ ಸೈನಿಕನಂತೆ ಮನೆ ಮತ್ತು ತೋಟಗಳನ್ನು ಕಾಯಬಲ್ಲ ಈ ಶ್ವಾನಗಳು ಇವು ಒಂದು ಬಾರಿ ವೈರಿಯ ಬೆನ್ನಟ್ಟಿದರೆ, ಅದನ್ನು ಮಕಾಡೆ ಮಲಗಿಸಿ ರಕ್ತ ಹೀರೋವರೆಗೂ ಹಿಂದೆ ಸರಿಯುವುದಿಲ್ಲ,

ಮುಧೋಳ ನಾಯಿ ತಳಿಯ ಇತಿಹಾಸ ಬಹಳ ಆಸಕ್ತಿದಾಯಕವಾಗಿದೆ. ಮೊಗಲರು ಭಾರತಕ್ಕೆ ಬಂದಾಗ ಯುದ್ಧದಲ್ಲಿ ಬಳಸಿಕೊಳ್ಳಲು ತಮ್ಮೊಡನೆ ಮೊಟ್ಟ ಮೊದಲನೆಯ ಬಾರಿ ಈ ನಾಯಿಗಳನ್ನು ತಂದರು ಎಂದು ಪ್ರತೀತಿ ಇದೆ. ಮುಂದೆ ಔರಂಗಜೇಬನು ದಕ್ಷಿಣ ರಾಜ್ಯಗಳನ್ನು ಆಕ್ರಮಿಸಿದಾಗ, ತನ್ನ ಅಧೀನ ರಾಜರಿಗೆ ಈ ನಾಯಿಗಳನ್ನು ಪ್ರೀತಿಯ ಕಾಣಿಕೆಯಾಗಿ ಕೊಟ್ಟಿದ್ದನೆಂದೂ ಹೇಳುತ್ತಾರೆ. ಹೀಗೆ ಕರ್ನಾಟಕಕ್ಕೆ ಬಂದ ಈ ಬೇಟೆ ನಾಯಿಗಳನ್ನು ಆಗಿನ ವಿಜಾಪೂರದ ಮುಧೋಳ ಪ್ರಾಂತ್ಯದ ರಾಜರು ಪಾಲಿಸಿ, ಪೋಷಿಸಿ, ತಳಿ ಗುಣಗಳನ್ನು ಸಂರಕ್ಷಿಸಿ, ಅಭಿವೃದ್ಧಿಪಡಿಸಿದರು. ಇವರಲ್ಲಿ ಶ್ರೀಮಂತರಾಜಾ ಮಾಲೋಜಿರಾವ ಘೋರ್ಪಡೆಯವರು ಸ್ವತಃ ಶ್ವಾನಪ್ರೇಮಿಗಳಿದ್ದು, ಈ ಬೇಟೆನಾಯಿಗಳನ್ನು ಆಸಕ್ತಿವಹಿಸಿ ಅಭಿವೃದ್ಧಿಪಡಿಸಿ ‘ಮುಧೋಳ ಬೇಟೆ ನಾಯಿ’ ಎಂದು ಪ್ರಸಿದ್ಧಿ ಪಡೆಯಲು ಕಾರಣರಾದರು ಎಂದು ಹೇಳಬಹುದು.

ಇವುಗಳ ಪ್ರಾಮಾಣಿಕತೆ ಹಾಗೂ ನಿಷ್ಠೆಯನ್ನು ಕಂಡ ಮರಾಠಾ ಸಾಮ್ರಾಜ್ಯದ ದೊರೆ ಛತ್ರಪತಿ ಶಿವಾಜಿ ಇವುಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸಾಕಿ ಅವುಗಳಿಗೆ ಸೇನೆಯ ತರಬೇತಿ ನೀಡಿ ತನ್ನ ಸೇನೆಯಲ್ಲಿ ಇಟ್ಟುಕೊಂಡಿದ್ದ ಎಂದು ಇತಿಹಾಸಗಳು ಹೇಳುತ್ತವೆ. ಮುಧೋಳ ಶ್ವಾನಗಳು ಮೊಟ್ಟ ಮೊದಲ ಬಾರಿಗೆ ಸೇನೆಯಲ್ಲಿ ಕಾರ್ಯಾಚರಣೆಗೆ ಬಳಕೆಯಾಗಿದ್ದು ಶಿವಾಜಿ ಮಹಾರಾಜರ ಸೇನೆಯಲ್ಲಿ.

ದೇಶದ ಇತರೆ ಭಾಗಗಳಲ್ಲಿ ಈ ತಳಿಗಳ ಸಂತತಿ ಕ್ಷೀಣಿಸಿದ್ದರೂ ಕರ್ನಾಟಕದ ಬಾಗಲಕೋಟೆ, ವಿಜಾಪೂರ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಮತ್ತು ಮಹಾರಾಷ್ಟ್ರದ ಕೊಲ್ಹಾಪೂರ ಮತ್ತು ಸಾಂಗ್ಲಿ ಜಿಲ್ಲೆಯ ಕೆಲವು ಶ್ವಾನಾಸಕ್ತರಲ್ಲಿ ಕಾಣಸಿಗುತ್ತವೆ. ಇತ್ತೀಚಿಗೆ ಅಂದರೆ 1994 ರಿಂದ ಈಚೆ ಬೆಂಗಳೂರಿನ ‘ಮೈಸೂರು ಕೆನೆಲ್ ಕ್ಲಬ್’, ವಿಜಾಪೂರದ ‘ವಿಜಾಪೂರ ಕೆನೆಲ್ ಕ್ಲಬ್’ ಹಾಗೂ ರಾಷ್ಟ್ರೀಯ ಸಂಸ್ಥೆಯಾದ ‘ಕೆನೆಲ್ ಕ್ಲಬ್ ಆಫ್ ಇಂಡಿಯಾ’ದವರ ಸತತ ಪ್ರಯತ್ನದಿಂದ ಅಂತರ್ ರಾಷ್ತ್ರೀಯ ಮಾನ್ಯತೆಯನ್ನು ಪಡೆದಿದೆ.

ವಿಜಯಪುರ ಜಿಲ್ಲಾ ಪಂಚಾಯತ್, ಬಾಗಲಕೋಟೆ ಜಿಲ್ಲಾ ಪಂಚಾಯತ್ ಮತ್ತು ಕರ್ನಾಟಕ ಸರಕಾರದ ಪಶು ಸಂಗೋಪನೆ ಇಲಾಖೆಯ ನಿರಂತರ ಪ್ರೋತ್ಸಾಹದಿಂದ ಮತ್ತು ಜನಪ್ರತಿನಿಧಿಗಳ ಆಸಕ್ತಿಯಿಂದ ಇವತ್ತು ರಾಜ್ಯದ ಹೆಮ್ಮೆಯ ತಳಿಯಾಗಿದೆ. ಸದ್ಯ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ತಿಮ್ಮಾಪುರದಲ್ಲಿ ಈ ಮುಧೋಳ ನಾಯಿಗಳ ಸಂತಾನಭಿವೃದ್ಧಿಗಾಗಿಯೇ ಮುಧೋಳ ಬೇಟೆನಾಯಿ ತಳಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗಿದೆ.

ShareSendShareTweetShare
ಭವ್ಯ ಶ್ರೀವತ್ಸ

ಭವ್ಯ ಶ್ರೀವತ್ಸ

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕರೆಂಟ್ ಅಫೇರ್ಸ್ ವಿಭಾಗದಲ್ಲಿ ಸೀನಿಯರ್ ಪ್ರೋಗ್ರಾಂ ಪ್ರೊಡ್ಯೂಸರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ವಿವಿಧ ಸುದ್ದಿ ವಾಹಿನಿಗಳಲ್ಲಿ ಹಲವು ಹುದ್ದೆಗಳಲ್ಲಿ 12 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ಆಧ್ಯಾತ್ಮ, ರಾಜಕೀಯ, ಸಾಹಿತ್ಯ ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ಆಧ್ಯಾತ್ಮ, ಜ್ಯೋತಿಷ್ಯ, ಹಸ್ತ ಸಾಮುದ್ರಿಕೆ ಬರಹ, ಸ್ತ್ರೀ ಪರ ನಿಲುವಿನ ಸಂವೇದನಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕಾಡು ಸುತ್ತಾಟ, ಪ್ರವಾಸ, ಕತೆ - ಕಾದಂಬರಿ ಓದುವುದು ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text (37)

ಏಷ್ಯನ್ ಗೇಮ್ಸ್ 2026: ಭಾರತ-ಪಾಕ್‌ ಸೇರಿ 4 ತಂಡ ಸೆಮಿಫೈನಲ್‌ಗೆ

by ದಿಶಾ ಕೆ. ಎಸ್.
September 29, 2026 - 10:40 am
0

Your paragraph text (36)

ಕರ್ನಾಟಕದಲ್ಲಿ ವರುಣನ ಅಬ್ಬರ: 19 ಜಿಲ್ಲೆಗಳಿಗೆ ಭಾರಿ ಮಳೆ ಮುನ್ಸೂಚನೆ

by ದಿಶಾ ಕೆ. ಎಸ್.
September 29, 2026 - 10:29 am
0

Your paragraph text (35)

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ; ಒಂದೇ ದಿನ 4 ಪದಕಗಳ ಬೇಟೆ!

by ದಿಶಾ ಕೆ. ಎಸ್.
September 28, 2026 - 6:55 pm
0

Your paragraph text (34)

ದರ್ಶನ್- ಪ್ರದೋಶ್ ಮುಖಾಮುಖಿ: ಕೋರ್ಟ್‌‌ನಲ್ಲಿ ಏನಾಯ್ತು.? ಲಾಕ್ ಆಗೇಬಿಟ್ರಾ ಡಿಬಾಸ್ ದಚ್ಚು?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 28, 2026 - 5:53 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (70)
    ಹಾವೇರಿ ಜಿಲ್ಲಾಸ್ಪತ್ರೆ ಕ್ಯಾಂಟೀನ್‌ನ ಉಪಹಾರದಲ್ಲಿ ಹಲ್ಲಿ ಪತ್ತೆ.!
    September 27, 2026 | 0
  • Your paragraph text (65)
    ದಕ್ಷಿಣ ಆಫ್ರಿಕಾದ ಬಾರ್‌ನಲ್ಲಿ ಭೀಕರ ಗುಂಡಿನ ದಾಳಿ; 17 ಮಂದಿ ಬಲಿ, 15 ಜನರಿಗೆ ಗಾಯ
    September 27, 2026 | 0
  • Your paragraph text (64)
    ರೋಗಿಗಳ ಬಳಿ ಔಷಧ ಹೆಸರಲ್ಲಿ ಕೋಟ್ಯಂತರ ರೂ. ಸುಲಿಗೆ: 254 ಕಂಪನಿಗಳ ಅಕ್ರಮ ಬಯಲು
    September 27, 2026 | 0
  • Your paragraph text (60)
    ಮನೆಯೆದುರು ಮೂತ್ರ ವಿಸರ್ಜನೆ ಮಾಡಿ ಡೆಲಿವರಿ ಬಾಯ್‌‌ ಅಸಭ್ಯ ವರ್ತನೆ: ಸಿಸಿಟಿವಿಯಲ್ಲಿ ಕೃತ್ಯ ಸೆರೆ
    September 27, 2026 | 0
  • Untitled design 2026 09 27T123440.440
    ‘ಕನ್ನಡದ ಶಿವಮಣಿ’ ಎಂದೇ ಖ್ಯಾತರಾಗಿದ್ದ ಡ್ರಮ್ಮರ್ ದೇವ್ ಇನ್ನಿಲ್ಲ
    September 27, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version