ಸಿಲಿಕಾನ್ ಸಿಟಿ ಮಂದಿಗೆ ಬೆಲೆ ಏರಿಕೆಯಿಂದ ಸದ್ಯ ರಿಲೀಪ್ ಸಿಕ್ಕಿದೆ. ದಿನನಿತ್ಯ ಬಳಕೆಯ ವಸ್ತುಗಳ ಬೆಳೆಗಳಲ್ಲಿ ಸಾಕಷ್ಟು ಇಳಿಕೆ ಕಂಡಿದೆ. ಹಾಗಿದ್ರೆ ಯಾವ ವಸ್ತುಗಳಲ್ಲಿ ಇಳಿಕೆ ಆಗಿದೆ ಅಂತಿರಾ ಇಲ್ಲಿದೆ.
ಪದೇ ಪದೇ ಬೆಲೆ ಏರಿಕೆಯನ್ನೇ ನೋಡ್ತಿದ್ದ ಗ್ರಾಹಕರಿಗೆ ಈಗ ಬಿಗ್ ರೀಲಿಪ್ ಸಿಕ್ಕಿದೆ. ಹೌದು ಸಿರಿಧಾನ್ಯ ಹಾಗೂ ಅಕ್ಕಿಯ ಬೆಲೆಯಲ್ಲಿ ಭಾರಿ ಇಳಿಕೆ ಕಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸ್ಟಾಕ್ ಗಳ ಶೇಖರಣೆ ಹೆಚ್ಚಾಗಿದ್ದು, ಇದರಿಂದ ಬೆಳೆಗಳ ಬೆಲೆ ಪಾತಾಳದತ್ತ ಮುಖ ಮಾಡಿದೆ.
ಇನ್ನೂ ಈ ಬಾರಿ ಹೊಸ ತಳಿಯ ಅಕ್ಕಿಗಳು ಮಾರುಕಟ್ಟೆಗೆ ಬಂದಿದ್ದು, ಅವುಗಳಲ್ಲಿ ಗುಣಮಟ್ಟದ ಕೊರತೆ ಇದ್ದು, ಹಾಗೂ ಅವುಗಳ ರಫ್ತಿನಗೆ ಅರ್ಹವಲ್ಲದ ಕಾರಣ ಮಾರುಕಟ್ಟೆಯಲ್ಲಿಯೂ ಕಡಿಮೆ ಬೆಲೆ ಮಾರಾಟಕ್ಕೆ ದೊರೆಯುತ್ತಿದೆ ಹಾಗೂ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಸಿರಿಧಾನ್ಯಗಳಲ್ಲಿ 30 ರಿಂದ 40ರೂ ಗಳ ವರೆಗೆ ಇಳಿಕೆ ಕಂಡಿದೆ.
ಪ್ರತಿನಿತ್ಯ ಬಳಸುವ ಅಡುಗೆ ಪದಾರ್ಥಗಳ ಬೆಲೆಯಲ್ಲಿ ಇಳಿಕೆ ಕಂಡಿದ್ದು, ಇದು ಗ್ರಾಹಕರಿಗೆ ಸಂತೋಷಕರ ವಿಚಾರವಾಗಿದೆ.