ಮೈಸೂರು: ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಕಳೆದ ಕೆಲವು ದಿನಗಳ ಹಿಂದೆ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯ ಭವಿಷ್ಯವನ್ನು ನುಡಿದಿದ್ದರು. ಇದೀಗ, ಇಂದು ಮತ್ತೊಂದು ಸ್ಪೋಟಕವಾದ ಭವಿಷ್ಯವನ್ನು ಹೇಳಿದ್ದಾರೆ. ಈ ಭವಿಷ್ಯವು ಭಾರತದಾದ್ಯಂತ ಭಾರೀ ಸಂಚಲನವನ್ನು ಮೂಡಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿಯವರು, “ಅರಸನ ಅರಮನೆಗೆ ಕಾರ್ಮೋಡ ಕವಿಯಲಿದೆ, ಜಗತ್ತೇ ತಿರುಗಿನೋಡುವಂತಹ ಆಘಾತಕಾರಿ ಘಟನೆ ಭಾರತಕ್ಕೆ ಕಾದಿದೆ” ಎಂದು ಹೇಳಿದ್ದಾರೆ.
ಆದರೆ, ಈ ಆಘಾತಕಾರಿ ಘಟನೆಗೆ ಪರಿಹಾರವಿದೆ ಎಂದು ಸ್ವಾಮೀಜಿಯವರು ತಿಳಿಸಿದ್ದಾರೆ. ಸೂಕ್ತ ಕ್ರಮಗಳನ್ನು ಕೈಗೊಂಡರೆ ಈ ಆಪತ್ತನ್ನು ತಪ್ಪಿಸಬಹುದು ಎಂಬ ಹೇಳಿದ್ದಾರೆ. ಈ ಭವಿಷ್ಯವು ಜನರಲ್ಲಿ ಕುತೂಹಲವನ್ನು ಮೂಡಿಸಿದ್ದು, ದೇಶದ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಯುಗಾದಿ ನಂತರ ಮಳೆ, ಬೆಳೆಯ ಭವಿಷ್ಯ
ಸ್ವಾಮೀಜಿಯವರು ತಮ್ಮ ಭವಿಷ್ಯದಲ್ಲಿ ಯುಗಾದಿಯ ನಂತರ ಮಳೆ ಮತ್ತು ಬೆಳೆಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳು ಆಗಲಿವೆ ಎಂದು ತಿಳಿಸಿದ್ದಾರೆ. “ಯುಗಾದಿಯ ನಂತರ ಮಳೆಯ ಪರಿಸ್ಥಿತಿಯಿಂದ ರಾಜ್ಯದ ಕೃಷಿ ವಲಯದಲ್ಲಿ ಬದಲಾವಣೆಗಳು ಕಂಡುಬರಲಿವೆ. ರೈತರಿಗೆ ಈ ವರ್ಷದ ಬೆಳೆ ಉತ್ಪಾದನೆಯ ಫಲಿತಾಂಶವು ಸಂಕ್ರಾಂತಿಯ ವೇಳೆಗೆ ಸ್ಪಷ್ಟವಾಗಲಿದೆ” ಎಂದು ಅವರು ಹೇಳಿದ್ದಾರೆ. ಈ ಹೇಳಿಕೆಯು ಕೃಷಿಕರಲ್ಲಿ ಆಶಾಭಾವನೆಯನ್ನು ಮೂಡಿಸಿದೆ, ಆದರೆ ಸಂಕ್ರಾಂತಿಯವರೆಗೆ ಕಾಯ್ದು ನೋಡಬೇಕಾಗಿದೆ ಎಂಬ ಸಂದೇಶವನ್ನು ನೀಡಿದ್ದಾರೆ.
ಸ್ವಾಮೀಜಿಯವರು ಸಂಕ್ರಾಂತಿಯ ಸಂದರ್ಭದಲ್ಲಿ ರಾಜ್ಯದ ರಾಜಕೀಯ ಮತ್ತು ವ್ಯಾಪಾರ ವಲಯದಲ್ಲಿ ದೊಡ್ಡ ಬದಲಾವಣೆಗಳು ಕಂಡುಬರಲಿವೆ ಎಂದು ಭವಿಷ್ಯ ನುಡಿದಿದ್ದಾರೆ.