ಕರ್ನಾಟಕದಾದ್ಯಂತ ಒಣಹವೆ ಮುಂದುವರಿಯಲಿದ್ದು, ಕೆಲವೇ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಕಲಬುರಗಿ, ವಿಜಯಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ತುಮಕೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.
ಒಣಹವೆ ಮುಂದುವರಿದ ಜಿಲ್ಲೆಗಳು
ವಿಜಯನಗರ, ಶಿವಮೊಗ್ಗ, ರಾಮನಗರ, ಕೋಲಾರ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ರಾಯಚೂರು, ಕೊಪ್ಪಳ, ಹಾವೇರಿ, ಬೀದರ್ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿದಿದೆ. ಕಲಬುರಗಿಯಲ್ಲಿ 42.6 ಡಿಗ್ರಿ ಸೆಲ್ಸಿಯಸ್‌ನ ರಾಜ್ಯದ ಅತ್ಯಂತ ಗರಿಷ್ಠ ಉಷ್ಣಾಂಶ ದಾಖಲಾಗಿದೆ.
ಕೆಲವು ಪ್ರದೇಶಗಳಲ್ಲಿ ಮಳೆ
ಖಜೂರಿ, ಜೋಯಿಡಾ, ಕ್ಯಾಸಲ್‌ರಾಕ್‌ನಂತಹ ಕೆಲವು ಪ್ರದೇಶಗಳಲ್ಲಿ ಈಗಾಗಲೇ ಮಳೆಯಾಗಿದೆ. ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಮತ್ತು ಉತ್ತರ ಒಳನಾಡಿನ ಕೆಲವೆಡೆ ಇಂದು (ಏಪ್ರಿಲ್ 24) ಮಳೆಯಾಗುವ ನಿರೀಕ್ಷೆಯಿದೆ.
ಪ್ರಮುಖ ಸ್ಥಳಗಳ ಉಷ್ಣಾಂಶ ವಿವರ
-
ಬೆಂಗಳೂರು:
-
ಎಚ್‌ಎಎಲ್: 34.6°C (ಗರಿಷ್ಠ), 21.5°C (ಕನಿಷ್ಠ)
-
ನಗರ: 34.4°C (ಗರಿಷ್ಠ), 23.9°C (ಕನಿಷ್ಠ)
-
ಕೆಐಎಎಲ್: 34.3°C (ಗರಿಷ್ಠ), 23.6°C (ಕನಿಷ್ಠ)
-
ಜಿಕೆವಿಕೆ: 34.2°C (ಗರಿಷ್ಠ), 21.2°C (ಕನಿಷ್ಠ)
-
-
ಕರಾವಳಿ ಜಿಲ್ಲೆಗಳು:
-
ಹೊನ್ನಾವರ: 34.6°C (ಗರಿಷ್ಠ), 26.8°C (ಕನಿಷ್ಠ)
-
ಕಾರವಾರ: 37.2°C (ಗರಿಷ್ಠ), 26.8°C (ಕನಿಷ್ಠ)
-
ಪಣಂಬೂರು: 34.4°C (ಗರಿಷ್ಠ), 24.8°C (ಕನಿಷ್ಠ)
-
-
ಒಳನಾಡಿನ ಜಿಲ್ಲೆಗಳು:
-
ಬೆಳಗಾವಿ ಏರ್‌ಪೋರ್ಟ್: 36.4°C (ಗರಿಷ್ಠ), 21.4°C (ಕನಿಷ್ಠ)
-
ಬೀದರ್: 41.2°C (ಗರಿಷ್ಠ), 25.5°C (ಕನಿಷ್ಠ)
-
ವಿಜಯಪುರ: 37.8°C (ಗರಿಷ್ಠ), 23.0°C (ಕನಿಷ್ಠ)
-
ಬಾಗಲಕೋಟೆ: 37.6°C (ಗರಿಷ್ಠ), 23.6°C (ಕನಿಷ್ಠ)
-
ಧಾರವಾಡ: 35.4°C (ಗರಿಷ್ಠ), 20.6°C (ಕನಿಷ್ಠ)
-
ಗದಗ: 37.5°C (ಗರಿಷ್ಠ), 22.8°C (ಕನಿಷ್ಠ)
-
ಕಲಬುರಗಿ: 42.6°C (ಗರಿಷ್ಠ), 28.4°C (ಕನಿಷ್ಠ)
-
ಹಾವೇರಿ: 36.0°C (ಗರಿಷ್ಠ), 22.8°C (ಕನಿಷ್ಠ)
-
ಕೊಪ್ಪಳ: 38.1°C (ಗರಿಷ್ಠ), 25.5°C (ಕನಿಷ್ಠ)
-
ರಾಯಚೂರು: 40.6°C (ಗರಿಷ್ಠ), 25.8°C (ಕನಿಷ್ಠ)
-
ಮುನ್ಸೂಚನೆ
ಕರಾವಳಿ ಜಿಲ್ಲೆಗಳಲ್ಲಿ ಗರಿಷ್ಠ ಮಳೆಯಾಗುವ ಸಾಧ್ಯತೆಯಿದ್ದು, ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಆದರೆ, ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಯಲಿದ್ದು, ರೈತರು ಮತ್ತು ಸಾರ್ವಜನಿಕರು ಹವಾಮಾನದ ಏರಿಳಿತಗಳಿಗೆ ಸಿದ್ಧರಿರಬೇಕೆಂದು ಇಲಾಖೆ ಸೂಚಿಸಿದೆ.