ಬೆಂಗಳೂರು: ಕರ್ನಾಟಕದ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರ ವಿಶೇಷ ಕರ್ತವ್ಯ ಅಧಿಕಾರಿ (OSD) ಮತ್ತು ಕೆಪಿಟಿಸಿಎಲ್‌ನ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿರುವಜ್ಯೋತಿ ಪ್ರಕಾಶ್ (50)ಅವರನ್ನು ಶನಿವಾರ ಸಂಜೆ ಲಂಚ ಪಡೆಯುತ್ತಿರುವ ವೇಳೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಜ್ಯೋತಿ ಪ್ರಕಾಶ್ ಅವರ ಕಾರು ಚಾಲಕನವೀನ್ ಎಂ (34)ಅವರನ್ನೂ ಸಹ ಬಂಧಿಸಲಾಗಿದೆ.
ಜ್ಯೋತಿಪ್ರಕಾಶ್, ಕಾಮಗಾರಿಯೊಂದಕ್ಕೆ ಎನ್‌ಒಸಿ (ನಿರಾಕ್ಷೇಪಣಾ ಪತ್ರ) ನೀಡಲು ಒಂದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಶನಿವಾರ ಸಂಜೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಲೋಕಾಯುಕ್ತ ಪೊಲೀಸರಿಂದ ಬಿಡುಗಡೆಯಾದ ಹೇಳಿಕೆಯ ಪ್ರಕಾರ, ಜ್ಯೋತಿಪ್ರಕಾಶ್ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಕೆಪಿಟಿಸಿಎಲ್‌ಗೆ ಸಂಬಂಧಿಸಿದ ಕಾಮಗಾರಿಯೊಂದಕ್ಕೆ ಎನ್‌ಒಸಿ ನೀಡುವ ಬದಲಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಒಂದು ಲಕ್ಷ ರೂಪಾಯಿಯ ಮುಂಗಡ ಹಣವನ್ನು ಸ್ವೀಕರಿಸುವ ವೇಳೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಜ್ಯೋತಿಪ್ರಕಾಶ್ ಮತ್ತು ಅವರ ಕಾರ್ ಚಾಲಕ ನವೀನ್‌ರನ್ನು ಬಂಧಿಸಿದ್ದಾರೆ. ಈ ಪ್ರಕರಣವನ್ನು ಭ್ರಷ್ಟಾಚಾರ ತಡೆ ಕಾಯ್ದೆಯಡಿ ದಾಖಲಿಸಿಕೊಂಡಿರುವ ಲೋಕಾಯುಕ್ತ, ತನಿಖೆಯನ್ನು ಮುಂದುವರೆಸಿದೆ.