ಮಾದಿಗ ಸಮುದಾಯದ ಮೂಲ ಮಠವಾದ ಶ್ರೀ ಆದಿಜಾಂಬವ ಬೃಹ್ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಷಡಕ್ಷರಿ ಮುನಿದೇಶಿ ಕೇಂದ್ರ ಸ್ವಾಮೀಜಿ ಹಾಗೂ ರಾಜ್ಯ ಮಾತಂಗ ಜಾಗೃತಿ ಸಮಿತಿಯ ಗೌರವಾಧ್ಯಕ್ಷ ಆರ್.ಲೋಕೇಶ್ ಅವರ ನೇತೃತ್ವದ ನಿಯೋಗವಿಂದು
ಮಾನ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸಚಿವರಾದ ಕೆಹೆಚ್. ಮುನಿಯಪ್ಪ ರವರ ನಿವಾಸದಲ್ಲಿ ಬೇಟಿ ಮಾಡಿ ಒಳ ಮೀಸಲಾತಿ ಜಾರಿಯ ಕುರಿತಾಗಿ ಚರ್ಚಿಸಿದರು.
ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಹಾಗೂ ಹಾಗೂ ಅತಿದೊಡ್ಡ ಸಂಖ್ಯೆಯಲ್ಲಿ ಇರುವ ಆದಿ ಕರ್ನಾಟಕ/ ಆದಿ ದ್ರಾವಿಡ ಜಾತಿ ಪ್ರಮಾಣ ಪತ್ರ ಹೊಂದಿರುವವರಿಗೆ ನಿರ್ದಿಷ್ಟ ಜಾತಿಯ ಪ್ರಮಾಣ ಪತ್ರವನ್ನು ಹೊಂದಲು ತಕ್ಷಣ ಕ್ರಮ ಕೈಗೊಳ್ಳುವ ಕುರಿತು ಒತ್ತಾಯ ಮಾಡಿದರು.
ಇದೇ ಸಮಯದಲ್ಲಿ ಸಚಿವರು ಕಳೆದ ಒಂದು ವಾರದಿಂದ ಮುಖ್ಯ ಮಂತ್ರಿಗಳು ಹಾಗೂ ಸರ್ಕಾರ ಒಳ ಮೀಸಲಾತಿಯನ್ನು ಅನುಷ್ಠಾನ ಮಾಡುವ ಕುರಿತ ಬದ್ಧತೆಯ ಬಗ್ಗೆ ಹಾಗೂ ಯಾವೆಲ್ಲ ರೀತಿಯಲ್ಲಿ ಸುಪ್ರೀಂ ಕೋರ್ಟ್ ನ ಸೂಚನೆಯ ಮೇರೆಗೆ ಸಿದ್ದತೆಗಳು ನಡೆಸಲಾಗುತ್ತಿದೆ ಎಂಬುದನ್ನು ಸವಿವರವಾಗಿ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಜಾತಿಯ ಎಲ್ಲಾ ಶಾಸಕರು ಒಳ ಮೀಸಲಾತಿ ಅನುಷ್ಠಾನದ ಸಹಮತಕ್ಕೆ ಬರಲಾಗಿದ್ದು ವೈಜ್ಞಾನಿಕ ಹಾಗೂ ಸಾಮಾಜಿಕ ನ್ಯಾಯವನ್ನು ಎಲ್ಲಾ ಸಮುದಾಯಗಳು ಹೊಂದುವಂತೆ ಸರ್ಕಾರ ಮೀಸಲಾತಿ ಹಂಚಿಕೆ ಮಾಡಲು ಸಿದ್ಧತೆ ಮಾಡಲಾಗುತ್ತಿದೆ
ಒಳಮೀಸಲಾತಿಯನ್ನು ಕರ್ನಾಟಕ ರಾಜ್ಯದಲ್ಲಿ ಜಾರಿಗೆ ತರುವುದಕ್ಕೆ ರಾಜ್ಯ ಸರಕಾರ ಬದ್ಧವಾಗಿದ್ದು ಈಗ ನೆರೆಯ ರಾಜ್ಯಗಳಾದ ತೆಲಂಗಾಣ, ಆಂಧ್ರ ಪ್ರದೇಶ್ ಹಾಗೂ ಉತ್ತರದ ಹರಿಯಾಣ ರಾಜ್ಯಗಳಲ್ಲಿ ಒಳ ಮೀಸಲಾತಿಯ ಅನುಷ್ಠಾನದ ನಿರ್ಣಯಕ್ಕೆ ಬರಲು ಸಾಧ್ಯವಾಗಲು ಮೂಲ ಕಾರಣ ಹಿಂದೆ ಈ ರಾಜ್ಯಗಳಲ್ಲಿ ಮೀಸಲಾತಿ ವರ್ಗೀಕರಣ ಜಾರಿಯಲ್ಲಿತ್ತು.
ಕರ್ನಾಟಕದಲ್ಲಿ ಈ ಕುರಿತು ಸದಾಶಿವ ಆಯೋಗದ ವರದಿ , ಮಾಧುಸ್ವಾಮೀ ಸಮಿತಿಯ ಶಿಫಾರಸ್ಸು ಇದ್ದವು ಅದೆಲ್ಲವೂ ಆಗಸ್ಟ್1, 2024ರ ಸುಪ್ರೀಂ ಕೋರ್ಟ್ ನ ತೀರ್ಪು ಬಂದ ನಂತರ ಕೋರ್ಟ್ ಸೂಚನೆಗಳನ್ನು ಆಯಾ ರಾಜ್ಯಗಳ ಸರ್ಕಾರಗಳು ಪಾಲಿಸಲೇ ಬೇಕಿದೆ ಸದಾಶಿವ ಆಯೋಗದ ವರದಿಯಲ್ಲಿ ಸುಮಾರು ಎಂಟು ಲಕ್ಷ ಪರಿಶಿಷ್ಟರ ಜಾತಿಯ ಮೂಲವನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಹಾಗೂ ಅದಕ್ಕಿಂತ ಮುಖ್ಯವಾಗಿ ಜಾತಿಯ ಗುಂಪುಗಳಾಗಿರುವ ಆದಿ ಕರ್ನಾಟಕ, ಆದಿ ದ್ರಾವಿಡ ಹಾಗೂ ಆದಿ ಆಂಧ್ರ ಹೆಸರಿನಲ್ಲಿ 36 ಲಕ್ಷಕ್ಕೂ ಅಧಿಕ ಮಂದಿ ಗುರುತಿಸಿಕೊಂಡಿರುವುದು ಅತ್ಯಂತ ಗೊಂದಲಕ್ಕೆ ಕಾರಣವಾಗಿದೆ ಇದು ಮುಂದೆ ಬಹಳ ದೊಡ್ಡ ಸಮಸ್ಯೆ ಆಗಿ ಜಾತಿ ಜಾತಿಗಳ ಮಧ್ಯೆ ವೈಷಮ್ಯಕ್ಕೆ ಕಾರಣವಾಗುವುದರಿಂದ ಇದನ್ನು ಬಗೆಹರಿಸಲೇಬೇಕು ಎಂದು ಸಚಿವರಿಗೆ ಒತ್ತಾಯಿಸಿದರು.
ಈ ವಿಷಯದಲ್ಲಿ ನ್ಯಾ.ನಾಗಮೋಹನದಾಸ್ ಆಯೋಗಕ್ಕೂ ಕೂಡ ದೊಡ್ಡ ತಲೆ ನೋವಿನ ವಿಚಾರವಾಗಿರುವುದರಿಂದ AK, AD ಹಾಗೂ AA ಗುಂಪುಗಳಲ್ಲಿರುವ ಜಾತಿಗಳು ತಮ್ಮ ತಮ್ಮ ಮೂಲ ಉಪ ಜಾತಿಗಳ ಹೆಸರಿನಲ್ಲೇ ಜಾತಿ ಪ್ರಮಾಣ ಪತ್ರ ಪಡೆಯುವಂತೆ ಮಾಡಲು ಕಾನೂನು ಸಲಹೆ ಪಡೆಯಲಾಗಿದೆ
ಈ ವಾರಾಂತ್ಯದಲ್ಲಿ ಈ ಕುರಿತು ನ್ಯಾ .ನಾಗಮೋಹನದಾಸ್ ಆಯೋಗದ ಮಧ್ಯಂತರ ವರದಿಯ ಆಧಾರದ ಮೇಲೆ ಅತಿ ಶೀಘ್ರವಾಗಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮಾ.ನ.ಗುರುದತ್, ಉಪಾಧ್ಯಕ್ಷ ಬಾಲಪ್ಪ, ವೀರಾಂಜನಪ್ಪ, ಪ್ರಧಾನ ಕಾರ್ಯದರ್ಶಿ ಕರಗಪ್ಪ, ಖಜಾಂಚಿ ದೇವರಾಜ್, ಸಂಘಟನಾ ಕಾರ್ಯದರ್ಶಿ ಜಯರಾಂ , ಆರ್.ಟಿ.ಒ.ವೆಂಕಟೇಶ್ ಹಾಗೂ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.