ಹನಿಟ್ರ್ಯಾಪ್ ಈ ಹನಿ ಹನಿ ಕಹಾನಿ ಇದೀಗ ಕರ್ನಾಟಕ ಅಷ್ಠೇ ಅಲ್ಲ ರಾಷ್ಟ್ರ ರಾಜಧಾನಿಗೂ ತಲುಪಿದೆ. ಬಜೆಟ್ ಅಧಿವೇಶನದಲ್ಲಿ ಪ್ರಸ್ತಾಪವಾದ ಹನಿ ನ್ಯೂಸ್ ಸಂಸತ್‌ನಲ್ಲೂ ಸದ್ದು ಮಾಡಿದೆ. ಸಚಿವರಿಗೆ ಹನಿಟ್ರ್ಯಾಪ್ ಮಾಡಿದ ವಿಚಾರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗ್ತಿದ್ದಂತೆ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ಎಚ್ಚೇತ್ತುಕೊಂಡಿದೆ. ಸದನದಲ್ಲಿ ಹನಿಟ್ರ್ಯಾಪ್ ಮ್ಯಾಟರ್ ಚರ್ಚೆಯಾಗುತ್ತಿದ್ದಂತೆ ಹೈಕಮಾಂಡ್ ನಾಯಕರು ರಾಜ್ಯ ನಾಯಕರಿಗೆ ಕಾಲ್ ಮಾಡಿ ವಿವರಣೆ ಪಡೆದಿದ್ದಾರೆ.
ಸಚಿವ ಕೆ ಎನ್ ರಾಜಣ್ಣ ಹಾಗೂ ರಾಜಣ್ಣ ಪುತ್ರ ರಾಜೇಂದ್ರ ವಿರುದ್ದ ಹನಿಟ್ರ್ಯಾಪ್‌ಗೆ ಯತ್ನಿಸಿದ ಘಟನೆ ಈಗ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡ್ತಿದೆ. ಬಜೆಟ್ ಅಧಿವೇಶನದಲ್ಲಿ ಬಯಲಿಗೆ ಬಂದ ಹನಿಟ್ರ್ಯಾಪ್ ವಿಚಾರ ಶಾಸಕರ ಅಮಾನತಿನವರೆಗೂ ಸದ್ದು ಮಾಡಿ ಸದನದ ಕಲಾಪವನ್ನು ಬಲಿ ಪಡೆದಿದೆ. ಆದ್ರೆ ಸಚಿವ ರಾಜಣ್ಣಗೆ ಹನಿಟ್ರ್ಯಾಪ್ ಮಾಡಿದ ವಿಚಾರವನ್ನು ಬಿಜೆಪಿ ಅಸ್ತ್ರವಾಗಿ ಮಾಡಿಕೊಂಡಿದಕ್ಕೆ ಕಾಂಗ್ರೆಸ್ ಹೈಕಮಾಂಡ್ ಕೆಂಡಾಮಂಡಲವಾಗಿದೆ. ಸಚಿವರ ಪುತ್ರನಿಗೆ ಹನಿಟ್ರ್ಯಾಪ್‌ಗೆ ಯತ್ನಿಸಿದ ಪ್ರಕರಣವನ್ನು ಸರಳವಾಗಿ ಪರಿಗಣಿಸಿದಕ್ಕೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರ ಮೇಲೆ ಅಸಮಾಧಾನಗೊಳ್ಳುವಂತೆ ಮಾಡಿದೆ.
ಸಚಿವ ರಾಜಣ್ಣ ಮೇಲೆ ಹನಿಟ್ರ್ಯಾಪ್‌ಗೆ ಯತ್ನಿಸಿದ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತರದಿರುವುದಕ್ಕೆ ಎಐಸಿಸಿ ನಾಯಕರ ಸಿಟ್ಟಿಗೆ ಕಾರಣವಾಗಿದೆ. ಸದನದಲ್ಲಿ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪಕ್ಕೆ ಹೈಕಮಾಂಡ್ ಗರಂ ಆಗಿದ್ದು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಪೋನ್ ಮಾಡಿ ಕ್ಲಾಸ್ ತಗೆದುಕೊಂಡಿದ್ದಾರೆ.
ಸಿಎಂ ಆಗಿ ನೀವೂ ಸಚಿವರಿಗೆ ಸದನದಲ್ಲಿ ಹೇಗೆ ಈ ವಿಚಾರ ಮಾತನಾಡಲು ಬಿಟ್ರೀ? ಪ್ರಕರಣ ಗಂಬೀರವಾಗಿದ್ರೆ ಯಾಕೆ ಕೂಡಲೇ ತನಿಖೆಗೆ ಮಾಡಲಿಲ್ಲ. ನೀವೂ ಯಾಕೆ ಕೂಡಲೇ ಅಧಿಕೃತವಾಗಿ ತನಿಖೆಗೆ ಆದೇಶಿಸಲಿಲ್ಲ. ರಾಜಣ್ಣ ಹೇಳಿಕೆಯಿಂದ ಪಕ್ಷ ಹಾಗೂ ಸರ್ಕಾರಕ್ಕೆ ಡ್ಯಾಮೇಜ್ ಆಗಿದ್ದು, ಸಚಿವರೇ ಒಪ್ಪಿಕೊಂಡು ಬಿಜೆಪಿಗೆ ಅಸ್ತ್ರ ಮಾಡಿಕೊಟ್ಟಿದ್ಯಾಕೆ? ಎಂದು ವೇಣುಗೋಪಾಲ್ ಸಿಟ್ಟುನ್ನು ಹೊರಹಾಕಿದ್ದಾರೆ. ಎಐಸಿಸಿ ಕಾರ್ಯದರ್ಶೀ ವೇಣುಗೋಪಾಲ್ ಕಾಲ್ ಬೆನ್ನಲ್ಲೆ ಇದೀಗ ರಾಜಣ್ಣ ಪುತ್ರ ರಾಜೇಂದ್ರ ಸಿಎಂ ಭೇಟಿಗೆ ಮುಂದಾಗಿದ್ದು, ಸಿಎಂ ದೂರು ನೀಡುವುದಾಗಿ ತಿಳಿಸಿದ್ದಾರೆ.
ರಾಜಣ್ಣ ಹಾಗು ರಾಜಣ್ಣ ಪುತ್ರ ರಾಜೇಂದ್ರ ವಿರುದ್ದ ಹನಿಟ್ರ್ಯಾಪ ವಿಚಾರವಾಗಿ ಇದೂವರೆಗೂ ದೂರು ದಾಖಲಾಗಿಲ್ಲ. ಹೀಗಾಗಿ ಬಿಜೆಪಿ ನಾಯಕರು ರಾಜ್ಯ ಸೇರಿದಂತೆ ರಾಷ್ಟ್ರಮಟ್ಟದಲ್ಲಿ ಹೋರಾಟದ ಅಸ್ತ್ರವಾಗಿ ಮಾಡಿಕೊಂಡು ಸಿಬಿಐ ತನಿಖೆಗೆ ಆಗ್ರಹಿಸುತ್ತಿರುವುದು ಕಾಂಗ್ರೆಸ್ ಹೈಕಮಾಂಡನ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗೇ ಕಾಂಗ್ರೆಸ್ ಹೈಕಮಾಂಡ್ ಇದೀಗ ಪಕ್ಷಕ್ಕೆ ಆಗುತ್ತಿರುವ ಡ್ಯಾಮೇಂಜ್ ಕಂಟ್ರೋಲ್ ಮಾಡಲು ಸಿಎಂ- ಡಿಸಿಎಂ ಜೊತೆ ನಿರಂತರವಾಗಿ ಚರ್ಚೆ ನಡೆಸುತ್ತಿರುವುದು ಮಾತ್ರ ಸುಳ್ಳಲ್ಲ.