ಕರ್ನಾಟಕದ ರಾಜಕೀಯದಲ್ಲಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ಒಂದು ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. 2023ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 24 ಜನರನ್ನು ಕೊಂದಿದ್ದಾರೆಂದು ಆರೋಪಿಸಿದ್ದರು. ಈ ಹೇಳಿಕೆಗೆ ಮಹೇಶ್ ತಿಮರೋಡಿ ಗ್ಯಾರಂಟಿ ನ್ಯೂಸ್ ಜೊತೆ ಮಾತನಾಡಿದ್ದು, ಬಿಜೆಪಿ ನಾಯಕ ಹರೀಶ್ ಪೂಂಜಾ 2023ರ ಮೇ 24ರಂದು ಬೆಳ್ತಂಗಡಿಯಲ್ಲಿ ನೀಡಿದ ಭಾಷಣದಲ್ಲಿ “ಮುಖ್ಯಮಂತ್ರಿ ಸಿದ್ದರಾಮಯ್ಯ 24 ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿದ್ದಾರೆ” ಎಂದು ಆರೋಪಿಸಿದ್ದರು ಎಂದು ಹೇಳಿದರು.
2023ರ ಚುನಾವಣೆಗಳ ಸಮಯದಲ್ಲಿ ಹರೀಶ್ ಪೂಂಜಾ ತುಳು ಭಾಷೆಯಲ್ಲಿ ಮಾಡಿದ ಭಾಷಣದಲ್ಲಿ, “ಸತ್ಯಣ್ಣ, ನಿಮಗೆ ಒಂದು ಮಾತು ಹೇಳುತ್ತೇನೆ… 24 ಹಿಂದೂ ಕಾರ್ಯಕರ್ತರ ಹತ್ಯೆ ಮಾಡಿದ ಸಿದ್ದರಾಮಯ್ಯಗೆ ನೀವು ವೋಟ್ ಕೇಳುತ್ತಿದ್ದೀರಾ?” ಎಂದು ಪ್ರಶ್ನಿಸಿದ್ದರು. ಇದಲ್ಲದೆ, ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸಿ, “ಭಜರಂಗ ದಳವನ್ನು ಬ್ಯಾನ್ ಮಾಡ್ತೀನಿ ಅಂದ ಕಾಂಗ್ರೆಸ್‌ಗೆ ನೀವು ವೋಟ್ ಕೊಡ್ತಿದ್ದೀರಾ? ಬೆಳ್ತಂಗಡಿ ಜನರಿಗೆ ಯಾವ ರೀತಿ ನ್ಯಾಯ ಕೊಡ್ತೀರ?” ಎಂದು ಪ್ರಶ್ನಿಸಿದ್ದರು.
“ಹರೀಶ್ ಪೂಂಜಾ ನಮ್ಮ ಶಾಸಕರು. ಅವರು ಹೇಳಿರೋದನ್ನ ನಾವು ನಂಬ್ತೀವಿ. ಸಿದ್ದರಾಮಯ್ಯ 24 ಕೊಲೆ ಮಾಡಿದ್ದಾರೆಂದು ಹರೀಶ್ ಪೂಂಜಾ ಹೇಳಿದ್ದು ನಿಜ. ಅದನ್ನೇ ನಾನು ಹೇಳಿದ್ದೇನೆ” ಎಂದು ಮಹೇಶ್ ಶೆಟ್ಟಿ ತಿಮರೋಡಿ ತಿಳಿಸಿದ್ದರು.