ಬೀದರ್: ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಸೆಪ್ಟೆಂಬರ್ 14 ರಂದು ನಡೆದಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಪಥಸಂಚಲನಗಳಲ್ಲಿ ಸರ್ಕಾರಿ ಅಧಿಕಾರಿಗಳು ಭಾಗವಹಿಸಿದ್ದಾರೆ. ಇದು ಸರ್ಕಾರದ ಆದೇಶಗಳಿಗೆ ಸೆಡ್ಡು ಹೊಡೆದಂತಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ತೆರಿಗೆ ಇಲಾಖೆಯ GST ಸಹಾಯಕ ಆಯುಕ್ತ ಮಹೇಶ್ ಪಾಟೀಲ್‌ನಿಂದ ಹಿಡಿದು ಆಡಳಿತ ವೈದ್ಯಾಧಿಕಾರಿ ಡಾ. ನಾಗರಾಜ್‌ರವರೆಗೆ ಹಲವು ಅಧಿಕಾರಿಗಳು ಈ ರ್ಯಾಲಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಸರ್ಕಾರಿ ಶಾಲೆಯ ಶಿಕ್ಷಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (PDO) ಮತ್ತು ಕಾಂಗ್ರೆಸ್ ಕಾರ್ಯಕರ್ತರೂ ಭಾಗಿಯಾಗಿದ್ದಾರೆ.
ಸೆಪ್ಟೆಂಬರ್ 14ರಂದು ಬಸವಕಲ್ಯಾಣದಲ್ಲಿ ನಡೆದ RSS ಪಥಸಂಚಲನದಲ್ಲಿ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಮಹೇಶ್ ಪಾಟೀಲ್ ಖಾಕಿ ಶಾರ್ಟ್ಸ್ ಧರಿಸಿ, RSS ಕಾರ್ಯಕರ್ತರೊಂದಿಗೆ ರಸ್ತೆಯಲ್ಲಿ ನಡೆದಿದ್ದು ಕಂಡುಬಂದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ಲಕ್ಷಾಂತರ ವೀಕ್ಷಣೆ ಪಡೆದಿದೆ. ಮಹೇಶ್ ಪಾಟೀಲ್ ಅವರು GST ಇಲಾಖೆಯ ಹಿರಿಯ ಅಧಿಕಾರಿಯಾಗಿ, ಸರ್ಕಾರಿ ನಿಯಮಗಳನ್ನು ಜಾರಿಗೊಳಿಸುವ ಜವಾಬ್ದಾರಿ ಹೊಂದಿರುವವರು. ಆದರೆ RSS ರ್ಯಾಲಿಯಲ್ಲಿ ಭಾಗಿಯಾಗುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ‘ನಿಷೇಧದ ಆದೇಶ’ಕ್ಕೆ ವಿರುದ್ಧವಾಗಿದೆ.
ಕಲಬುರಗಿಯಲ್ಲಿ ವೈದ್ಯಾಧಿಕಾರಿಯ RSS ರ್ಯಾಲಿಯಲ್ಲಿ ಭಾಗಿ
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿ ಕೂಡ ಇದೇ ರೀತಿಯ ಘಟನೆ ಸಂಭವಿಸಿದೆ. ಅ.19ರಂದು ನಡೆದ RSS ಪಥಸಂಚಲನದಲ್ಲಿ ಆಡಳಿತ ವೈದ್ಯಾಧಿಕಾರಿ ಡಾ. ನಾಗರಾಜ್ ಭಾಗವಹಿಸಿದ್ದಾರೆ. ಈ ವಿಡಿಯೋಯೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಡಾ. ನಾಗರಾಜ್ ಅವರು ಸೇಡಂ ಆರೋಗ್ಯ ಇಲಾಖೆಯ ಮುಖ್ಯ ಅಧಿಕಾರಿಯಾಗಿ, ರೋಗಿಗಳ ಸೇವೆಗೆ ಮಾತ್ರ ಗಮನ ಹರಿಸಬೇಕಾದವರು. ಆದರೂ RSS ರ್ಯಾಲಿಯಲ್ಲಿ ಭಾಗಿಯಾಗಿದ್ದು ರಾಜ್ಯ ಸರ್ಕಾರಗಳ ‘ನಿಷೇಧದ ಆದೇಶ’ಕ್ಕೆ ವಿರುದ್ಧವಾಗಿದೆ.





