ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಮುಕಳೆಪ್ಪ ಮತ್ತು ಗಾಯತ್ರಿ ಸಂಬಂಧಿತ ವೀಡಿಯೊ ಬಿಡುಗಡೆಯಾದ ಬೆನ್ನಲ್ಲೇ ತೀವ್ರ ವಿವಾದ ಸೃಷ್ಠಿಯಾಗಿತ್ತು. ಈ ವೀಡಿಯೊದಲ್ಲಿ ಗಾಯತ್ರಿಯ ತಾಯಿ ಶಿವಕ್ಕ, ತಮ್ಮ ಮಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತಾಯಿಯ ಹೇಳಿಕೆಯ ಪ್ರಕಾರ, ಗಾಯತ್ರಿಯನ್ನು ಮುಕಳೆಪ್ಪನೊಂದಿಗಿನ ಸಂಬಂಧದಲ್ಲಿ “ಲವ್ ಜಿಹಾದ್”ಗೆ ಒಳಪಡಿಸಲಾಗಿದೆ ಎಂದು ಆರೋಪಿಸಿದ್ದಾರೆ. ಆದರೆಮುಖಳೆಪ್ಪ ಅಲಿಯಾಸ್ ಕ್ವಾಜಾ ಈ ಆರೋಪವನ್ನು ತಳ್ಳಿಹಾಕಿದ್ದು, ತಾವು ಯಾವುದೇ ಧಾರ್ಮಿಕ ಬದಲಾವಣೆಗೆ ಒತ್ತಾಯಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಗಾಯತ್ರಿಯ ತಾಯಿ ಶಿವಕ್ಕ ಅವರ ಹೇಳಿಕೆಯು ತೀವ್ರ ಆಕ್ರೋಶದಿಂದ ಕೂಡಿದೆ. “ನಾವು ಇಷ್ಟು ದಿನ ಗಾಯತ್ರಿಯನ್ನು ಹೆತ್ತು, ಹೊತ್ತು, ಸಾಕಿದೆವು. ಆದರೆ, ಇವರ ಜೊತೆ ಭೇಟಿಯಾದಾಗ ಆಕೆಯ ಕೊರಳಲ್ಲಿ ತಾಳಿ ಇರಲಿಲ್ಲ, ಹಣೆಯಲ್ಲಿ ಕುಂಕುಮ ಇರಲಿಲ್ಲ. ಕೈಗೆ ಮೆಹಂದಿ ಹಚ್ಚಿದ್ದರೂ, ಅದು ಅವರ ಭಾಷೆಯಲ್ಲಿತ್ತು” ಎಂದು ಶಿವಕ್ಕ ಆರೋಪಿಸಿದ್ದಾರೆ. ಈ ಹೇಳಿಕೆಯು ಗಾಯತ್ರಿಯ ಸಾಂಪ್ರದಾಯಿಕ ಗುರುತುಗಳ ಬದಲಾವಣೆಯನ್ನು ಸೂಚಿಸುತ್ತದೆ ಎಂದು ತಾಯಿ ಶಂಕಿಸಿದ್ದಾರೆ. “ನಮಗೆ ಸಂಕಟವಾಗುತ್ತಿದೆ. ಯಾವ ರೀತಿಯಲ್ಲಿ ಮಾತನಾಡುತ್ತಾಳೆ ಎಂದರೆ, ಇದು ಮುಕಳೆಪ್ಪನಿಂದ ಬಂದಿರುವ ಪ್ರಭಾವ,” ಎಂದು ಶಿವಕ್ಕ ಭಾವುಕರಾಗಿ ಹೇಳಿದ್ದಾರೆ. ತಮ್ಮ ಮಗಳನ್ನು ಬಿಟ್ಟುಬಿಡುವಂತೆ ಕ್ವಾಜಾನಿಗೆ ಒತ್ತಾಯಿಸಿರುವ ಶಿವಕ್ಕ, “ಇಲ್ಲದಿದ್ದರೆ ಏನಾಗುತ್ತದೆಯೋ ದೇವರಿಗೆ ಗೊತ್ತು,” ಎಂದು ಎಚ್ಚರಿಕೆಯ ಸ್ವರದಲ್ಲಿ ಹೇಳಿದ್ದಾರೆ.
ಗಾಯತ್ರಿಯ ಕುಟುಂಬವು ಈ ಸಂಬಂಧವನ್ನು ವಿರೋಧಿಸುತ್ತಿದೆ ಎಂಬುದು ಸ್ಪಷ್ಟವಾಗಿದ್ದು, ಶಿವಕ್ಕನವರ ಆರೋಪಗಳು ಧಾರ್ಮಿಕ ಮತ್ತು ಸಾಂಸ್ಕೃತಿಕ ಭಿನ್ನತೆಗಳ ಕುರಿತಾದ ಆತಂಕವನ್ನು ಪ್ರತಿಬಿಂಬಿಸುತ್ತವೆ. “ನಮ್ಮ ಮಗಳನ್ನು ನಾವು ಸಾಂಪ್ರದಾಯಿಕ ರೀತಿಯಲ್ಲಿ ಸಾಕಿದ್ದೇವೆ. ಆದರೆ, ಈಗ ಆಕೆಯ ವರ್ತನೆ, ಆಕೆಯ ಧರ್ಮದ ಗುರುತುಗಳ ಬದಲಾವಣೆಯಿಂದ ನಾವು ಆಘಾತಗೊಂಡಿದ್ದೇವೆ,” ಎಂದು ಶಿವಕ್ಕ ತಿಳಿಸಿದ್ದಾರೆ. ಈ ಆರೋಪಗಳು ಸಮಾಜದಲ್ಲಿ “ಲವ್ ಜಿಹಾದ್” ಕುರಿತಾದ ಸೂಕ್ಷ್ಮವಾದ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿವೆ. .





