ಬೆಂಗಳೂರಿನ ಸ್ಪಾ ಮೇಲೆ ಸಿಸಿಬಿ ದಾಳಿ: ಬಾಂಗ್ಲಾದೇಶದ ಯುವತಿ ರಕ್ಷಣೆ

Untitled design 2025 06 19t222028.827

ಬೆಂಗಳೂರು: ಬೆಂಗಳೂರಿನಲ್ಲ ಸ್ಪಾ ಮತ್ತು ಮಸಾಜ್ ಪಾರ್ಲರ್‌ಗಳ ಹೆಸರಿನಲ್ಲಿ ಅಕ್ರಮ ವೇಶ್ಯಾವಾಟಿಕೆ ನಡೆಸುತ್ತಿರುವವರ ಮೇಲೆ ಪೊಲೀಸರು ದಾಳಿ ನಡೆಸುತ್ತಿದ್ದಾರೆ. ಸಿಟಿ ಕ್ರೈಮ್ ಬ್ಯೂರೋ ಪೊಲೀಸರು ರಿಚರ್ಡ್ ಟೌನ್ ನಲ್ಲಿರುವ “ಪಿಕ್ಸಸ್ ಸ್ಪಾ” ಮೇಲೆ ದಾಳಿ ನಡೆಸಿ, ಬಾಂಗ್ಲಾದೇಶದ ಒಬ್ಬ ಯುವತಿಯನ್ನು ರಕ್ಷಿಸಿದ್ದಾರೆ.

ರಿಚ್ಮಂಡ್ ಟೌನ್‌ನಲ್ಲಿ ದಾಳಿ

ರಿಚ್ಮಂಡ್ ಟೌನ್‌ನಲ್ಲಿರುವ ಪಿಕ್ಸಸ್ ಸ್ಪಾ ಕೇಂದ್ರದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಸಿಸಿಬಿಗೆ ಗುಪ್ತ ಮಾಹಿತಿ ಲಭಿಸಿತ್ತು. ಈ ಮಾಹಿತಿಯ ಆಧಾರದ ಮೇಲೆ ಸಿಸಿಬಿ ತಂಡವು ಯೋಜಿತ ಕಾರ್ಯಾಚರಣೆ ನಡೆಸಿ ಸ್ಪಾ ಕೇಂದ್ರದ ಮೇಲೆ ದಾಳಿ ಮಾಡಿತ್ತು. ಈ ದಾಳಿಯ ವೇಳೆ ಬಾಂಗ್ಲಾದೇಶದ ಜಯಶೋರ್ ಜಿಲ್ಲೆಯ ಕುಲ್ನಾ ಪ್ರದೇಶದ ಯುವತಿಯೊಬ್ಬಳು ಪತ್ತೆಯಾದಳು. ಈ ಯುವತಿಯನ್ನು ಈ ಅಕ್ರಮ ದಂಧೆಯಲ್ಲಿ ಬಲವಂತವಾಗಿ ತೊಡಗಿಸಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಆಕೆಯನ್ನು ರಕ್ಷಿಸಿದ್ದಾರೆ.

ADVERTISEMENT
ADVERTISEMENT

ಸಿಸಿಬಿ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಈ ದಂಧೆಯಲ್ಲಿ ಭಾಗಿಯಾದವರನ್ನು ಗುರುತಿಸಲು ತೀವ್ರ ತನಿಖೆ ನಡೆಸುತ್ತಿದ್ದಾರೆ. ಸ್ಪಾ ಕೇಂದ್ರದ ಮಾಲೀಕರು, ನಿರ್ವಾಹಕರು ಹಾಗೂ ಇತರ ಶಂಕಿತರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಸ್ಪಾ ಕೇಂದ್ರಗಳ ಮೇಲೆ ಸತತ ದಾಳಿ

ಬೆಂಗಳೂರಿನಲ್ಲಿ ಸ್ಪಾ ಕೇಂದ್ರಗಳ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುವವರ ವಿರುದ್ಧ ಸಿಸಿಬಿ ಹಿಂದೆಯೂ ಹಲವಾರು ದಾಳಿಗಳನ್ನು ನಡೆಸಿದೆ. ಈ ದಾಳಿಗಳಲ್ಲಿ ಸಾಕಷ್ಟು ಯುವತಿಯರನ್ನು ರಕ್ಷಿಸಲಾಗಿದ್ದು, ದಂಧೆಯಲ್ಲಿ ತೊಡಗಿದ್ದವರನ್ನು ಬಂಧಿಸಲಾಗಿದೆ.

Exit mobile version