ವಿಜಯೇಂದ್ರ, ಯಡಿಯೂರಪ್ಪ ವಿರುದ್ಧ ಗುಡುಗುತ್ತಿದ್ದ ಯತ್ನಾಳ್ ಗೆ ಹೈಕಮಾಂಡ್ ಶಾಕ್ ಕೊಟ್ಟಿದೆ. ಬಿಜೆಪಿಯಿಂದ ಯತ್ನಾಳ್ ಉಚ್ಛಾಟಿಸಿ ವರಿಷ್ಠರು ಶಿಸ್ತು ಕ್ರಮವನ್ನೇನೋ ತೆಗೆದುಕೊಂಡಿದ್ದಾರೆ. ಆದ್ರೆ, ಯತ್ನಾಳ ಮೇಲಿನ ಶಿಸ್ತು ಕ್ರಮದ ವಿರುದ್ಧ ರಾಜ್ಯಾಧ್ಯಂತ ಹೋರಾಟ ಶುರುವಾಗಿದೆ. ಯತ್ನಾಳ್ ಪರ ಹಿಂದೂಪರ ಸಂಘಟನೆಳು ಒಂದಾಗಿ ಹೋರಾಟಕ್ಕಿಳಿದಿವೆ. ಇತ್ತ ಯತ್ನಾಳ್ ಘರವಾಪ್ಸಿಗೆ ರೆಬೆಲ್ ನಾಯಕರ ಪಣ ತೊಟ್ಟಿದ್ದು, ಶೀಘ್ರದಲ್ಲೇ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಮನವೊಲಿಸುವ ಚಿಂತನೆ ನಡೆಸಿದ್ದಾರೆ.
ವಿಜಯೇಂದ್ರ ವಿರುದ್ಧ ಗುಡುಗುವ ಮೂಲಕ ಯತ್ನಾಳ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ರಾಜ್ಯದಲ್ಲಿ ಬಿಜೆಪಿಯ ರೆಬೆಲ್ ನಾಯಕನಾಗಿ ಗುರುತಿಸಿಕೊಂಡಿದ್ದ ಯತ್ನಾಳ ಮೇಲೆ ಹೈಕಮಾಂಡ್ ನಾಯಕರೇನೋ ಶಿಸ್ತು ಕ್ರಮ ತೆಗೆದುಕೊಂಡಿದ್ದಾರೆ. ಆದ್ರೆ ಯತ್ನಾಳ ಹೈಕಮಾಂಡ್ ನಾಯಕರ ಶಿಸ್ತು ಕ್ರಮದ ನಂತರವೂ ಸುಮ್ಮನಾಗಿಲ್ಲ. ನಿತ್ಯ ವಿಜಯೇಂದ್ರ, ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ನಾನು ಪಕ್ಷ ಬಿಟ್ಟಿಲ್ಲ ಅಪ್ಪ ಮಕ್ಕಳು ನನ್ನನ್ನ ಪಕ್ಷದಿಂದ ಹೊರಹಾಕಿದ್ದಾರೆ. ವಿಜಯೇಂದ್ರಗೆ ತಾಕತ್ ಇದ್ದರೆ, ಚುನಾವಣೆಗೆ ಬರಲಿ ಎಂದು ಓಪನ್ ಚಾಲೇಂಜ್ ಹಾಕಿದ್ದಾರೆ. ಅಲ್ಲದೇ ಬಿಜೆಪಿ ಪಕ್ಷದ ಚಿನ್ಹೆಯಡಿ ನೀನು ಸ್ಪರ್ಧೆ ಮಾಡು, ನಾನು ಭಗವಾ ಧ್ವಜದಡಿ ಸ್ಪರ್ಧೆ ಮಾಡುತ್ತೇನೆ ಎಂದು ವಿಜಯೇಂದ್ರ ವಿರುದ್ಧ ಮತ್ತೆ ಯತ್ನಾಳ್ ಗುಡುಗಿದ್ದಾರೆ.
ಬಿಜೆಪಿಯ ರೆಬೆಲ್ ನಾಯಕರಿಂದ ಕೂಡ ಯತ್ನಾಳ್ ಘರವಾಪ್ಸಿ ಪ್ರಯತ್ನ ಜೋರಾಗಿಯೇ ನಡೆಯುತ್ತಿದೆ. ಶಾಸಕ ರಮೇಶ್ ಜಾರಕಿಹೊಳಿ ಈಗಾಗಲೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಜೊತೆಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೇ ಮುಂದಿನ ವಾರ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಭೇಟಿಗೆ ಅವಕಾಶವನ್ನ ಕೇಳಿದ್ದಾರೆ. ಯತ್ನಾಳ ಮೇಲೆ ಕೈಗೊಂಡಿರೋ ಶಿಸ್ತು ಕ್ರಮವನ್ನಯ ಮರು ಪರಿಶೀಲನೆ ಮಾಡಬೇಕು ಅಂತ ಮನವಿ ಮಾಡಲು ಚಿಂತನೆ ನಡೆಸಿದ್ದಾರೆ. ಇದರ ನಡುವೆ ಬಿಜೆಪಿ ಹೈಕಮಾಂಡ್ ತೆಗೆದುಕೊಂಡ ಶಿಸ್ತು ಕ್ರಮದ ವಿರುದ್ಧ ರಾಜ್ಯಾದಲ್ಲಿ ಯತ್ನಾಳ ಪರ ಹೋರಾಟಗಳು ಜೋರಾಗಿವೆ. ಬಸನಗೌಡ ಪಾಟೀಲ್ ಯತ್ನಾಳ್ ಅವರಿಲ್ಲದೇ ಬಿಜೆಪಿ ಪಕ್ಷವಿಲ್ಲ. ಹೈಕಮಾಂಡ್ ನಾಯಕರು ಉಚ್ಛಾಟನೆಯನ್ನ ಮರು ಪರಿಶೀಲನೆ ನಡೆಸಬೇಕು. ಬಿಜೆಪಿಗೆ ಯತ್ನಾಳ ವಾಪಸ್ ಕರೆತರಬೇಕು ಅಂತ ಒತ್ತಾಯಿಸಿದ್ದಾರೆ.
ವಿಜಯೇಂದ್ರ ವಿರೋಧಿ ಹೇಳಿಕೆಗಳು ಯತ್ನಾಳಗೆ ದಿನದಿಂದಿ ದಿನಕ್ಕೆ ಮುಳ್ಳಾಗುತ್ತಲೇ ಇವೆ. ಬಿಜೆಪಿ ಪಕ್ಷದಿಂದ ಆರು ವರ್ಷ ಉಚ್ಛಾಟನೆಗೊಂಡ ಬಳಿಕ ಯತ್ನಾಳ ದಿನಕೊಂದು ಹೇಳಿಕೆ ನೀಡ್ತಿದ್ದಾರೆ. ಹೊಸ ಪಕ್ಷ ಕಟ್ತಿನಿ ಎಂದಿದ್ದ ಯತ್ನಾಳ್ ಇದೀಗ ವಿಜಯೇಂದ್ರಗೆ ಚುನಾವಣೆಯ ಸವಾಲ್ ಎಸೆದಿದ್ದಾರೆ. ರೆಬೆಲ್ ನಾಯಕರು ದೆಹಲಿ ಭೇಟಿಯ ವೇಳೆ ಎಲ್ಲ ಅಂಶಗಳನ್ನ ಹೈಕಮಾಂಡ್ ಗಣನೆಗೆ ತೆಗೆದುಕೊಳ್ಳತ್ತಾ? ಯತ್ನಾಳ ಪರ ನಿಲ್ಲುವವರ ಮೇಲೂ ಕ್ರಮ ಕೈಗೊಂಡು ಶಾಕ್ ಕೊಡತ್ತಾ ಕಾದುನೋಡೋಣ.